ನಾನು ಕೆಲಸ ಮಾಡುತ್ತಿರುವುದು ಪೇಂಟ್ ಇಂಡಸ್ಟ್ರಿಗಳ ಕ್ಷೇತ್ರದಲ್ಲಿ. ಮಾಸ್ಕ್, ಸಾಮಾಜಿಕ ಅಂತರ ಹೀಗೆ ನಾನು ಎಷ್ಟೇ ಮುನ್ನೆಚ್ಚರಿಕೆಯಿಂದ ಇದ್ದರೂ ಕೊರೊನಾ ಆವರಿಸಿಬಿಟ್ಟಿತು. ಮೊದ ಮೊದಲಿಗೆ ಆಯಾಸ, ವಿಪರೀತ ಒಣ ಕೆಮ್ಮು, ಚಳಿ-ಜ್ವರ, ಸುಸ್ತು ಕಾಣಿಸಿಕೊಂಡಿತು.
ಆರಂಭದಲ್ಲಿ ಸಾಮಾನ್ಯ ಔಷಧಿಗಳನ್ನು ತೆಗೆದುಕೊಂಡರೂ ಆನಂತರದಲ್ಲಿಅದು ಹೆಚ್ಚಾದ ಕಾರಣ, ಅನಿವಾರ್ಯವಾಗಿ ಕೊರೊನಾ ಪರೀಕ್ಷೆಗೊಳಪಟ್ಟೆ. ಅದರಲ್ಲಿ ಪಾಸಿಟಿವ್ ರಿಸಲ್ಟ್ ಬಂತು. ಸ್ವಲ್ಪ ಆತಂಕವಾದರೂಆಘಾತಗೊಳ್ಳಲಿಲ್ಲ. ಅದರ ಬೆನ್ನಲ್ಲೇ ನನ್ನ ಪತ್ನಿ,ಪುತ್ರನಿಗೆ ಮಾಡಿಸಿದ ಕೊರೊನಾ ಪರೀಕ್ಷೆಯಲ್ಲಿಅವರದ್ದು ನೆಗೆಟಿವ್ ಬಂದಿದ್ದು ಮನಸ್ಸಿಗೆ ಹೆಚ್ಚುಸಮಾಧಾನ ತಂದಿತ್ತು.ಮೊದಲಿಗೆ ನಾನು 14 ದಿನಗಳ ಹೋಂಕ್ವಾರಂಟೈನ್‌ಗೆ ಒಳಗಾಗಿದ್ದೆ. ಆದರೆ, ಕೆಮ್ಮು, ಸುಸ್ತುಮತ್ತಷ್ಟು ಜಾಸ್ತಿಯಾಯಿತು.
ಹಾಗಾಗಿ,ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆದಾಖಲಾಗಲು ನಿರ್ಧರಿಸಿದೆ. ಆದರೆ,ನಮ್ಮ ಮನೆಯ ಹತ್ತಿರದ ಯಾವುದೇಆಸ್ಪತ್ರೆಯಲ್ಲಿ ಬೆಡ್ ಖಾಲಿ ಇರಲಿಲ್ಲ.ಈ ಹಂತದಲ್ಲಿ ನೆರವಿಗೆ ಬಂದ ನಮ್ಮಸಂಬಂಧಿಕ ವೈದ್ಯರಾದ ಡಾ.ಕಿರಣ್‌ಅವರ ನೆರವಿನಿಂದ ಮಹಾಲಕ್ಷ್ಮೀ ಆಸ್ಪತ್ರೆಯಲ್ಲಿ ಬೆಡ್‌ಸಿಕ್ಕಿತು. ನನ್ನ ಪತ್ನಿ, ಪುತ್ರ, ಅಪ್ಪ-ಅಮ್ಮ ಹಾಗೂಸಹೋದರರುಕೊಂಚ ಗಾಬರಿಯಾಗಿದ್ದರು. ಆದರೆ,ನನಗೇನೂ ಗಾಬರಿಯೆನಿಸಲಿಲ್ಲ. ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿದ್ದಾಗ ಯಾವುದೇ ಕೆಟ್ಟ ಯೋಚನೆಗಳು ಮನಸ್ಸಿನಲ್ಲಿ ಸುಳಿಯದಂತೆ ಎಚ್ಚರಿಕೆವಹಿಸಿದೆ.
ಒಂದಿಷ್ಟು ಏಕಾಂತದಲ್ಲಿ ಕಾಲಕಳೆಯಲು ಸಮಯ ಸಿಕ್ಕಿದ್ದರಿಂದ ಪತ್ರಿಕೆ, ಮ್ಯಾಗಜಿನ್ ಓದಿದೆ. ನನಗಿಷ್ಟವಾದ, ಸಮಯದ ಅಭಾವದಿಂದಾಗಿ ತುಂಬಾ ದಿನಗಳಿಂದ ನೋಡದೇ ಇದ್ದ ಕೆಲವು ಚಲನಚಿತ್ರಗಳನ್ನು ಒಟಿಟಿಯಲ್ಲಿ ಹಾಗೂ ಆನ್‌ಲೈನ್‌ನಲ್ಲಿ ನೋಡುತ್ತಾ ಕಾಲ ಕಳೆದೆ. ನಾಲಿಗೆ ರುಚಿ ಕಳೆದುಕೊಂಡಿದ್ದರಿಂದ ಊಟ ಮಾಡುವುದೇ ಒಂದು ಹಿಂಸೆ ಎನಿಸುತ್ತಿತ್ತಷ್ಟೆ. ಆದರೆ, ಊಟ ತಿಂಡಿ ಬಿಡಲಿಲ್ಲ.
ರುಚಿ ಎನಿಸದಿದ್ದರೂ ಕಷ್ಟಪಟ್ಟು ತಿನ್ನುತ್ತಿದ್ದೆ, ಔಷಧಿಗಳನ್ನುತಪ್ಪದೆ ತೆಗೆದುಕೊಳ್ಳುತ್ತಿದ್ದೆ. ಮತ್ತೂಂದೆಡೆ ವೈದ್ಯರು ಅವರ ಚಿಕಿತ್ಸೆ ಮುಂದುವರಿಸಿದ್ದರು. ಹೀಗೆ ಕೆಲವು ದಿನಗಳು ಕಳೆದ ನಂತರ ನಾನು ಚೇತರಿಸಿಕೊಂಡೆ. ಸ್ವಲ್ಪ ಕೆಮ್ಮು ಇತ್ತಾದರೂ ಕೊರೊನಾ ನೆಗೆಟಿವ್ ಬಂದಿದ್ದರಿಂದ ಡಿಸಾcರ್ಜ್ ಆದೆ. ಹಂತಹಂತವಾಗಿ ಚೇತರಿಸಿಕೊಂಡಿದ್ದೇನೆ.
ನನ್ನನ್ನು ಉಪಚರಿಸಿದ ಮಹಾಲಕ್ಷ್ಮೀ ಆಸ್ಪತ್ರೆವೈದ್ಯರಾದ ಡಾ.ಶಿವರಾಜ್, ಡಾ.ಪ್ರಮೋದ್‌ಹಾಗೂ ಶುಶ್ರೂಷಕಿಯರಿಗೆ, ಇತರ ವೈದ್ಯಕೀಯಸಿಬ್ಬಂದಿಗೆ ಹಾಗೂ ನನ್ನ ಕುಟುಂಬದವರಿಗೆ ನನ್ನ ಧನ್ಯವಾದಗಳು.