Advertisement

ಕ್ಷೀಣಿಸಿದ ಗಣೇಶ ಮೂರ್ತಿ ಮಾರಾಟ

12:04 PM Aug 22, 2020 | Suhan S |

ದೇವನಹಳ್ಳಿ: ಈ ಬಾರಿ ಗಣೇಶ ಚತುರ್ಥಿಗೆ ಕೋವಿಡ್ ಹಿನ್ನೆಲೆಯಲ್ಲಿ ಮಂಕು ಕವಿದಿದೆ. ಗಣೇಶ ಹಬ್ಬಕ್ಕೆ ವ್ಯಾಪಾರದ ಭರಾಟೆ ಪ್ರಾರಂಭವಾಗಿದ್ದು, ಹೂ, ಹಣ್ಣುಗಳ ಬೆಲೆಗಳು ಗಗನಕ್ಕೇರಿದ್ದು, ಗ್ರಾಹಕರಿಗೆ ಹೊರೆಯಾಗಿದೆ.

Advertisement

ಸರ್ಕಾರದ ಹಲವು ನಿಬಂಧನೆ: ಪ್ರತಿ ವರ್ಷ ಗಣೇಶ ಮೂರ್ತಿಗಳನ್ನು ಪ್ರತಿ ಬೀದಿ, ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸಿ ಹಬ್ಬ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಇರು ವುದರಿಂದ ಗಣಪತಿ ಪ್ರತಿಷ್ಠಾಪನೆಗೆ ಸರ್ಕಾರ ಮನೆಗಳಲ್ಲಿ, ದೇವಾಲಯಗಳಲ್ಲಿ ಪೂಜಿಸುವಂತೆ ಆದೇಶ ನೀಡಿದೆ. 20 ಜನರಿ ಗಿಂತ ಹೆಚ್ಚು ಇರಬಾರದು. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಸರ್ಕಾರ ಹಲವಾರು ನಿಯಮಗಳನ್ನು ವಿಧಿಸಿ ರುವುದರಿಂದ ಹಬ್ಬ ಆಚರಣೆಗೆ ಕೋವಿಡ್ ಅಡ್ಡಿಯನ್ನುಂಟು ಮಾಡಿದೆ. ಗಣೇಶ ಪ್ರತಿಷ್ಠಾಪಿಸಿದರೂ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಆಯೋಜಕರು ಹಿಂದೇಟು ಹಾಕಿದ್ದಾರೆ.

ತಯಾರಕರಿಗೆ ಹೊಡೆತ: ಗಣಪತಿ ತಯಾರಿಸಲು, ಜೇಡಿ ಮಣ್ಣು ತರಬೇಕು, ಕಾರ್ಮಿಕರು, ವಾಹನ ಬೇಕು. ಮೂರ್ತಿಗೆಬಣ್ಣ ಹಚ್ಚಲು ಬಣ್ಣದಂಗಡಿ, ಕಾರ್ಖಾನೆ ಕಾರ್ಮಿಕರು ಬೇಕು. ಹೀಗೆ ಹಲವಾರು ಹೊಡೆತಗಳನ್ನು ಗಣೇಶ ತಯಾರಿಕೆ ಮಾಡು ವವರು ಅನುಭವಿಸುತ್ತಿದ್ದಾರೆ. ಗಣೇಶ ಮೂರ್ತಿ ನಿರ್ಮಾಣ ಮಾಡುತ್ತಿರುವ ಕುಟುಂಬಗಳು ಪ್ರತಿ ವರ್ಷ ಸುಮಾರು 500 ರಿಂದ 2000 ವರೆಗೆ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡು ಮಾರಾಟ ಮಾಡುತ್ತಿದ್ದರು. ಆದರೆ ಕೋವಿಡ್‌ನಿಂದಾಗಿ 100 ರಿಂದ 200 ಮೂರ್ತಿಗಳನ್ನು ತಯಾರಿಸಲು ಮುಂದಾಗದಿರುವುದರಿಂದ ನಷ್ಟ ಅನುಭವಿಸುವಂತೆ ಆಗಿದೆ ಎಂದು ಗಣೇಶ ಮೂರ್ತಿ ಮಾರಾಟಗಾರರು ಅಳಲನ್ನು ತೋಡಿಕೊಂಡಿದ್ದಾರೆ.ಬೆಲೆಗಳಲ್ಲಿ ಇಳಿಕೆ ಇಲ್ಲ: ನಗರದ ಬಜಾರ್‌ ರಸ್ತೆ, ಇತರೆ ಕಡೆ ಗಳಲ್ಲಿ ಬಾಳೆ ಕಂದು, ಮಾವಿನ ಸೊಪ್ಪು, ಹೂವು, ಹಣ್ಣು, ಇತರೆ ವಸ್ತುಗಳ ಖರೀದಿ ಭರಾಟೆ ಜೋರಾಗಿ ನಡೆಯುತ್ತಿತ್ತು. ಕೋವಿಡ್ ಭೀತಿ ನಡುವೆಯೂ ಬೆಲೆ ಏರಿಕೆಯಾಗಿತ್ತು. ಹಬ್ಬ ಅದ್ಧೂರಿ ಆಚರಣೆ ಇಲ್ಲದಿದ್ದರೂ ಬೆಲೆಗಳಲ್ಲಿ ಮಾತ್ರ ಇಳಿಕೆ ಇರಲಿಲ್ಲ.

ಮಲ್ಲಿಗೆ 500 ರಿಂದ 600 ರೂ., ಕನಕಾಂಬರ 1500 ರೂ., ಸೇವಂತಿಗೆ 250-300 ರೂ., ಗುಲಾಬಿ 150 ರಿಂದ 200 ರೂ., ಮಳ್ಳೆ ಹೂ 600 ರೂ., ಯಾಲಕ್ಕಿ ಬಾಳೆಹಣ್ಣು ರೂ.70, ಸೇಬು 200 ರೂ., ದಾಳಿಂಬೆ 180 ರಿಂದ 200 ರೂ., ಸೀಬೆ 60 ರೂ., ಮೋಸಂಬಿ 70-80 ರೂ., ಪಚ್ಚಬಾಳೆ ಕೆ.ಜಿ.ಗೆ 25ರೂ., ತೆಂಗಿನ ಕಾಯಿ 1ಕ್ಕೆ 25 ರಿಂದ 30 ರೂ.ಮಾರಾಟವಾಗುತ್ತಿತ್ತು.

ಈ ವರ್ಷ ಗಣೇಶ ಮೂರ್ತಿ ಬೇಕು ಎಂದು ಮುಂಗಡ ಕೊಟ್ಟು ಆದೇಶ ನೀಡಿದವರಿಗೆ ಮಾತ್ರ ಮೂರ್ತಿ ಸಿದ್ಧಪಡಿಸಿ ಕೊಡಲಾಗುತ್ತಿದೆ. ಗಣೇಶ ಮೂರ್ತಿ ಮಾರಾಟದಲ್ಲಿ ಲಾಭ ಇಲ್ಲದಿದ್ದರೂ ನಮ್ಮ ಪೂರ್ವಜರು ಮಾಡಿಕೊಂಡು ಬಂದಿರುವ ಮೂಲ ವೃತ್ತಿ ಬಿಡಬಾರದೆಂಬ ಕಾರಣಕ್ಕೆ ಕಾಯಕ ಮಾಡಿಕೊಂಡು ಬರುತ್ತಿದ್ದೇವೆ.  ರಾಮಪ್ಪ, ಗಣಪತಿ ಮಾರಾಟಗಾರ

Advertisement

 

ಎಸ್‌.ಮಹೇಶ್‌

 

Advertisement

Udayavani is now on Telegram. Click here to join our channel and stay updated with the latest news.

Next