Advertisement

ಮಾಸ್ಕ್ ಹಾಕಿಕೊಂಡ ದೇವಿ : ಈ ದೇವಾಲಯಕ್ಕೆ ಬರುವ ಭಕ್ತರಿಗೆ ಸಿಗತ್ತೆ ವಿಶೇಷ ಪ್ರಸಾದ!

01:35 PM Apr 16, 2021 | Team Udayavani |

ಎಥಹ್  (ಉತ್ತರ ಪ್ರದೇಶ) : ಭಾರತದಲ್ಲಿ ಕೋವಿಡ್ ಎರಡನೇ ಅಲೆ ಅತೀ ವೇಗವಾಗಿ ಹರಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಎಲ್ಲ ಸಂಸ್ಥೆಗಳು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಮಾಸ್ಕ್ ಹಾಕುವುದು, ಸ್ಯಾನಿಟೈಸಿಂಗ್ ಮಾಡುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ರೆ ಉತ್ತರ ಪ್ರದೇಶದ ಈ ದೇವಸ್ಥಾನದಲ್ಲಿ ದೇವರಿಗೂ ಮಾಸ್ಕ್ ಹಾಕಲಾಗಿದೆ.

Advertisement

ಹೌದು ಉತ್ತರ ಪ್ರದೇಶದ ಎಥಹ್ ಪ್ರದೇಶದಲ್ಲಿರುವ ದುರ್ಗಾ ದೇವಿಯ ಮುಖಕ್ಕೆ ಮಾಸ್ಕ್ ಹಾಕಲಾಗಿದೆ. ಜನರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ದೇವರಿಗೂ ಮಾಸ್ಕ್ ಹಾಕಿದ್ದೇವೆ ಎಂದು ಅಲ್ಲಿನ ಅರ್ಚಕರು ತಿಳಿಸಿದ್ದಾರೆ. ದೇವರ ಮೂರ್ತಿಗೆ ಮಾಸ್ಕ್ ಧರಿಸಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

ಮತ್ತೊಂದು ಸಂಗತಿ ಅಂದರೆ ಈ ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೂ ಮಾಸ್ಕ್ ಅನ್ನು ಪ್ರಸಾದದ ರೀತಿಯಲ್ಲಿ ವಿತರಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಚಕ ಮನೋಜ್ ಶರ್ಮಾ, ದೇವಸ್ಥಾನಕ್ಕೆ ಹೆಚ್ಚು ಹೆಚ್ಚು ಜನರು ಬರುವ ಕಾರಣ ದೇವರಿಗೆ ಮಾಸ್ಕ್ ಹಾಕಿದ್ದೇವೆ. ಇಲ್ಲಿಗೆ ಬರುವ ಭಕ್ತರು ದೇವರಿಗೆ ಹಾಕಿರುವ ಮಾಸ್ಕ್ ಅನ್ನು ನೋಡಿ ತಾವೂ ಕೂಡ ಅದನ್ನೇ ಅನುಸರಿಸುತ್ತಾರೆ. ಇದರಿಂದ ಉತ್ತಮ ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ.

ಅಲ್ಲದೆ ದೇವಸ್ಥಾನದಲ್ಲಿ ಕೋವಿಡ್ ಹರಡದಂತೆ ಮುಂಜಾಗ್ರತೆಯನ್ನು ವಹಿಸಲಾಗಿದೆ. ಒಂದು ಬಾರಿ ಕೇವಲ ಐದು ಮಂದಿ ಮಾತ್ರ ದೇವಸ್ಥಾನದ ಒಳಗಡೆ ಹೋಗುವಂತೆ ಅನುಮತಿ ನೀಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next