Advertisement

ಲಾಕ್‌ ಕಸರತ್ತಿಗೆ ಪ್ರತಿಫ‌ಲ : ಮೇ ಮೊದಲ ವಾರಕ್ಕೆ ಹೋಲಿಸಿದರೆ ಕಡೇ ವಾರ ಭಾರೀ ಇಳಿಕೆ

09:40 AM Jun 01, 2021 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಒಂದು ತಿಂಗಳ ಕರ್ಫ್ಯೂ ಕಸರತ್ತಿಗೆ ನಿರೀಕ್ಷಿತ ಫ‌ಲ ದೊರೆತಿದೆ. ಮೇ ಮೊದಲ ವಾರಕ್ಕೆ ಹೋಲಿಸಿದರೆ ಕೊನೆಯ ವಾರ ಕೋವಿಡ್ ಸೋಂಕು ತೀವ್ರತೆ ಶೇ.50ರಷ್ಟು ಕುಸಿದಿದ್ದು, ಒಂದಿಷ್ಟು ನಿಟ್ಟುಸಿರು ಬಿಡುವಂತಾಗಿದೆ.

Advertisement

ಏಪ್ರಿಲ್‌ 27 ರಂದು ರಾಜ್ಯದಲ್ಲಿ ಕರ್ಫ್ಯೂ ಜಾರಿಯಾಗಿದ್ದು, ಮೇ10ರ ನಂತರ ಮತ್ತಷ್ಟು ಕಠಿಣ ಗೊಳಿಸಲಾಯಿತು. ಇದರಿಂದಾಗಿ ಕೋವಿಡ್ ಸೋಂಕಿನ ಸರಪಳಿಗೆ ಕತ್ತರಿ ಬಿದ್ದಿರುವುದು ಹೊಸ ಪ್ರಕರಣಗಳು ಮತ್ತು ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಅರ್ಧಕ್ಕರ್ಧ ಇಳಿಕೆಯಾಗಿರುವುದರಿಂದ ಸ್ಪಷ್ಟವಾಗುತ್ತಿದೆ. ಮೇ ಮೊದಲ ವಾರ (ಮೇ 3-9)ನಿತ್ಯಸರಾಸರಿ 48 ಸಾವಿರ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.32 ರಷ್ಟಿತ್ತು. ಮೇ ಕೊನೆಯ ವಾರ (ಮೇ 23-30) ಹೊಸ ಪ್ರಕರಣಗಳು ನಿತ್ಯ ಸರಾಸರಿ 23 ಸಾವಿರಕ್ಕೆ, ಪಾಸಿಟಿವಿಟಿ ದರ ಶೇ.15ಕ್ಕೆ ತಗ್ಗಿದೆ. ಅದರಲ್ಲೂ ಕಳೆದ ಮೂರುದಿನಗಳಿಂದ ಪಾಸಿಟಿವಿಟಿ ದರ ಶೇ 14ರಷ್ಟು,ಹೊಸಪ್ರಕರಣಗಳು 20 ಸಾವಿರ ಆಸುಪಾಸಿಗೆ ಬಂದಿವೆ.

ಆಗ 100ಕ್ಕೆ 32, ಈಗ 100ಕ್ಕೆ 15: ಒಂದು ಪ್ರದೇಶದ ಸೋಂಕಿನ ತೀವ್ರತೆಯನ್ನು ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರದಿಂದ ಅಳೆಯಲಾಗುತ್ತದೆ. ಸದ್ಯ ಪಾಸಿಟಿವಿಟಿ ಅರ್ಧದಷ್ಟುಕಡಿಮೆಯಾಗಿದೆ.ಮೇ ಮೊದಲ ವಾರ 100 ಮಂದಿಗೆ ಪರೀಕ್ಷೆ ಮಾಡಿದರೆ 32 ಮಂದಿ ಸೋಂಕಿತರು ಪತ್ತೆಯಾಗುತ್ತಿದ್ದರು. ಈಗ ಆ ಪ್ರಮಾಣ 15 ಮಂದಿಗೆ ಬಂದಿದೆ.

ಎರಡು ವಾರ ನಂತರ ಫ‌ಲಿತಾಂಶ ಎಂದಿದ್ದರು: ನಿರ್ಬಂಧ ಜಾರಿಗೊಳಿಸಿದ ದಿನದಿಂದಲೇ ಸೋಂಕು ಇಳಿಕೆಯಾಗುವುದಿಲ್ಲ, ಎರಡು ವಾರದ ನಂತರ ಇಳಿಮುಖವಾಗುತ್ತದೆ ಎಂದು ತಜ್ಞರು ತಿಳಿಸಿದ್ದರು. ಅದರಂತೆ ಮೇ 10ರಂದು ಬಿಗಿ ನಿರ್ಬಂಧ ಜಾರಿಯಾದ ಎರಡು ವಾರದ ನಂತರ ಅಂದರೆ,ಕಳೆದ ಒಂದು ವಾರದಿಂದ ಸೋಂಕು ಸಾಕಷ್ಟು ಇಳಿಕೆಯಾಗಿದೆ.

 ರಾಜಧಾನಿಯಲ್ಲಿ ಭಾರೀ ಇಳಿಕೆ : ಬೆಂಗಳೂರಿನಲ್ಲಿ 25 ಸಾವಿರಕ್ಕೆ ತಲುಪಿದ್ದಹೊಸ ಪ್ರಕರಣಗಳು ಸದ್ಯ ಐದು ಸಾವಿರಕ್ಕಿಂತ ಕಡಿಮೆವರದಿಯಾಗುತ್ತಿವೆ. ಪಾಸಿವಿಟಿದರ ಶೇ. 40ರಿಂದ ಶೇ.11ಕ್ಕೆ ತಗ್ಗಿದೆ. ಇನ್ನುಜಿಲ್ಲಾ ಕೇಂದ್ರಗಳಲ್ಲಿ ರಾಜಧಾನಿಗಿಂತಲೂ ಒಂದು ವಾರದ ತಡವಾಗಿ ಇಳಿಮುಖ ಆರಂಭವಾಗಿದೆ.ಈ ಹಿಂದೆ ನಾಲ್ಕುಜಿಲ್ಲೆಗಳಲ್ಲಿ 2000ಕ್ಕೂ ಅಧಿಕ, 10 ಜಿಲ್ಲೆಗಳಲ್ಲಿ 1000ಕ್ಕೂ ಅಧಿಕ ಪ್ರಕರಣಗಳು ವರದಿ ಯಾಗುತ್ತಿದ್ದವು. ಈಗ ಮೈಸೂರು, ಹಾಸನ,ಬೆಳಗಾವಿ ತುಮಕೂರಿನಲ್ಲಿಮಾತ್ರ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಬೀದರ್‌, ರಾಮನಗರ, ಯಾದಗಿರಿ,ಕಲಬುರಗಿ 100ರ ಆಸುಪಾಸಿನಲ್ಲಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಹಾವೇರಿ,ಕೊಡಗು, ಕೊಪ್ಪಳ 200 ರ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ.

Advertisement

ಹಂತಹಂತವಾಗಿ ನಿರ್ಬಂಧ ಕೈಬಿಡಬೇಕು :

ಬಿಗಿ ನಿರ್ಬಂಧದಿಂದ ಸದ್ಯ ಕೋವಿಡ್ ಸೋಂಕಿನ ಸರಪಳಿ ಬಿರುಕು ಬಿಟ್ಟಿದ್ದು, ನಾಶವಾಗಿಲ. ಈಗ ನಿರ್ಬಂಧ ಒಮ್ಮೆಗೆ ತೆಗೆದರೆಮತ್ತೆ ಸೋಂಕು ತೀವ್ರವಾಗುವ ಸಾಧ್ಯತೆ ಇದೆ. ಮೊದಲು ಅತ್ಯವಶ್ಯಕ ಚಟುವಟಿಕೆಗಳಿಗೆ, ವಾಣಿಜ್ಯ ಚಟುವಟಿಕೆಗೆ ಅನುಮತಿ ನೀಡಬೇಕು.ಆನಂತರವೇಮಾರುಕಟ್ಟೆ,ಮನೋರಂಜನೆ ಸಾರಿಗೆ ವಲಯವನ್ನು ಆರಂಭಿಸಬೇಕು. ಸಭೆ ಸಮಾರಂಭ, ಅದ್ಧೂರಿ ಮದುವೆಗಳನ್ನು ಡಿಸೆಂಬರ್‌ ಅಂತ್ಯದವರೆಗೂ ನಿಯಂತ್ರಿಸಬೇಕು ಎಂದು ತಜ್ಞರ ಸಮಿತಿ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಕಠಿಣ ನಿರ್ಬಂಧ ಇನ್ನಷ್ಟು ದಿನ ವಿಸ್ತರಣೆಯಾದರೆ ಕೇಸುಗಳು ಮತ್ತಷ್ಟುಇಳಿಕೆಯಾಗಲು ಅನು ಕೂಲವಾಗುತ್ತದೆ. ಸೋಂಕು ಪರೀಕ್ಷೆಗಳ ಪಾಸಿಟಿವಿಟಿದರಶೇ.5ಕ್ಕೆಇಳಿಕೆಯಾದರೆ ಆ ಪ್ರದೇಶದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ ಎಂದರ್ಥ- ಡಾ.ಸಿ.ಎನ್‌.ಮಂಜುನಾಥ್‌, ನಿರ್ದೇಶಕ,ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next