Advertisement

ಸುರಕ್ಷತೆಯೊಂದಿಗೆ ಚಿತ್ರ ಪ್ರದರ್ಶಿಸಲು ನಾವ್‌ ರೆಡಿ…

12:34 PM Oct 07, 2020 | Suhan S |

ಚಿತ್ರಮಂದಿರಗಳನ್ನು ಅಕ್ಟೋಬರ್‌ 15ರಿಂದ ತೆರೆಯಲು ಅನುಮತಿ ನೀಡಿದ್ದ ಕೇಂದ್ರ ಸರ್ಕಾರ, ಚಿತ್ರಮಂದಿರಗಳು ಚಿತ್ರಪ್ರದರ್ಶನ ವೇಳೆ ಪಾಲಿಸಬೇಕಾದ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ಹಲವು ಅಂಶಗಳನ್ನು ಉಲ್ಲೇಖೀಸಿದೆ.ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಿ ಚಿತ್ರಪ್ರದರ್ಶನ ಮಾಡಲು ಚಿತ್ರಮಂದಿರದ ಮಾಲೀಕರು ಸಿದ್ಧರಾಗಿದ್ದಾರೆ. ಮೊದಲು ಚಿತ್ರರಂಗ ಸಹಜ ಸ್ಥಿತಿಗೆ ಬರೋದು ಮುಖ್ಯ.ಈನಿಟ್ಟಿನಲ್ಲಿ ನಾವು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಚಿತ್ರಪ್ರದರ್ಶನ ಮಾಡುತ್ತೇವೆ ಎಂದು ಚಿತ್ರಪ್ರದರ್ಶಕರು ಒಕ್ಕೊರಲಿನಿಂದ ಹೇಳಿದ್ದಾರೆ. ಬೆಂಗಳೂರಿನ ಕೆಲವು ಪ್ರಮುಖ ಚಿತ್ರಮಂದಿರಗಳ ಮಾಲೀಕರ ಮಾತುಗಳು ಇಲ್ಲಿವೆ..

Advertisement

ಉದ್ಯಮದಲ್ಲಿ ಉಳಿಯಬೇಕಾದರೆ, ಥಿಯೇಟರ್‌ಗಳನ್ನು ತೆರೆದು ಅನಿವಾರ್ಯವಾಗಿ ಮುನ್ನಡೆಸಲೇಬೇಕಾಗಿದೆ. ಈಗ ಸರ್ಕಾರ ಒಂದಷ್ಟು ಗೈಡ್‌ಲೈನ್ಸ್‌ ಕೊಟ್ಟು ಥಿಯೇಟರ್‌ ತೆರೆಯಲು ಅನುಮತಿ ಕೊಟ್ಟಿರುವುದರಿಂದ, ಸದ್ಯಕ್ಕೆ ಗೈಡ್‌ಲೈನ್ಸ್‌ ಪ್ರಕಾರ ಥಿಯೇಟರ್‌ಗಳನ್ನು ತೆರೆಯಲು ನಾವು ತಯಾರಾಗುತ್ತಿದ್ದೇವೆ. ಸರ್ಕಾರ ಹೇಳಿರುವ ಪ್ರಕಾರ ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಮಾಡಲು ಕನಿಷ್ಟ 2-3 ವಾರಗಳು ಪೂರ್ವ ತಯಾರಿ ಬೇಕಾಗುತ್ತದೆ. ಈಗಾಗಲೇ ಅನೇಕ ಪ್ರದರ್ಶಕರು ಇದರ ತಯಾರಿ ಮಾಡಿಕೊಳ್ಳುತ್ತಿದ್ದು, ಕೆಲವರು ಇದೇ15ಕ್ಕೆ ಥಿಯೇಟರ್‌ಗಳನ್ನು ತೆರೆದರೆ, ಇನ್ನು ಕೆಲವರು ಒಂದೆರಡು ವಾರಗಳ ಬಳಿಕ ಪರಿಸ್ಥಿತಿ ನೋಡಿಕೊಂಡು ಥಿಯೇಟರ್‌ಗಳನ್ನು ತೆರೆಯಬಹುದು. ಇನ್ನು ಥಿಯೇಟರ್‌ ಗಳಲ್ಲಿ ಸಿನಿಮಾಗಳನ್ನು ಬಾಡಿಗೆ ಆಧಾರದ ಮೇಲೆ ಪ್ರದರ್ಶಿಸಬೇಕೋ ಅಥವಾ ಶೇಕಡಾವಾರು ಆಧಾರದ ಮೇಲೆ ಪ್ರದರ್ಶಿಸಬೇಕೋ ಎಂಬ ಚರ್ಚೆಗಳೂ ನಡೆಯುತ್ತಿದ್ದು, ಅನೇಕ ಪ್ರದರ್ಶಕರು ಶೇಕಡಾವಾರು ಆಧಾರದ ಮೇಲೆ ಸಿನಿಮಾಗಳನ್ನು ಪ್ರದರ್ಶಿಸುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಬಾಡಿಗೆ ಪದ್ಧತಿಯೇ ಸೂಕ್ತ ಎನ್ನುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ಪ್ರದರ್ಶಕರ ಜೊತೆ ಮಾತುಕತೆ ನಡೆಯಲಿದ್ದು,ಆದಷ್ಟು ಬೇಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಟ್ಟಿನಲ್ಲಿ ಆದಷ್ಟು ಬೇಗ ಥಿಯೇಟರ್‌ಗಳಲ್ಲಿ ಪ್ರದರ್ಶನಗಳು ಶುರುವಾಗಬೇಕು, ಒಂದಷ್ಟು ಸಿನಿಮಾಗಳು ರಿಲೀಸ್‌ ಆಗಬೇಕು. ಚಿತ್ರರಂಗದ ಚಟುವಟಿಕೆಗಳು ಮೊದಲಿನಂತಾಗಬೇಕು ಅನ್ನೋದು ನಮ್ಮ ಉದ್ದೇಶ – ಕೆ.ವಿ ಚಂದ್ರಶೇಖರ್‌, ಅಧ್ಯಕ್ಷರು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘ

ಸರ್ಕಾರ ನೀಡಿರುವ ಗೈಡ್‌ಲೈನ್ಸ್‌ ಅನ್ನು ನಾವು ಪಾಲಿಸುತ್ತೇವೆ.ಮನರಂಜನೆ ಜೊತೆಗೆ ಪ್ರೇಕ್ಷಕರ ಸುರಕ್ಷತೆ ಕೂಡಾ ಮುಖ್ಯ. ಶೇ50 ರಷ್ಟು ಆಸನವನ್ನಷ್ಟೇ ಭರ್ತಿ ಮಾಡಬೇಕಾಗಿದೆ. ಉದ್ಯಮದ ಹಿತದೃಷ್ಟಿಯಿಂದ ಅಡೆjಸ್ಟ್‌ ಮಾಡಿಕೊಳ್ಳಲೇಬೇಕು. ಒಂದೇ ಚಿತ್ರಮಂದಿರಲ್ಲಿ ಜನ ತುಂಬಿಸುವ ಬದಲು ಒಂದೇಊರಲ್ಲಿ ಎರಡು ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ಮಾಡಿದ್ದಾರೆ. ಜನರಿಗೂ ಸುಲಭ. ಇನ್ನು, ಬಾಡಿಗೆ ಕುರಿತಂತೆ ಚರ್ಚೆ ನಡೆಯುತ್ತಿದೆ. ಅನಿವಾರ್ಯವಾಗಿ ಕಡಿಮೆ ಮಾಡಿಕೊಳ್ಳಬೇಕು. ಈ ಸಂದರ್ಭದಲ್ಲಿ ಚಿತ್ರರಂಗದ ಹಿತ ಮುಖ್ಯ. – ಎಂ.ಎನ್‌.ಕುಮಾರ್‌, ಪ್ರದರ್ಶಕರು

ಸದ್ಯ ಬೇರೇನೂ ಮಾಡದೆ, ಸರ್ಕಾರದ ಗೈಡ್‌ ಲೈನ್ಸ್‌ ಪ್ರಕಾರ ಥಿಯೇಟರ್‌ಗಳನ್ನು ಓಪನ್‌ ಮಾಡದೆ ನಮಗೆ ಬೇರೆ ದಾರಿಯಿಲ್ಲ. ಗೈಡ್‌ಲೈನ್ಸ್‌ನಂತೆ ಸಿನಿಮಾಗಳನ್ನು ಪ್ರದರ್ಶಿಸಲು ಥಿಯೇಟರ್‌ಗಳಲ್ಲಿ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕು. ಈಗಾಗಲೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಥಿಯೇಟರ್‌ ಗಳು, ಹೊಸ ವ್ಯವಸ್ಥೆಗಾಗಿ ಮತ್ತಷ್ಟು ಖರ್ಚು ಮಾಡಬೇಕಾಗಿದೆ. ಆರಂಭದಲ್ಲಿ ಥಿಯೇಟರ್‌ಗಳಿಗೆಎಷ್ಟರ ಮಟ್ಟಿಗೆ ಪ್ರೇಕ್ಷಕರುಬರುತ್ತಾರೆ ಅನ್ನೋದರ ಬಗ್ಗೆ ಖಾತ್ರಿಯಿಲ್ಲ. ಆದರೂ ಥಿಯೇಟರ್‌ ಓಪನ್‌ ಮಾಡಿ ನೋಡೋಣ ಅಂಥ ಧೈರ್ಯ ಮಾಡಿಕೊಂಡು ಇದೇ ಅ.15ಕ್ಕೆ ಥಿಯೇಟರ್‌ ಓಪನ್‌ ಮಾಡುತ್ತಿದ್ದೇವೆ. -ನರಸಿಂಹಲು, ಮಾಲೀಕರು, ವೈಷ್ಣವಿ – ವೈಭವಿ ಚಿತ್ರಮಂದಿರ

ಚಿತ್ರಮಂದಿರವನ್ನು ಯಾವಾಗ ತೆರೆಯ ಬೇಕೆಂಬ ಚರ್ಚೆ ನಡೆಯುತ್ತಿದೆ.ಕೆಲವರು ನವೆಂಬರ್‌1ರಿಂದತೆರೆಯುವ ಅಂತಿದ್ದಾರೆ. ನೋಡಿಕೊಂಡು ನಿರ್ಧರಿಸುತ್ತೇವೆ. ಸರ್ಕಾರ ಹೇಳಿದ ಎಲ್ಲಾ ಮಾರ್ಗಸೂಚಿಗಳನ್ನು ನಾವು ಪಾಲಿಸಿಕೊಂಡು ಸಿನಿಮಾ ಪ್ರದರ್ಶನ ಮಾಡುತ್ತೇವೆ. -ಅರುಣ್‌ ಕುಮಾರ್‌, ಮಾಲೀಕರು, ಸಂತೋಷ್‌ ಚಿತ್ರಮಂದಿರ

Advertisement
Advertisement

Udayavani is now on Telegram. Click here to join our channel and stay updated with the latest news.

Next