Advertisement
ಕೋವಿಡ್ ಸೋಂಕಿತರು ವಿಭಿನ್ನ ರೋಗಲಕ್ಷಣಗಳನ್ನು ಅನುಭವಿಸುತ್ತಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ದೃಢಪಡಿಸಿದೆ. ಸದ್ಯ ಕೋವಿಡ್ ಎರಡನೇ ಅಲೆಯಲ್ಲಿ ಸೋಂಕುಪೀಡಿತರಾದವರಲ್ಲಿ ಬಹುತೇಕರು ಮಧ್ಯಮ ಪ್ರಮಾಣದ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗದೇ ಚೇತರಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಈ ರೋಗಲಕ್ಷಣಗಳು ವ್ಯಕ್ತಿಯು ವೈರಸ್ ಸೋಂಕಿಗೆ ಒಳಗಾದ 5-6 ದಿನಗಳ ಅಅನಂತರ ಕಂಡುಬರುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ರೋಗಲಕ್ಷಣಗಳು 14 ದಿನಗಳ ಬಳಿಕವೂ ಬಾಧಿಸುತ್ತಿವೆ ಎಂದು ವರದಿ ತಿಳಿಸಿದೆ.
Related Articles
Advertisement
ಪ್ರತೀ ವೈರಸ್ ಕೂಡ ರೂಪಾಂತರಗೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಕೇಂದ್ರ ಸರಕಾರದ ಪ್ರಕಾರ, ದೇಶದ 18 ರಾಜ್ಯಗಳಲ್ಲಿ ಕೋವಿಡ್ ವೈರಸ್ ಅಪಾಯಕಾರಿಯಾಗಿ ರೂಪಾಂತರಗೊಳ್ಳುತ್ತಿವೆ. ಮಹಾರಾಷ್ಟ್ರದಲ್ಲಿ ಎರಡು ರೂಪಾಂತರಿತ ಸೋಂಕುಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಕೋವಿಡ್ ವೈರಸ್ ಎರಡು ರೂಪಾಂತರಗಳನ್ನು ಹೊಂದಿದ್ದು ಇವು ಅದರ ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿಸಿರುವುದು ತುಸು ಆತಂಕಕಾರಿ ಬೆಳವಣಿಗೆಯಾಗಿದೆ.
ಮಾರಕವಾಗುತ್ತಿದೆಯೇ? :
ಹೆಚ್ಚಿನ ಹೊಸ ಪ್ರಕರಣಗಳಲ್ಲಿ ರೋಗಲಕ್ಷಣಗಳಿಲ್ಲ. ಕೆಲವು ಸೌಮ್ಯದಿಂದ ಮಧ್ಯಮ ರೋಗಲಕ್ಷಣಗಳನ್ನು ಹೊಂದಿವೆ. ಆದರೆ ವೈರಸ್ ಬದಲಾಗುತ್ತಿರುವ ರೀತಿ, ಸೋಂಕಿನ ತೀವ್ರತೆಯೂ ಮುಂಚೂಣಿಗೆ ಬರುತ್ತಿದೆ. ಕೆಲವು ರೀತಿಯ ಗಂಭೀರ ಕಾಯಿಲೆ ಇರುವ ಜನರಿಗೆ, ಈ ಸೋಂಕುಗಳು ಮಾರಕವೆಂದೇ ಪರಿಗಣಿಸಲಾಗುತ್ತದೆ.
ಕಣ್ಣು , ಕಿವಿಗೆ ಸಮಸ್ಯೆ! :
ಚೀನದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಕೆಂಗಣ್ಣು ಸಹ ಕೋವಿಡ್ -19 ಸೋಂಕಿನ ಲಕ್ಷಣವಾಗಿದೆ. ಹೊಸ ಸೋಂಕು ಕಣ್ಣನ್ನು ಕೆಂಪಗಾಗಿಸುವ ಜತೆಯಲ್ಲಿ ಕಣ್ಣುಗಳಲ್ಲಿ ಉರಿಯೂತಕ್ಕೂ ಕಾರಣವಾಗಬಹುದು. ಕಳೆದ ವಾರ ಇಂಟರ್‌ನ್ಯಾಶನಲ್ ಜರ್ನಲ್ ಆಫ್ ಆಡಿಯಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ ರೂಪಾಂತರಿತ ಸೋಂಕು ಶ್ರವಣ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮಾತ್ರವಲ್ಲದೆ ಕೋವಿಡ್ ಪೀಡಿತ ಜನರಲ್ಲಿ ಶೇ. 7.6ರಷ್ಟು ಜನರು ಶ್ರವಣದೋಷವನ್ನು ಹೊಂದಿದ್ದಾರೆ.
ಜಠರಗರುಳಿಗೂ ತೊಂದರೆ :
ಕೋವಿಡ್ ಸೋಂಕಿನಿಂದಾಗಿ ಜಠರಗರುಳಿನ ಸಮಸ್ಯೆ ಗಳೂ ಕಂಡುಬರುತ್ತಿವೆ. ಕೋವಿಡ್‌ನ ಪ್ರಾರಂಭಿಕ ಹಂತಕ್ಕೆ ಹೋಲಿಸಿದರೆ ಈಗ ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಮೊದಲು ಈ ರೋಗಲಕ್ಷಣಗಳು ಕಂಡುಬಂದಿರಲಿಲ್ಲ, ಆದರೆ ಈಗ ಹೆಚ್ಚಿನ ಸಂದರ್ಭಗಳಲ್ಲಿ ಈ ಲಕ್ಷಣಗಳು ಕಂಡುಬರುತ್ತಿವೆ. ರೂಪಾಂತರಿತ ವೈರಸ್ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅತಿಸಾರ, ಉದರಶೂಲೆ, ವಾಕರಿಕೆ ಮತ್ತು ವಾಂತಿಯಂಥ ಲಕ್ಷಣಗಳು ಕೋವಿಡ್ ಪೀಡಿತರನ್ನು ಬಾಧಿಸಲಾರಂಭಿಸಿದೆ.
ಇತರ ಅಂಗಾಂಗಳಿಗೂ ಹಾನಿ :
ದೇಹದಲ್ಲಿ ವೈರಸ್ ಹೊರೆ ಹೆಚ್ಚಾದಂತೆ ಇದು ಇತರ ಅಂಗಗಳಿಗೂ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಿರ್ಲಕ್ಷ್ಯ ವಹಿಸದಂತೆ ಎಚ್ಚರದಿಂದಿರಬೇಕು. ನಿಮ್ಮನ್ನು ಯಾವುದೇ ತೆರನಾದ ರೋಗಲಕ್ಷಣಗಳು ಬಾಧಿಸಿದಲ್ಲಿ ತತ್‌ಕ್ಷಣ ಪರೀಕ್ಷೆಯನ್ನು ಮಾಡಿಸಿಕೊಂಡು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ವೈರಸ್‌ನ ತೀವ್ರತೆಯುನ್ನು ಕಡಿಮೆ ಮಾಡಬಹುದು.
ವ್ಯಾಕ್ಸಿನೇಶನ್‌ನಿಂದ ಪ್ರಯೋಜನವಿದೆಯೇ? :
ಹೌದು. ಕೋವಿಡ್‌ವಿರುದ್ಧ ಹೋರಾ ಡಲು ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಭಾರತದಲ್ಲಿ ಲಭ್ಯವಿರುವ ಎರಡೂ ಲಸಿಕೆಗಳಿಂದ (ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್) ತಯಾರಿಸಿದ ಪ್ರತಿಕಾಯಗಳನ್ನು ಪಡೆಯಬೇಕು. ಇದು ಪಡೆದ ಮೇಲೂ ನೀವು ಸೋಂಕಿಗೆ ಒಳಗಾಗದೇ ಇರಬಹುದು ಎಂದು ಖಚಿತವಾಗಿ ಹೇಳುವಂತಿಲ್ಲ. ಇದಕ್ಕಾಗಿ ಲಸಿಕೆ ಪಡೆದ ಬಳಿಕವೂ ಕೋವಿಡ್ ನಿಯಮಾ ವಳಿಗಳನ್ನು ಪಾಲಿಸಿ. ಈ ಕಾರಣಕ್ಕಾ ಗಿಯೇ ಸರಕಾರವು 45 ವರ್ಷ ಮೇಲ್ಪಟ್ಟ ವರೆಲ್ಲರಿಗೂ ಲಸಿಕೆ ನೀಡುವ ನಿರ್ಧಾರ ಕೈಗೊಂಡಿದೆ. ಯಾಕೆಂದರೆ ಕೋವಿಡ್ ನಿಂದಾಗಿ ಸಾವನ್ನಪ್ಪಿದವರಲ್ಲಿ ಶೇ. 90ರಷ್ಟು ಮಂದಿ ಈ ವಯಸ್ಸಿನವರಾಗಿದ್ದಾರೆ.