Advertisement

ಕೋವಿಡ್‌ ಭೀತಿ: 68 ಮತಗಟ್ಟೆ ಬದಲು

01:32 PM Oct 07, 2020 | Suhan S |

ಬೆಂಗಳೂರು: ಕೋವಿಡ್‌-19 ಸೋಂಕು ಭೀತಿ ಹಿನ್ನೆಲೆಯಲ್ಲಿರಾಜರಾಜೇಶ್ವರಿನಗರಉಪಚುನಾವಣೆಗೆ 297 ತಾತ್ಕಾಲಿಕ ಮತಗಟ್ಟೆಗಳನ್ನು ತೆರೆಯಲಾಗುವುದು ಹಾಗೂ ಕಿರಿದಾಗಿರುವ 68 ಮತಗಟ್ಟೆಗಳ ಸ್ಥಳ ಬದಲಾವಣೆ ಮಾಡಲಾಗುವುದು ಎಂದು ನಗರ ಚುನಾವಣಾಧಿಕಾರಿಯೂ ಆಗಿರುವ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ತಿಳಿಸಿದರು.

Advertisement

ಆರ್‌.ಆರ್‌. ನಗರದ ಉಪ ಚುನಾವಣೆ ಸಿದ್ಧತೆ ಸಂಬಂಧ ಬಸವೇಶ್ವರ ನಗರದ ಬಿ.ಆರ್‌.ಅಂಬೇಡ್ಕರ್‌ ‌ ಕ್ರೀಡಾ ಸಂಕೀರ್ಣದ ಕಚೇರಿಯ ಸ್ಟ್ರಾಂಗ್‌ ರೂಂನಲ್ಲಿ ಇರಿಸಲಾಗಿರುವ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳಕಾರ್ಯಕ್ಷಮತೆ ಪರಿಶೀಲನೆ ನಡೆಸಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಆಯುಕ್ತರು, ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಒಂದು ಮತಗಟ್ಟೆಯಲ್ಲಿ ಒಂದು ಸಾವಿರ ಜನ ಮಾತ್ರ ಮತದಾನ ಮಾಡಬಹುದು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಹೀಗಾಗಿ, ಹೆಚ್ಚು ಮತದಾರರು ಇರುವ ಮತಗಟ್ಟೆಗಳಿಗೆ  ಪರ್ಯಾಯ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಆರ್‌.ಆರ್‌ ನಗರದಲ್ಲಿ 381 ಮತಗಟ್ಟೆಗಳಿವೆ. ಇದರೊಂದಿಗೆ ಇನ್ನೂ 297 ತಾತ್ಕಾಲಿಕ (ಹೆಚ್ಚುವರಿ)ಮತಗಟಗಳನ್ನು ತೆರೆಯಲಾಗುವುದು. ಒಟ್ಟು 678 ಮತಗಟ್ಟೆಗಳಾಗಲಿವೆ ಎಂದರು.

ಎಲ್ಲ ಮತಗಟ್ಟೆಗಳಿಗೆ ಎರಡು ಪಟ್ಟು (ಒಂದು ಮತಗಟ್ಟೆಗೆ ಎರಡು ಯಂತ್ರ)ದಂತೆ ಒಟ್ಟು 1,356 ಬ್ಯಾಲೆಟ್‌ ಯೂನಿಟ್ಸ್‌,1,356 ಕಂಟ್ರೋಲ್‌ ಯೂನಿಟ್ಸ್‌ ಹಾಗೂ 1,356 ವಿವಿ ಪ್ಯಾಟ್‌ ಯಂತ್ರಗಳ ತಪಾಸಣೆ ಕಾರ್ಯವು ನ.10ರ ಒಳಗೆ ಪೂರ್ಣ ಗೊಳಿಸಲಾಗುವುದು.ಚುನಾವಣೆ ಸಂಬಂಧ ಪ್ರಾಥಮಿಕವಾಗಿ ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳಿರುವಸೆಕ್ಟರ್‌ (10ರಿಂದ 12 ಬೂತ್‌ ಸೇರಿ)ಗಳಲ್ಲಿನ ಸಿದ್ಧತೆ ಪರಿಶೀಲನೆ ಮಾಡುವ ಸಂಬಂಧ ಬಿಇಎಲ್‌ನ ಎಂಜಿನಿಯರ್‌ಗಳು ಬಂದಿದ್ದು, ಚುನಾವಣೆಗೆ ಅವಶ್ಯವಿರುವ ಕಂಟ್ರೋಲ್‌ ಯೂನಿಟ್‌, ಬ್ಯಾಲೆಟ್‌ ಯೂನಿಟ್‌, ವಿವಿ ಪ್ಯಾಟ್‌ ಸೇರಿದಂತೆ ಎಲ್ಲ ಯಂತ್ರ ಗಳನ್ನೂ ಪರಿಶೀಲನೆ ಮಾಡಿ ಸಮರ್ಪಕವಾಗಿದೆಯೇ ಎಂದು ನೋಡಲಿದ್ದಾರೆ ಎಂದರು.

1,356 ಯಂತ್ರಗಳಲ್ಲಿ ವಿವಿಪ್ಯಾಟ್‌ 678 ಜತೆಗೆ ಶೇ.50 ಹೆಚ್ಚುವರಿಯಾಗಿ ಬಳಸಲಾಗುತ್ತದೆ, ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್‌ ಯಂತ್ರಗಳನ್ನು ಶೇ. 140 ಹೆಚ್ಚುವರಿಯಾಗಿ ಬಳಸಲಾಗುತ್ತದೆ. ಈ ರೀತಿ ಹೆಚ್ಚುವರಿಯಾಗಿ ಬಳಸಿದ ಸಾಧನಗಳನ್ನು ಜನಪ್ರತಿನಿಧಿಗಳ ಸಮ್ಮುಖದಲ್ಲಿ ರ್‍ಯಾಂಡಮ್‌ ಆಗಿ ಆಯ್ಕೆ ಮಾಡಿ ಮತಗಟ್ಟೆಗಳಿಗೆಕಳುಹಿಸಲಾಗುತ್ತದೆಎಂದುಆಯುಕ್ತರು ಮಾಹಿತಿ ನೀಡಿದರು. ಈವೇಳೆವಿಶೇಷಆಯುಕ್ತರು(ಆಡಳಿತ)ಜೆ.ಮಂಜು ನಾಥ್‌,ಸ್ಟ್ರಾಂಗ್‌ರೂಂನೋಡಲ್‌ಅಧಿಕಾರಿಕೆಂಪೇಗೌಡ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಕಿರಿದಾದ ಮತಗಟ್ಟೆ ಶಿಫ್ಟ್  :  ಕೋವಿಡ್ ಸೋಂಕು ಭೀತಿ ಇರುವುದರಿಂದ ಆರ್‌. ಆರ್‌.ನಗರದ ಕಿರಿದಾದ ಪ್ರದೇಶದಲ್ಲಿರುವ 68 ಮತಗಟ್ಟೆಗಳಲ್ಲಿ ಸ್ಥಳ ಬದಲಾಯಿಸಲು ನಿರ್ಧರಿಸಲಾಗಿದೆ. ಈ 68 ಮತಗಟ್ಟೆಗಳ ಕೊಠಡಿಗಳಲ್ಲಿ ಸಾರ್ವಜನಿಕರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಷ್ಟು ಸ್ಥಳಾವಕಾಶವಿಲ್ಲ. ಅಲ್ಲದೆ, ಕೋವಿಡ್ ಹಬ್ಬುವುದು ತಡೆಯುವ ಉದ್ದೇಶ ದಿಂದ ಕೆಲವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದ್ದು, ಹಾಲಿ 68 ಮತಗಟ್ಟೆಗಳ ಬದಲಿಗೆ ಹೊಸದಾಗಿ 68ಕಟ್ಟಡಗಳನ್ನು ಗುರುತಿಸಲಾಗಿದೆ. ಈ ಕುರಿತು ಚರ್ಚಿಸಿ ತೀರ್ಮಾನ ತಗೆದುಕೊಳ್ಳಲಾಗುವುದು ಎಂದು ಹೇಳಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next