Advertisement

ಕೋವಿಡ್ ತಡೆಗೆ ಮಾರ್ಗಸೂಚಿ ಪಾಲನೆ ಅಗತ್ಯ

01:51 PM Dec 21, 2020 | Suhan S |

ವಿಜಯಪುರ: ಕೋವಿಡ್‌-19 ನಡುವೆಯೂ ನಮಗೆ ಹಲವು ಪಾಠಗಳನ್ನು ಕಲಿಸಿದೆ ಎಂದುಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ತಿಳಿಸಿದರು.

Advertisement

ಪಟ್ಟಣದ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ 2020 ನೇ ಸಾಲಿನ ದೇವನಹಳ್ಳಿ ತಾಲೂಕಿನ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಎನ್‌ಎಸ್‌ಎಸ್‌ ಮತ್ತು ಎನ್‌ವೈಕೆಎಸ್‌ ಸ್ವಯಂ ಸೇವಕರಿಗೆಕೋವಿಡ್‌-19 ಲಾಕ್‌ಡೌನ್‌ ನಂತರದ ಸುರಕ್ಷತಾ ಕ್ರಮಗಳ ಬಗ್ಗೆ ಐದು ದಿನಗಳ ಕಾಲ ಆಯೋಜಿಸಲಾದ ತರಬೇತಿಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪರಿಸರವನ್ನು ನಾವು ಸಂರಕ್ಷಿಸಿದರೆ ನಿಸರ್ಗ ನಮ್ಮನ್ನು ಸಂರಕ್ಷಿಸುತ್ತದೆ ಎನ್ನುವುದೇ ಮೊದಲನೆಯ ಪಾಠ. ಕೋವಿಡ್‌ 2020 ವರ್ಷವನ್ನು ಸಂಪೂರ್ಣವಾಗಿ ವ್ಯಾಪಿಸಿಕೊಂಡು ಜನರು ಭಯಭೀತಿ ಆತಂಕದಿಂದ ಬದುಕುವಂತಾಗಿದೆ.

ಮಾರ್ಗಸೂಚಿ ಪಾಲನೆ ಅಗತ್ಯ: ತಮ್ಮ ಕುಟುಂಬದ ಹಾಗೂ ನೆರೆಹೊರೆಯ ಸದಸ್ಯರಲ್ಲಿ ಪರಸ್ಪರ ಸ್ನೇಹ ಬಂಧುತ್ವದಿಂದ ಕೂಡಿ ಮಾತನಾಡದಂತಹ ವಾತಾವರಣ ನಿರ್ಮಾಣ ವಾಗಿದೆ. ಈ ವರ್ಷ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕಿದೆ.ಸರ್ಕಾರಹಾಗೂಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿದರೆ ಸೋಂಕಿನಿಂದ ಪಾರಾಗಬಹುದು ಎಂದರು.

ತರಬೇತಿಯಲ್ಲಿ ಸ್ವಯಂ ಸೇವಕರಿಗೆ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಲಾಯಿತು. ಲಾಕ್‌ಡೌನ್‌ ನಂತರದ ಸುರಕ್ಷತಾ ಕ್ರಮಗಳ ಬಗ್ಗೆ ಕುರಿತ ಜನಜಾಗೃತಿ ಮೂಡಿಸುವ ಮಾಹಿತಿ ಕರ ಪತ್ರಗಳನ್ನು ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ ವಿತರಿಸಿದರು.

Advertisement

ಕೋವಿಡ್‌-19 ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸ್ವಯಂಸೇವಕರಂತೆ ಕಾರ್ಯನಿರ್ವಹಿಸಿದ ಡಾ.ಎನ್‌. ನಾಗರಾಜ ಪ್ರಾಂಶುಪಾಲರು, ನವೀನ್‌ ಕುಮಾರ್‌ಸಿ. ಮುಖ್ಯಸ್ಥರು, ಆಶಾರಾಣಿ ಎನ್‌., ರಶ್ಮಿ ಕೆ., ರಸಾಯನ ಶಾಸ್ತ್ರ ವಿಭಾಗ, ಪ್ರವೀಣ್‌ ಕುಮಾರ್‌ ಎಂ.ಎಂ.ಆಂಗ್ಲಭಾಷಾ ಉಪನ್ಯಾಸಕರು,ಮಿಥುನ್‌ ಎಸ್‌. ಕ್ರೀಡಾ ಸಂಯೋಜಕರು ಹಾಗೂ ನರಸಿಂಹ ಎನ್‌.ಎನ್‌.ವೈ .ಕೆ.ಎಸ್‌ ಸ್ವಯಂ ಸೇವಕರು ಬೆಂ.ಗ್ರಾ.ಜಿಲ್ಲೆ ಇವರಿಗೆ ಕೋವಿಡ್‌ ವಾರಿಯರ್ಸ್‌ ಎಂದು ನೆಹರು ಯುವಕೇಂದ್ರ ಬೆಂ.ಗ್ರಾ.ಜಿಲ್ಲೆಯ ರಾಷ್ಟ್ರೀಯ ಸೇವಾ ಕಾರ್ಯಕರ್ತ ಎಚ್‌.ಸಿ.ಶ್ರೀಧರ್‌ ಅಭಿನಂದಿಸಿ ಪ್ರಶಸ್ತಿ ನೀಡಿ ಗೌರವಿಸಿದರು.

ಕೇಂದ್ರ ಸರ್ಕಾರದ ಯುವಜನ ಸೇವೆ

ಮತ್ತು ಕ್ರೀಡಾ ಸಚಿವಾಲಯ-ನೆಹರು ಯುವ ಕೇಂದ್ರ ಬೆಂ.ಗ್ರಾ, ಕರ್ನಾಟಕ ಗಾಂಧಿ ಸ್ಮಾರಕ ನಿಧಿಗಾಂಧಿ ಭವನ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಡಾ. ಎಸ್‌.ಎನ್‌. ಸುಬ್ಬರಾವ್‌ಯುವ ಜನ ಸೇವಾ ಸಂಘದೇವನಹಳ್ಳಿ ಇವರ ಆಶ್ರಯ ದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next