Advertisement

ಒಬ್ಬ ಸೋಂಕಿತ, ಆರೈಕೆಗೆ ಆರು ಜನ ಸಿಬ್ಬಂದಿ

11:30 AM Jun 20, 2021 | Team Udayavani |

ಕುಷ್ಟಗಿ: ಇಲ್ಲಿನ ಗಜೇಂದ್ರಗಡ ರಸ್ತೆಯಲ್ಲಿರುವ ಡಿ. ದೇವರಾಜ್‌ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ವಸತಿ ನಿಲಯದ 100 ಬೆಡ್‌ ಕೋವಿಡ್‌ ಕಾಳಜಿ ಕೇಂದ್ರದಲ್ಲಿ ಕೇವಲ ಒಬ್ಬ ಕೊರೊನಾ ಸೋಂಕಿತನ ಆರೈಕೆಗಾಗಿ 6 ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ. ತಾಲೂಕಿನಲ್ಲಿ ಕೊರೊನಾ ಹಾವಳಿ ತಗ್ಗಿದ್ದು, ಶನಿವಾರ 4 ಜನರಿಗೆ ಸೋಂಕು ದೃಢವಾಗಿದೆ.

Advertisement

ತಾಲೂಕಿನ 6 ಕೋವಿಡ್‌ ಕಾಳಜಿ ಕೇಂದ್ರಗಳ ಪೈಕಿ ಸೋಂಕಿತರಿಲ್ಲ ಕಾರಣದಿಂದ ಈಗಾಗಲೇ 4 ಕೋವಿಡ್‌ ಕಾಳಜಿ ಕೇಂದ್ರಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. ಕುಷ್ಟಗಿಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಡೆಡಿಕೇಟ್‌ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 5 ಜನ, ಹನುಮಸಾಗರ ಕಾಳಜಿ ಕೇಂದ್ರದಲ್ಲಿ 6 ಜನ ದಾಖಲಾಗಿದ್ದಾರೆ. ಕುಷ್ಟಗಿ ಕಾಳಜಿ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ಒಬ್ಬ ಸೋಂಕಿತನಿದ್ದು, ನಾಲ್ವರು ಆರೋಗ್ಯ ಇಲಾಖೆ ಸಿಬ್ಬಂದಿ, ಇಬ್ಬರು ಗೃಹರಕ್ಷಕರು ಪಾಳೆ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕುರಿತು ತಹಶೀಲ್ದಾರ್‌ ಎಂ. ಸಿದ್ದೇಶ ಪ್ರತಿಕ್ರಿಯಿಸಿ, ತಾಲೂಕಿನಲ್ಲಿರುವ ಕೋವಿಡ್‌ ಕಾಳಜಿ ಕೇಂದ್ರಗಳನ್ನು ಡಿಸಿ ಆದೇಶ ನೀಡುವವರೆಗೂ ಸ್ಥಗಿತಗೊಳಿಸುವುದಿಲ್ಲ. ಎಲ್ಲವೂ ಚಾಲ್ತಿಯಲ್ಲಿದ್ದು, ಕೊರೊನಾ ಸೋಂಕು ಪ್ರಕರಣ ದೃಢವಾದರೆ ದಾಖಲಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next