Advertisement

ಮತ್ತೆ 30 ಜನರಿಗೆ ಕೋವಿಡ್ ಸೋಂಕು

09:17 AM Jul 21, 2020 | Suhan S |

ಗದಗ: ಜಿಲ್ಲೆಯಲ್ಲಿ ಸೋಮವಾರ 30 ಜನರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 613ಕ್ಕೆ ಏರಿಕೆಯಾಗಿದೆ. 590 ಜನರ ವರದಿ ಬರುವುದು ಬಾಕಿಯಿದ್ದು, 373 ಸಕ್ರಿಯ ಪ್ರಕರಣಗಳಿವೆ.

Advertisement

ಸೋಂಕಿನ ಪತ್ತೆ ಕಾರ್ಯ: ತಾಲೂಕಿನ ಮಲ್ಲಸಮುದ್ರ ನಿವಾಸಿ 46 ವರ್ಷದ ಪುರುಷ(ಜಿಡಿಜಿ-498), 45 ವರ್ಷದ ಮಹಿಳೆ ( ಜಿ ಡಿ ಜಿ – 6 1 9 ) , ಹುಲಕೋಟಿ ಗ್ರಾಮದ ನಿವಾಸಿ 41 ವರ್ಷದ ಪುರುಷ (ಜಿಡಿಜಿ-585), ಜಿಮ್ಸ್‌ ಕ್ವಾಟರ್ಸ್‌ ನಿವಾಸಿ 80 ವರ್ಷದ ಪುರುಷ (ಜಿಡಿಜಿ-620), 60 ವರ್ಷದ ಮಹಿಳೆ (ಜಿಡಿಜಿ-621), ನರಗುಂದ ವಿನಾಯಕ ನಗರ ನಿವಾಸಿ 24 ವರ್ಷದ ಮಹಿಳೆ (ಜಿಡಿಜಿ-637) ಸೋಂಕು ಕಂಡುಬಂದಿದ್ದು, ಪತ್ತೆ ಕಾರ್ಯ ನಡೆದಿದೆ.

ಕೆಮ್ಮು-ಜ್ವರದಿಂದ ಸೋಂಕು: ನರಗುಂದದ ಗಾಡೋ ಓಣಿ ನಿವಾಸಿ 28 ವರ್ಷದ ಪುರುಷ (ಜಿಡಿಜಿ-617), ಗದಗ ನಗರದ ಜವಳ ಗಲ್ಲಿ ನಿವಾಸಿ 42 ವರ್ಷದ ಮಹಿಳೆ (ಜಿಡಿಜಿ-618), ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 51 ವರ್ಷದ ಪುರುಷ (ಜಿಡಿಜಿ-622), 46 ವರ್ಷದ ಮಹಿಳೆ (ಜಿಡಿಜಿ-623), ಬೆಟಗೇರಿಯ ಶಿವಾಜಿನಗರ ನಿವಾಸಿ 42 ವರ್ಷದ ಪುರುಷ (ಜಿಡಿಜಿ-628), ಬೆಟಗೇರಿಯ ಹೆಲ್ತ್‌ಕ್ಯಾಂಪ್‌ ನಿವಾಸಿ 60 ವರ್ಷದ ಮಹಿಳೆ (ಜಿಡಿಜಿ-631), ಹಿರೇಹಾಳ ನಿವಾಸಿ 38 ವರ್ಷದ ಪುರುಷ (ಜಿಡಿಜಿ-633), ಗದಗ ನಗರದ ಹುಡ್ಕೊà ಕಾಲೋನಿ 35 ವರ್ಷದ ಪುರುಷ (ಜಿಡಿಜಿ-639), 33 ವರ್ಷದ ಮಹಿಳೆ (ಜಿಡಿಜಿ-640), 8 ವರ್ಷದ ಬಾಲಕಿ (ಜಿಡಿಜಿ-641), 53 ವರ್ಷದ ಮಹಿಳೆ (ಜಿಡಿಜಿ-642), ಮಳವಾಡ ಗ್ರಾಮದ 32 ವರ್ಷದ ಪುರುಷ (ಜಿಡಿಜಿ-643), ಗದಗ ನಗರದ ರಾಜೀವ್‌ ಗಾಂಧಿ ನಗರ ನಿವಾಸಿ 42 ವರ್ಷದ ಮಹಿಳೆ (ಜಿಡಿಜಿ-644) ಹಾಗೂ ಉಸಿರಾಟದ ತೊಂದರೆಯಿಂದ ಗದಗ ನಗರದ ರೆಹಮಾನಿ ಮಜೀದ್‌ಹತ್ತಿರ ನಿವಾಸಿ 40 ವರ್ಷದ ಪುರುಷ (ಜಿಡಿಜಿ-635) ಸೋಂಕು ಇರುವುದು ಖಚಿತವಾಗಿದೆ.

ಪ್ರಯಾಣದಿಂದ ಸೋಂಕು: ಪ್ರಯಾಣದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ನಿವಾಸಿ 22 ವರ್ಷದ ಪುರುಷ (ಜಿಡಿಜಿ-624), ಅಂತಾರಾಜ್ಯ ಪ್ರಯಾಣ ಹಿನ್ನೆಲೆಯಲ್ಲಿ ಹಾತಲಗೇರಿ ನಾಕಾ ನಿವಾಸಿ 24 ವರ್ಷದ ಪುರುಷ (ಜಿಡಿಜಿ-626), ರಾಜೂರು ನಿವಾಸಿ 40 ವರ್ಷದ ಪುರುಷ (ಜಿಡಿಜಿ-634) ಕೊರೊನಾ ವೈರಸ್‌ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next