Advertisement

ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ

07:07 PM Apr 24, 2021 | Team Udayavani |

ಮೊಳಕಾಲ್ಮೂರು: ದೇಶ ಸೇರಿದಂತೆ ರಾಜ್ಯಾದ್ಯಂತ ಕೊರೊನಾ2ನೇ ಅಲೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರುಅಗತ್ಯವಾಗಿ ಕೊರೊನಾ ನಿಯಮ ಪಾಲಿಸಿಕೊಂಡುಜೀವರಕ್ಷಣೆ ಮಾಡಿಕೊಂಡು ಕೊರೊನಾ ಮುಕ್ತರಾಗಬೇಕುಎಂದು ಜಿಪಂ ಸಿಇಒ ಡಾ.ನಂದಿನಿ ದೇವಿ ಹೇಳಿದರು.ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.

Advertisement

ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಸಾರ್ವಜನಿಕರಪಾತ್ರ ಅಗತ್ಯವಾಗಿದೆ. ಕೊರೊನಾ ಎಂಬ ಮಹಾಮಾರಿಯುದಿನದಿಂದ ದಿನಕ್ಕೆ ರೂಪಾಂತರಗೊಂಡು ದೇಶದೆಲ್ಲೆಡೆನಿರ್ಭೀತಿಯಿಂದ ಹರಡಿ ಮನುಷ್ಯನ ಜೀವ ಮತ್ತು ಜೀವನವನ್ನೇಅಲ್ಲಾಡಿಸುವಂತಾಗಿದೆ. ಸಾರ್ವಜನಿಕರು ಸರ್ಕಾರವು ಜಾರಿಮಾಡಿದ ಕೊರೊನಾ ನಿಯಮ ಪಾಲನೆ ಮಾಡಿ ಜಾಗೃತರಾಗಿಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕಾಗಿದೆ.

ಸಾರ್ವಜನಿಕರು ಈಗಾಗಲೇ ಸರ್ಕಾರಿಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ 2 ನೇ ಅಲೆಗೆ 51ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅದರಲ್ಲಿ 35 ಹಾಸಿಗೆಗಳನ್ನುಕೋವಿಡ್‌ ಸೋಂಕಿತರಿಗೆ ಹಾಗೂ 16 ಹಾಸಿಗೆಗಳು ಇತರೆಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ.

3ಹಾಸಿಗೆಗಳು ಟೈಯೇಜ್‌ಗಾಗಿ ಮೀಸಲಿಡಲಾಗಿದೆ. ಈ ಎಲ್ಲಾಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯ ಕಲ್ಪಿಸಲಾಗಿದೆ. ಯಾವುದೇಕೊರತೆ ಇರುವುದಿಲ್ಲ. ಒಟ್ಟು 26 ಜಂಬೋ, 24 ಸಣ್ಣಸಿಲಿಂಡರ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.ತಾಲೂಕು ಆರೋಗ್ಯಾ ಧಿಕಾರಿ ಡಾ.ಸುಧಾ, ಆಡಳಿತವೈದ್ಯಾ ಧಿಕಾರಿ ಡಾ.ಅಭಿನವ್‌, ತಾಪಂ ವ್ಯವಸ್ಥಾಪಕ ನಂದೀಶ್‌,ಸಿಬ್ಬಂದಿಗಳಾದ ಸುಧಾ, ಸಿದ್ದನಾಯಕ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next