Advertisement
ನ್ಯಾಷನಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಈ ಅಧ್ಯಯನವನ್ನು ನಡೆಸಿದ್ದು, ಎಪ್ರಿಲ್ 25 ಮತ್ತು ಮೇ 1ರ ನಡುವೆ ನಡೆದ ಈ ಸಮೀಕ್ಷೆಗೆ 4 ಸಾವಿರ ಜನರನ್ನು ಒಳಪಡಿಸಲಾಗಿದೆ.
ಅಧ್ಯಯನದ ಪ್ರಕಾರ ಕೋವಿಡ್-19ರ ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿರುವ ಲಾಕ್‌ಡೌನ್ ನಿಯಮಗಳಿಂದಾಗಿ 650 ಯುರೊ (705) ಅಥವಾ ಅದಕ್ಕಿಂತ ಕಡಿಮೆ ತಲಾ ಆದಾಯ ಹೊಂದಿರುವ ನಾಲ್ವರು ಪೋರ್ಚುಗೀಸರ ಪೈಕಿ ಓರ್ವ ವ್ಯಕ್ತಿಯ ಆದಾಯ ಸಂಪೂರ್ಣವಾಗಿ ಕಡಿತವಾಗಿದೆ ಎಂದು ವರದಿ ಹೇಳಿದೆ. ಕೋವಿಡ್-19 ಸೋಂಕು ಪ್ರಾರಂಭವಾದಾಗಿನಿಂದ ಪೋರ್ಚುಗಲ್‌ನಲ್ಲಿ 650 ಯೂರೊಗಳವರೆಗೆ ತಲಾ ಆದಾಯವಿರುವ ಶೇ.25ರಷ್ಟು ಜನರು ಎಲ್ಲ ರೀತಿಯಿಂದಲೂ ತಮ್ಮ ಗಳಿಕೆಯನ್ನು ಕಳೆದುಕೊಂಡರೆ, ಮಾಸಿಕವಾಗಿ 2,500 ಯುರೋಗಳಷ್ಟು ಅಥವಾ ಅದಕ್ಕಿಂತ ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ಶೇ.6ರಷ್ಟು ಜನರಿಗೆ ಮಾತ್ರ ಆದಾಯವಿಲ್ಲದಂತಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
Related Articles
ಮಾರ್ಚ್ 18 ರಿಂದ ಎಪ್ರಿಲ್ ಅಂತ್ಯದ ವೇಳೆಗೆ ಒಟ್ಟು 91,500 ಜನರು ನಿರುದ್ಯೋಗ ಅರ್ಜಿ ಸಲ್ಲಿಸಿದ್ದು, ಅಧಿಕೃತ ಅಂಕಿ ಅಂಶಗಳ ಪ್ರಕಾರ ಒಟ್ಟಾರೆ ನಿರುದ್ಯೋಗಿಗಳ ಸಂಖ್ಯೆ 3.70 ಲಕ್ಷಕ್ಕೆ ಏರಿದೆ.
Advertisement
ಪೋರ್ಚುಗಲ್‌ನ ಸುಮಾರು 49 ಲಕ್ಷ ಕಾರ್ಮಿಕರಲ್ಲಿ ಶೇ.22ರಷ್ಟು ಕಾರ್ಮಿಕರ ಕನಿಷ್ಠ ಮಾಸಿಕ 635 ಯುರೊಗಳಷ್ಟಿದ್ದು, ಯುರೋಪ್ ಖಂಡಾದ್ಯಂತ ಅತಿ ಕಡಿಮೆ ವೇತನ ಪಾವತಿಸುವ ಪ್ರದೇಶವಾಗಿ ಪಶ್ಚಿಮ ಯುರೋಪ್ ಗುರುತಿಸಿಕೊಂಡಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ.