ತುಮಕೂರು: ಕಲ್ಪತರು ನಾಡಿನಲ್ಲಿ ಈ ಚಳಿಗಾಲದಲ್ಲಿ ಹೆಚ್ಚಾಗುತ್ತದೆ ಎಂದು ಕೊಂಡಿದ್ದ ಕೋವಿಡ್ ಈಗ ನಿಯಂತ್ರಣದಲ್ಲಿದೆ. ಈಗ ಪ್ರತಿದಿನ ಕೇವಲ ಮೂವತ್ತು ನಲವತ್ತು ಜನರಿಗೆ ಮಾತ್ರ ಸೋಂಕು ಕಾಣಿಸಿಕೊಳ್ಳುತ್ತಿದೆ, ಸೋಂಕಿನಿಂದ ಮೃತರ ಸಂಖ್ಯೆಯಲ್ಲಿಯೂ ಗಣನೀಯವಾಗಿ ಇಳಿಕೆ ಕಂಡಿದ್ದು, ಜನ ಕೋವಿಡ್ ಮರೆತು ಎಂದಿನಂತೆ ಜೀವನ ಆರಂಭಿಸಿದ್ದಾರೆ ಆದರೆ ಈಗ ಜಿಲ್ಲೆಯ ಜನರಿಗೆ ಎರಡನೇ ಅಲೆಯಲ್ಲಿ ರೂಪಾಂತರ ಗೊಂಡ ಕೊರೊನಾ ಭೀತಿ ಶುರುವಾಗಿದೆ.
ತುಮಕೂರಿಗೆ ಬೇರೆ ಬೇರೆ ಕೆಲಸಗಳಿಗಾಗಿ ವಿದೇಶಗಳಿಂದ ಬರುವ ಜನರಿಂದ ಮತ್ತು ವಿದೇಶಕ್ಕೆ ಹೋಗಿ ಬರುವ ಕೈಗಾರಿಕೋದ್ಯಮಿಗಳು, ಉದ್ಯೋಗದಲ್ಲಿ ಇರುವವರು ಮತ್ತು ಓದುತ್ತಿರುವವರುಹಾಗೂ ಇಲ್ಲಿಗೆ ವಿದೇಶದಿಂದ ಓದಲು ಬರುತ್ತಿರುವವರಿಂದ ಕೋವಿಡ್ ಎರಡನೇ ಅಲೆ ಪ್ರಾರಂಭವಾಗುತ್ತದೆ ಎನ್ನುವ ಆತಂಕ ಇಲ್ಲಿಯ ಜನರನ್ನು ಕಾಡುತ್ತಿದೆ.
ಜನರಲ್ಲಿ ಹೆಚ್ಚಿದ ಆತಂಕ: ಕಳೆದ ಹತ್ತು ತಿಂಗಳಿನಿಂದ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ತನ್ನ ತೀವ್ರತೆ ಹೆಚ್ಚಿಸಿಕೊಂಡು ಎಲ್ಲಾ ಜನರಲ್ಲಿ ಭೀತಿ ಗೊಳಿಸಿ 440 ಜನರನ್ನುಬಲಿಪಡೆದಿರುವ ವೈರಸ್ ಹರಡುವಿಕೆ ಈಗ ಕಡಿಮೆಯಾಗುತ್ತಿದೆ ಎಂದು ಜನ ನೆಮ್ಮದಿಯಿಂದ ಬದುಕುಕಟ್ಟಿಕೊಳ್ಳಲು ಆರಂಭಿಸಿದ್ದಾರೆ. ಆದರೆ ಈಗ ವಿದೇಶಗಳಲ್ಲಿ ಕಾಣಿಸಿ ಕೊಳ್ಳುತ್ತಿರುವ ಕೋವಿಡ್ ಎರಡನೇ ಅಲೆಯ ವೈರಸ್ ಜಿಲ್ಲೆಯಲ್ಲಿ ಎಲ್ಲಿ ಹರಡುತ್ತದೆಯೋ ಎನ್ನುವ ಆತಂಕ ಹೆಚ್ಚಿದೆ.
ದಿನೇ ದಿನೆ ಸೋಂಕು ಕಡಿಮೆ: ಈಗ ಬರುತ್ತಿರುವ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಒಂದು ದಿನಕ್ಕೆ ಕನಿಷ್ಠ 30 ರಿಂದ 40ರ ಒಳಗೆ ಕೋವಿಡ್ ಸೋಂಕಿತರುಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಮಂಗಳವಾರದ ವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು 22,965 ಇದ್ದು ಇದೇ ರೀತಿ ಜಿಲ್ಲೆಯಲ್ಲಿ ಕೋವಿಡ್ ತನ್ನ ವ್ಯಾಪ್ತಿಯನ್ನು ಕಡಿಮೆ ಮಾಡುತ್ತಾ ಹೋದರೆ 2021 ರ ಜನವರಿಅಂತ್ಯಕ್ಕೆ ಜಿಲ್ಲೆಯಲ್ಲಿ ಸೋಂಕು ಇನ್ನೂಕಡಿಮೆಯಾಗುವ ಸಾಧ್ಯತೆ ನಿಚ್ವಳ ವಾಗಿದೆ. ಆದರೆ ಈಗ ವಿದೇಶದಲ್ಲಿ ಕಾಡುತ್ತಿರುವ ಎರಡನೇ ಅವಾಂತರದ ಕೋವಿಡ್ ವೈರಸ್ ವಿದೇಶಗಳಿಂದ ಜಿಲ್ಲೆಗೆ ಹೆಚ್ಚುಬರುವ ಜನರಿಂದ ಹರಡುತ್ತದೆಯೋ ಎನ್ನುವ ಅನುಮಾನ ಮೂಡುತ್ತಿದೆ.
ಲಂಡನ್ ನಿಂದ ಐವರು ತುಮಕೂರಿಗೆ: ಕೋವಿಡ್ ವೈರಸ್ ಜಿಲ್ಲೆಯಲ್ಲಿ ಕಡಿಮೆ ಯಾಗುತ್ತಿರುವಾಗ ಜಿಲ್ಲೆಗೆ ವಿದೇಶದಿಂದ ಬರುವವರಿಂದ ರೋಗ ಹರಡಬಹುದು ಎನ್ನುವ ಆತಂಕ ಹೆಚ್ಚಾಗಿದೆ. ಕೋವಿಡ್ ವೈರಸ್‌ನ ಎರಡನೇ ಅಲೆ ಹರಡುತ್ತಿರುವ ವೇಳೆಯಲ್ಲಿ ಅಲ್ಲಿಯ ವಿಮಾನ ನಿಲ್ದಾಣದಿಂದ ತುಮಕೂರು ಮರಳೂರು ದಿಣ್ಣೆಗೆ ನಾಲ್ಕು ಜನ ಮತ್ತು ತಿಪಟೂರಿಗೆ ಒಬ್ಬರು ಬಂದಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಇದಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ತುಮಕೂರಿಗೆ ಲಂಡನ್ ವಿಮಾನ ನಿಲ್ದಾಣದಿಂದ ಐವರು ಬಂದಿದ್ದಾರೆ,ಅದರಲ್ಲಿ ತುಮಕೂರಿನ ಮರಳೂರು ದಿಣ್ಣೆಯ ಪತಿ,ಪತ್ನಿ ಮತ್ತುಇಬ್ಬರುಮಕ್ಕಳು, ತಿಪಟೂರಿಗೆ ಒಬ್ಬರು ಬಂದಿದ್ದಾರೆ, ಅವರ ಮೂಗು ಮತ್ತು ಗಂಟಲು ಮಾದರಿ ತೆಗೆದು ಪರೀಕ್ಷೆಗೆ ನೀಡಲಾಗಿದೆ. ವರದಿಬಂದ ನಂತರ ಮುಂದಿನ ಕ್ರಮಕೈಗೊಳ್ಳಲಾಗುವುದು.
-ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆದೊರಕುತ್ತಿದೆ. ಜನರು ಕೋವಿಡ್ ರೋಗ ಲಕ್ಷಣಬಂದ ತಕ್ಷಣತಪಾಸಣೆ ಮಾಡಿಸಿ ಕೊಂಡು ಚಿಕಿತ್ಸೆಪಡೆಯಿರಿ,ಈವರೆಗೆ 22,157ಜನರು ಗುಣಮುಖರಾಗಿ ಮನೆಗೆಹೋಗಿದ್ದಾರೆ. ಮೃತಪಟ್ಟಿರುವವರು ಕೋವಿಡ್ ಜೊತೆಗೆಬೇರೆ ರೋಗಗಳು ಇದ್ದವರು ಹೆಚ್ಚು ಮೃತರಾಗಿದ್ದಾರೆ ಜನರು ಜಾಗೃತೆಯಿಂದಇರಬೇಕು.
–ಡಾ.ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ
-ಚಿ.ನಿ.ಪುರುಷೋತ್ತಮ್