Advertisement
ಈ ಪ್ರಮಾಣಪತ್ರಗಳ ಖಚಿತತೆ ಖಾತ್ರಿಯಾಗದ ಹೊರತು ಯಾರನ್ನೂ ವಿಮಾನ ನಿಲ್ದಾಣದಿಂದ ಆಚೆ ಕಳಿಸಲಾಗದು. ಈ ಹೊಸ ನಿಯಮಗಳು ಅ. 25ರಿಂದ ಜಾರಿಗೊಳ್ಳಲಿದ್ದು, ಈ ಹಿಂದೆ, ಫೆ. 17ರಂದು ವಿದೇಶಿ ಪ್ರಯಾಣಿಕರಿಗಾಗಿ ಜಾರಿಗೊಳಿಸಲಾಗಿದ್ದ ಮಾರ್ಗಸೂಚಿಗಳ ಬದಲಾಗಿ ಜಾರಿಗೊಳ್ಳುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಭಾರತ ಸರ್ಕಾರಗಳಿಂದ ಅಂಗೀಕೃತಗೊಂಡಿರುವ ದೇಶಗಳಿಂದ ಆಗಮಿಸುವವರಿಗೆ ಮಾತ್ರ ಭಾರತಕ್ಕೆ ಬರಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಒಂದು ಡೋಸ್ ಪಡೆದವರು ಅಥವಾ ಯಾವುದೇ ಡೋಸ್ ಪಡೆಯದಿದ್ದವರು, ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಅವರು ಕೊರೊನಾ ಪರೀಕ್ಷೆಗೆ ಒಳಪಡಬೇಕು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಪರೀಕ್ಷೆಗಳಿಗಾಗಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ ನಂತರ ಅವರನ್ನು ವಿಮಾನ ನಿಲ್ದಾಣದಿಂದ ಹೊರಕ್ಕೆ ಹೋಗಲು ಅನುಮತಿ ನೀಡಲಾಗುತ್ತದೆ. ಕೊರೊನಾ ಲಕ್ಷಣಗಳಿದ್ದರೆ, ಕಡ್ಡಾಯವಾಗಿ 7 ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ. ಎಂಟನೇ ದಿನ ಅವರು ಪುನಃ ಮರು ಪರೀಕ್ಷೆಗೊಳಗಾಗಬೇಕಿರುತ್ತದೆ. ಆಗ, ಪುನಃ ನೆಗೆಟಿವ್ ಫಲಿತಾಂಶ ಬಂದರೆ, ಅಂಥವರು ಇನ್ನೂ ಏಳು ದಿನ ಸ್ವಯಂ ಅವಗಾಹನೆಗೆ ಒಳಪಡಬೇಕಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ :ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ
Related Articles
ಯುನೈಟೆಡ್ ಕಿಂಗ್‌ಡಮ್, ಫ್ರಾನ್ಸ್, ಜರ್ಮನಿ, ನೇಪಾಳ, ಬೆಲಾರಸ್, ಲೆಬನಾನ್, ಅರ್ಮೇನಿಯಾ, ಉಕ್ರೇನ್, ಬೆಲ್ಜಿಯಂ, ಹಂಗೇರಿ, ಸರ್ಬಿಯಾ.
Advertisement