Advertisement

ಕೋವಿಡ್ ಸೋಂಕು ಮುಕ್ತ ಗ್ರಾಪಂಗೆ ಸಂಕಲ್ಪ: ಪ್ರಿಯಾಂಕ

02:16 PM Jun 01, 2021 | Team Udayavani |

ಜಾವಗಲ್‌: ಜಾವಗಲ್‌ ಗ್ರಾಮ ಪಂಚಾಯಿತಿಯನ್ನು ಕೋವಿಡ್ ಮುಕ್ತ ಗ್ರಾಪಂ ಆಗಿ ಮಾಡಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. ಗ್ರಾಪಂಸಾಮಾನ್ಯ ಸಭೆಯು ಅಧ್ಯಕ್ಷೆ ಪ್ರಿಯಾಂಕ ಚೇತನ್‌ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಕೋವಿಡ್‌ 2ನೇ ಅಲೆಯು ಗ್ರಾಮಾಂತರ ಪ್ರದೇಶಗಳಲ್ಲಿ ದಿನೇ ದಿನೆಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಪಂನ ಪ್ರತಿ ವಾರ್ಡ್‌ ಸದಸ್ಯರು ತಮ್ಮ ವಾರ್ಡ್‌ನ ಕಾರ್ಯ ಪಡೆಯ ಮುಖ್ಯಸ್ಥರಾಗಿ ಸೋಂಕು ಹರಡದಂತೆ ಅಗತ್ಯ ಕ್ರಮ ವಹಿಸುವುದು ಸಾರ್ವಜನಿಕರಲ್ಲಿ ಕೋವಿಡ್‌ -19ರ ಬಗ್ಗೆ ಅರಿವು ಮೂಡಿಸಿ ಸೋಂಕು ನಿಯಂತ್ರಿಸುವಲ್ಲಿ ಮುಂಜಾಗ್ರತೆಕ್ರಮಗಳನ್ನು ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.

ಪ್ರತಿ ಮನೆಯ ಸುತ್ತಲು ಸ್ಯಾನಿಟೈಸ್‌ ಮಾಡಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಮತ್ತು ಅಂಗನ ವಾಡಿ ಕಾರ್ಯಕರ್ತೆಯರು, ಕಂದಾಯ ಇಲಾಖೆ ನೆರವಿನೊಂದಿಗೆ ಮನೆ ಮನೆಗೆ ಭೇಟಿ ನೀಡಿ ಸೋಂಕಿತರ ಪತ್ತೆ ಮಾಡುವ ಕ್ರಮ ಕೈಗೊಳ್ಳುವುದು, ಈ ಸ್ವತ್ತು, ಖಾತೆಬದಲಾವಣೆ ಮತ್ತಿತರ ಕೆಲಸ ಕಾರ್ಯಗಳಬಗ್ಗೆ ವಿನಃ ಕಾರಣ ಕಚೇರಿಗೆ ಬರುವುದನ್ನು ತಗ್ಗಿಸಬೇಕು. ಎಲ್ಲರು ಸಮನ್ವಯತೆಹಾಗೂಸೌಹಾರ್ದತೆಮನೋಭಾವದಿಂದ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿಕೆಲಸ ಮಾಡುವಂತೆ ನಿರ್ಣಯಕ್ಕೆ ಬರಲಾಯಿತು ಎಂದು ಪಿಡಿಒ ರವಿ ಸುದ್ದಿಗಾರರಿಗೆ ತಿಳಿಸಿದರು.

ಗ್ರಾಪಂನಸುಗಮಕಾರ್ಯನಿರ್ವಹಣೆ ಸಲುವಾಗಿ ಸ್ಥಾಯಿ ಸಮಿತಿ ಸೇರಿದಂತೆ ಇದರ ಉಪ ಸಮಿತಿಗಳನ್ನು ರಚಿಸಲಾಯಿತು. ಗ್ರಾಪಂ ಸಿಬ್ಬಂದಿಯ 2 ತಿಂಗಳ ವೇತನ ಪಾವತಿ ಮಾಡಿದ್ದು, ಉಳಿದವೇತನ ತ್ವರಿತವಾಗಿ ಪಾವತಿ ಮಾಡುವುದಾಗಿ ತಿಳಿಸಿದರು. ಉಪಾಧ್ಯಕ್ಷೆ ಶೀಲಾ, ಸದಸ್ಯರು,ಕಾರ್ಯದರ್ಶಿ, ಲೆಕ್ಕಸಹಾಯಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next