Advertisement
ಹಿಂದೆ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಿತ್ತು. ನಂತರ ದಿನಗಳಲ್ಲಿಕಾನ್ವೆಂಟ್ ಹಾಗೂ ಖಾಸಗಿ ಶಾಲೆಗಳ ಹಾವಳಿ ಯಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗಿ ಎಷ್ಟೋ ಶಾಲೆಗಳು ಮುಚ್ಚಿದ್ದವು. ಕೆಲವು ಮುಚ್ಚುವ ಹಂತ ತಲುಪಿದ್ದವು. ಆದರೆ, ಕೋವಿಡ್ ದಿಂದ ಈ ವರ್ಷ ಮತ್ತೆ ಸರ್ಕಾರಿ ಶಾಲೆಗಳು ತಮ್ಮ ಹಿಂದಿನ ದಿನಗಳಿಗೆ ಮರಳುವಂತೆ ಮಾಡಿದ್ದು, ದಾಖಲಾತಿಯೂ ಹೆಚ್ಚಾಗಿದೆ.
Related Articles
Advertisement
ದಾಖಲಾತಿಗೆ ಪೋಷಕರ ಹಿಂದೇಟು: ಕೋವಿಡ್ ಭಯದಿಂದ ಇನ್ನೂ ಎಷ್ಟೋ ಮಕ್ಕಳು ಶಾಲೆಗೆ ದಾಖಲಾತಿಯಾಗಿಲ್ಲ. ಪೋಷಕರು ಸಹ ಈ ವರ್ಷ ಮುಗಿದರೂ ಪರವಾಗಿಲ್ಲ. ಮಕ್ಕಳ ಆರೋಗ್ಯ ಮುಖ್ಯ ಎಂಬ ನಿಟ್ಟಿನಲ್ಲಿ ದಾಖಲಾತಿಗೆ ಮುಂದಾಗಿಲ್ಲ. ಆದ್ದರಿಂದ ಕಳೆದ ವರ್ಷಕ್ಕಿಂತ ಈ ವರ್ಷ ದಾಖಲಾತಿ ಕಡಿಮೆಯಾಗಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 20585 ಮಕ್ಕಳು ದಾಖಲಾಗಿದ್ದರು. ಆದರೆ, ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 16311 ಮಕ್ಕಳು ಮಾತ್ರ ದಾಖಲಾಗಿದ್ದು, 4274 ಮಕ್ಕಳು ಇನ್ನೂ ದಾಖಲಾಗಿಲ್ಲ.
ಪುನರಾಂಭಗೊಂಡ 11 ಶಾಲೆಗಳು :ಸಂಕಷ್ಟದಲ್ಲಿ ಖಾಸಗಿ ಶಾಲೆಗಳು : ದಾಖಲಾತಿ ಕುಸಿತದಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಿರುವ ದಾಖಲಾತಿ ಮಾಡಿಕೊಳ್ಳಲು ಪೋಷಕರು ಮುಂದಾಗದ ಹಿನ್ನೆಲೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಕೋವಿಡ್ ದಿಂದ ಉಂಟಾದ ಆರ್ಥಿಕ ಸಂಕಷ್ಟವೇ ದಾಖಲಾತಿ ಕುಸಿತಕ್ಕೆ ಕಾರಣ. ಖಾಸಗಿ ಶಾಲೆ ಶಿಕ್ಷಕರು ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಶಾಲೆ ಆಡಳಿತ ಮಂಡಳಿಯವರು ಶಾಲೆಗಳನ್ನು ನಡೆಸಲು ಕಟ್ಟಡ, ವಾಹನ ಸೇರಿದಂತೆ ವಿವಿಧ ರೀತಿಯ ಸಾಲದ ಸುಳಿಗೆ ಸಿಲುಕಿದ್ದಾರೆ. ಮಕ್ಕಳದಾಖಲಾತಿ ಕೊರತೆಯಿಂದ ಮುಚ್ಚಿದ್ದ 11 ಶಾಲೆಗಳುಮತ್ತೆಪ್ರಾರಂಭಗೊಂಡಿರುವುದು ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೂ ಅನುಕೂಲವಾಗಿದೆ. 11 ಶಾಲೆಗಳಿಗೆ ಒಟ್ಟು 171 ಮಕ್ಕಳು ದಾಖಲಾಗಿದ್ದಾರೆ. ಮಂಡ್ಯ ಉತ್ತರ ವಲಯದ ನಲ್ಲಹಳ್ಳಿ, ನಾಗಮಂಗಲ ತಾಲೂಕಿನ ಕಬ್ಬಿನಕೆರೆ, ಚೊಟ್ಟನ ಹಳ್ಳಿ, ಗೂಡೇಹೊಸಹಳ್ಳಿ, ಮಳವಳ್ಳಿ ತಾಲೂಕಿನ ಲಿಂಗಾಪುರ, ವಳಗೆರೆದೊಡ್ಡಿ, ಮೇಗಳಾಪುರ, ಐನೋರದೊಡ್ಡಿ, ಹುಚ್ಚನದೊಡ್ಡಿ, ಬುಳ್ಳಿಕೆಂಪನದೊಡ್ಡಿ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ವಡೆಯಾಂಡಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ನಡೆದಿದೆ.ಆದರೆ,ಕೊರೊನಾದಿಂದ ಸರ್ಕಾರಇನ್ನೂ ಶಾಲೆಪ್ರಾರಂಭಿಸಲು ಮುಂದಾಗಿಲ್ಲ.
ವಿದ್ಯಾಗಮ ಯೋಜನೆಯಡಿ ಶಿಕ್ಷಕರೇ ಮಕ್ಕಳ ಮನೆಗಳಿಗೆ ತೆರಳಿ ಪಾಠ ಮಾಡಿದ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಕಾರಣವಾಗಿದೆ. ಖಾಸಗಿ ಶಾಲೆಗಳು ಆನ್‌ಲೈನ್‌ಗೆ ಒತ್ತು ನೀಡಿದರು.ಆನ್‌ಲೈನ್‌ಗೂ ಹಾಗೂ ಮಕ್ಕಳ ಬಳಿಗೆ ಹೋಗಿ ಪಾಠ ಮಾಡುವುದಕ್ಕೂ ವ್ಯತ್ಯಾಸವಿದೆ. ಇದಕ್ಕೆ ಮಕ್ಕಳು ಹಾಗೂ ಪೋಷಕರು ಆಕರ್ಷಣೆಗೊಂಡು ಸರ್ಕಾರಿ ಶಾಲೆಗಳಿಗೆ ದಾಖಲಾಗಿದ್ದಾರೆ.ಈಗ ನಮ್ಮ ಮುಂದೆ ಸವಾಲಿದ್ದು, ಉತ್ತಮ ಗುಣಮಟ್ಟದ ಶಿಕ್ಷಣನೀಡಿ ಅವರನ್ನು ಸರ್ಕಾರಿ ಶಾಲೆಯಲ್ಲಿಯೇ ಉಳಿಸಿಕೊಳ್ಳುತ್ತೇವೆ. –ಆರ್.ರಘುನಂದನ್, ಡಿಡಿಪಿಐ, ಮಂಡ್ಯ
ಕೋವಿಡ್ ದಿಂದ ಪೋಷಕರು ದಾಖಲಾತಿಗೆ ಮುಂದಾಗಿಲ್ಲ.ಇರುವ ವಿದ್ಯಾರ್ಥಿಗಳ ಮರು ದಾಖಲಾತಿಗೂ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.ಆನ್‌ಲೈನ್ ಪಾಠಅರ್ಥಆಗಲ್ಲ ಎಂದುಕೆಲವು ಪೋಷಕರಿದ್ದರೆ,ಕೆಲವರುಈ ವರ್ಷ ಶಿಕ್ಷಣವೇ ಬೇಡ ಎಂದು ನಿರ್ಧರಿಸಿದ್ದಾರೆ. ಇದರಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರಕೈಗೊಳ್ಳುವ ಗೊಂದಲದ ನಿರ್ಧಾರಪೋಷಕರನ್ನು ಗೊಂದಲಕ್ಕೊಳಗಾಗುವಂತೆ ಮಾಡಿದೆ. ಶಾಲೆ ನಡೆಸಲು ಸಾಕಷ್ಟು ಸಾಲಮಾಡಿದ್ದೇವೆ. ಅದನ್ನು ಮನಗಂಡು ಸರ್ಕಾರ ಕೂಡಲೇ ಖಾಸಗಿ ಶಾಲೆಗಳಿಗೂ ಅನುಕೂಲ ಮಾಡಿ ಕೊಡಬೇಕು. – ಸುಜಾತ ಕೃಷ್ಣ, ಕಾರ್ಯದರ್ಶಿ, ಡ್ಯಾಪೋಡಿಲ್ಸ್ ಶಾಲೆ, ಮಂಡ್ಯ
ಎಚ್.ಶಿವರಾಜು