Advertisement

ಕೋವಿಡ್: ಮಾರ್ಗಸೂಚಿ ಪಾಲನೆಯೇ ಪರಿಹಾರ: ಐಸಿಯು ತಪ್ಪಿಸಲು ಲಸಿಕೆಯೇ ಮಾರ್ಗ

01:13 AM Jan 13, 2022 | Team Udayavani |

ಉಡುಪಿ: ಕೊರೊನಾ ಸೋಂಕು ತಡೆಗಟ್ಟಲು ಕೋವಿಡ್‌ ಮಾರ್ಗಸೂಚಿ ಪಾಲನೆ ಹಾಗೂ ಲಸಿಕೆ ಪಡೆದುಕೊಳ್ಳುವುದೇ ಸದ್ಯದ ಮಾರ್ಗವಾಗಿದೆ.

Advertisement

ಜಿಲ್ಲೆಯಲ್ಲಿ ಶೇ. 95.94 ಮಂದಿ ಮೊದಲ ಡೋಸ್‌, ಶೇ. 81.10 ಮಂದಿ 2ನೇ ಡೋಸ್‌ ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ 10,52,555 ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. ಆ ಪೈಕಿ 10,16,635 ಮಂದಿ ಪಡೆದಿದ್ದಾರೆ. 8,56,122 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

18 ವರ್ಷ ಮೇಲ್ಪಟ್ಟ 9,99,000 ಮಂದಿಗೆ ಲಸಿಕೆ ನೀಡಲು ಉದ್ದೇಶಿಸಿದ್ದು, 9,75,441 ಮಂದಿ ಮೊದಲ ಹಾಗೂ 8,53,570 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ.

15ರಿಂದ 18 ವಯೋಮಿತಿ
15-18 ವರ್ಷ ವಯೋ ಮಿತಿಯ 53,555 ಮಂದಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿದ್ದು, 38,863 ಮಂದಿಗೆ
ನೀಡಲಾಗಿದೆ. ಶೇ. 64.28 ಪ್ರಗತಿ ಸಾಧಿಸಲಾಗಿದೆ. ಲಸಿಕೆ ಲಭ್ಯತೆ ಆಧಾರದಲ್ಲಿ ವಾರದಲ್ಲಿ ನೂರರಷ್ಟು ಗುರಿ ಸಾಧನೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಮುನ್ನೆಚ್ಚರಿಕೆ ಲಸಿಕೆ
ಜಿಲ್ಲೆಯಲ್ಲಿ ಸೋಮವಾರದಿಂದ ಕೋವಿಡ್‌ ಮುನ್ನೆಚ್ಚರಿಕೆ ಡೋಸ್‌ ಲಸಿಕೆ ಆರಂಭಗೊಂಡಿದ್ದು, ಮೊದಲ ದಿನ 4,317 ಮಂದಿ ಪಡೆದುಕೊಂಡಿದ್ದಾರೆ. ಬುಧವಾರದ ವರೆಗೆ ಪಡೆದವರ ಸಂಖ್ಯೆ 5541.

Advertisement

ಮಕ್ಕಳ ಬಗ್ಗೆ ನಿಗಾ ಇರಲಿ
ಮಕ್ಕಳಲ್ಲಿಯೂ ಕೋವಿಡ್‌ ಲಕ್ಷಣ ಗಳುಳ್ಳ ಸೋಂಕು ಕಾಣಿಸಿಕೊಳ್ಳುತ್ತಿದೆ. ಪದೇಪದೆ ಕೆಮ್ಮು, ಶೀತ, ಜ್ವರ ಕಂಡು ಬಂದರೆ ಪೋಷಕರು ಮುತುವರ್ಜಿ ವಹಿಸಿ ಕೋವಿಡ್‌ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ:ಕೋವಿಡ್ ಭಾರಿ ಏರಿಕೆ : ರಾಜ್ಯದಲ್ಲಿ ಇಂದು 21 ಸಾವಿರ ಕೇಸ್; 10 ಸಾವು

ಪರೀಕ್ಷೆ ಸಂಖ್ಯೆ ಹೆಚ್ಚಳ
ಜಿಲ್ಲೆಯಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಿದ್ದು, ದಿನಂಪ್ರತಿ 4ರಿಂದ 8 ಸಾವಿರ ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಮಾಲ್‌ಗ‌ಳು, ಶೈಕ್ಷಣಿಕ ಸಂಸ್ಥೆಗಳು, ಅಪಾರ್ಟ್‌
ಮೆಂಟ್‌ಗಳಿಗೆ ತೆರಳಿ ಸೋಂಕು ಲಕ್ಷಣ ಕಂಡುಬರುವವರ ಮತ್ತು ಸೋಂಕಿತರ ಪ್ರಾಥಮಿಕ ಸಂಪರ್ಕ ಇರುವವರ ಪರೀಕ್ಷೆ ಮಾಡುತ್ತಿದ್ದಾರೆ.

ಕೋವಿಡ್‌ ಅನ್ನು ನಿಯಂತ್ರಿಸಲು ಎಲ್ಲರೂ ತಪ್ಪದೇ ಲಸಿಕೆ ಪಡೆದುಕೊಳ್ಳಬೇಕು. ಸೋಂಕು ಲಕ್ಷಣ ಕಂಡುಬಂದಿರುವವರ ಪ್ರಾಥಮಿಕ ಸಂಪರ್ಕ ಪತ್ತೆಹಚ್ಚಲಾಗುತ್ತಿದೆ. ಕೋವಿಡ್‌ ಮಾರ್ಗಸೂಚಿ ಅನುಸರಿಸುವ ಮೂಲಕ ನಾಗರಿಕರು ಸಹಕರಿಸುವ ಅಗತ್ಯವಿದೆ.
– ಡಾ| ನಾಗಭೂಷಣ್‌ ಉಡುಪ,
ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ

18 ವರ್ಷ ಮೇಲ್ಪಟ್ಟು
ಇದುವರೆಗೂ ಲಸಿಕೆ ಹಾಕಿಸಿ ಕೊಳ್ಳದವರಲ್ಲಿ ಗಂಭೀರ ಪ್ರಕರಣ ಕಂಡು ಬಂದು ಐಸಿಯುಗೆ ದಾಖಲಾದ ಪ್ರಕರಣಗಳೂ ಇವೆ. ಎರಡೂ ಡೋಸ್‌ ಪಡೆದು ಸೋಂಕು ಲಕ್ಷಣ ಕಂಡುಬಂದವರೂ ಇದ್ದಾರೆ. ತೀವ್ರತೆ ಇಲ್ಲದಿದ್ದರೂ ವೇಗವಾಗಿ ಹರಡುವ ಸಾಧ್ಯತೆ ಇರುವ ಕಾರಣ ಯಾರೂ ಕೂಡ ನಿರ್ಲಕ್ಷ್ಯ ತೋರದೆ ಲಸಿಕೆ ಪಡೆದುಕೊಳ್ಳಬೇಕು.
– ಡಾ| ಶಶಿಕಿರಣ್‌ ಉಮಾಕಾಂತ್‌,
ವೈದ್ಯಕೀಯ ಅಧೀಕ್ಷಕರು,
ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next