Advertisement

ಉಪ ಚುನಾವಣೆ ಬಳಿಕ ಮಸ್ಕಿಯಲ್ಲಿ ಕೋವಿಡ್ ಆಘಾತ!

04:49 PM Apr 27, 2021 | Team Udayavani |

ಮಸ್ಕಿ: ಕೋವಿಡ್ ಎರಡನೇ ಅಲೆ ಭೀತಿ ನಡುವೆಯೇ ನಡೆದಿದ್ದ ಉಪ ಚುನಾವಣೆ ಬಳಿಕ ಕ್ಷೇತ್ರದಲ್ಲಿ ಸೋಂಕು ಪೀಡಿತರ ಸಂಖ್ಯೆ ಭಾರೀಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರಚಾರಕ್ಕೆಬಂದಿದ್ದ ನಾಯಕರಲ್ಲಿ ಮಾತ್ರವಲ್ಲ, ಈಗಸಾಮಾನ್ಯ ಜನರಲ್ಲೂ ಸೋಂಕು ವ್ಯಾಪಿಸಿದ್ದು, ತಳಮಳಕ್ಕೆ ಕಾರಣವಾಗಿದೆ!.

Advertisement

ಏ.17ರಂದು ಮತದಾನ ನಡೆದಿತ್ತು. ಪ್ರಚಾರಕ್ಕೆ ಸಿಎಂ, ಮಾಜಿ ಸಿಎಂ ಸೇರಿದಂತೆ ಹಲವುಘಟಾನುಘಟಿ ನಾಯಕರು ಆಗಮಿಸಿದ್ದರು. ಪ್ರಚಾರದ ವೇಳೆಯೇ ಡಿಸಿಎಂ ಗೋವಿಂದಕಾರಜೋಳ, ಬಿಜೆಪಿ ಅಭ್ಯರ್ಥಿ ಪ್ರತಾಪಗೌಡಪಾಟೀಲ್‌, ಸುರಪುರ ಶಾಸಕ ರಾಜುಗೌಡ,ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ, ಬಿಜೆಪಿಮುಖಂಡರಾದ ತಮ್ಮೇಶಗೌಡ, ಪ್ರತಾಪಗೌಡ ಪಾಟೀಲ್‌ ಕುಟುಂಬದ ಐವರು ಸದಸ್ಯರಿಗೂಸೋಂಕು ತಗುಲಿತ್ತು. ಅಲ್ಲದೇ ಮಾಜಿ ಶಾಸಕಶಿವರಾಜ ತಂಗಡಗಿ ಸೇರಿ ಕಾಂಗ್ರೆಸ್‌ನ ಹಲವು ನಾಯಕರಿಗೂ ಸೋಂಕು ಹರಡಿತ್ತು.

ಉಪ ಚುನಾವಣೆ ಬಳಿಕ ಮಸ್ಕಿ, ತುರುವಿಹಾಳ, ಬಳಗಾನೂರು ಸೇರಿ ಹಲವು ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಕುರಿತಾಗಿಟೆಸ್ಟ್‌ ಮಾಡಲಾಗುತ್ತಿದೆ. ಪ್ರತಿದಿನ 100-120ಜನರಿಗೆ ಕೋವಿಡ್‌ ಪರೀಕ್ಷೆಗೆ ನಡೆಸಲಾಗುತ್ತಿದ್ದು, ಕಳೆದ ರವಿವಾರ ಒಂದೇ ದಿನ ಬರೋಬ್ಬರಿ 28ಕೇಸ್‌ಗಳು ಪತ್ತೆಯಾಗಿದ್ದರೆ, ಸೋಮವಾರ 12ಜನರಿಗೆ ಸೋಂಕು ತಗುಲಿದೆ. ಏ.17ರ ಮತದಾನಮುಗಿದ ದಿನದಿಂದ ಇಲ್ಲಿವರೆಗೆ (ಏ.26ರವರೆಗೆ)ಒಟ್ಟು 90ಕ್ಕೂ ಹೆಚ್ಚು ಜನರಲ್ಲಿ ಸೋಂಕುಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ.ಮಸ್ಕಿ ಕ್ಷೇತ್ರ ಲಿಂಗಸುಗೂರು, ಸಿಂಧನೂರುತಾಲೂಕಿನ ವ್ಯಾಪ್ತಿಯಲ್ಲಿರುವುದರಿಂದ ಅಲ್ಲೂಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತರ್ಯಾಲಿ, ರಾಜಕೀಯ ಸಭೆಗಳು ನಡೆದ ಸ್ಥಳಗಳವ್ಯಾಪ್ತಿಯಲ್ಲಿ ರ್‍ಯಾಂಡಂ ಟೆಸ್ಟ್‌ ಮಾಡಿದರೆ ಪ್ರಕರಣಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

ತಹಶೀಲ್ದಾರ್‌ಗೂ ಸೋಂಕು :  ಚುನಾವಣೆ ಸಮಯದಲ್ಲಿ ಕರ್ತವ್ಯದಮೇಲೆ ಓಡಾಡಿದ ಮಸ್ಕಿ ತಹಶೀಲ್ದಾರ್‌ಮಹೇಂದ್ರಕುಮಾರ್‌ ಅವರಿಗೂ ಕೋವಿಡ್ ಪಾಸಿಟಿವ್‌ ಪತ್ತೆಯಾಗಿದೆ. ಮೂರು ದಿನಗಳ ಹಿಂದೆ ಕೋವಿಡ್‌ ಪತ್ತೆಯಾಗಿದ್ದು, ಹೋಂ ಐಸೋಲೇಷನ್‌ಗೆ ಒಳಗಾಗಿದ್ದಾರೆ. ತಹಶೀಲ್ದಾರ್‌ ಕಚೇರಿಯ ಇತರ ಇಬ್ಬರು ಸಿಬ್ಬಂದಿಗಳಲ್ಲೂ ಕೋವಿಡ್‌ ದೃಢಪಟ್ಟಿದೆ.ಪ್ರಾಥಮಿಕ ಸಂಪರ್ಕದಲ್ಲಿದ್ದವರುಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್‌ ಆಗಿದ್ದಾರೆ.

ವ್ಯಕ್ತಿ ಸಾವು :

Advertisement

ಕೋವಿಡ್‌ ಸೋಂಕಿಗೆ ಒಳಗಾಗಿದ್ದ ಮಸ್ಕಿ ಮೂಲದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ವಾರದ ಹಿಂದೆಸೋಂಕಿಗೆ ಒಳಗಾಗಿದ್ದ ಈ ವ್ಯಕ್ತಿ ಬಳ್ಳಾರಿಯಲ್ಲಿಚಿಕಿತ್ಸೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಿಸದೇಎರಡು ದಿನದ ಹಿಂದೆ ಮೃತಪಟ್ಟಿದ್ದಾನೆ ಎಂದು ತಾಲೂಕು ಆಡಳಿತ ತಿಳಿಸಿದೆ.

 

ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next