Advertisement
ಕಳೆದ ಮಾ. 23ರಿಂದ ರದ್ದುಗೊಂಡಿದ್ದ ರೈಲುಗಳಲ್ಲಿ ಹೆಚ್ಚಿನ ರೈಲುಗಳನ್ನು ನವೆಂಬರ್‌ನಿಂದ ವಿಶೇಷ ರೈಲುಗಳಾಗಿ ಪುನರಾರಂಭಿಸಿಲಾಗಿತ್ತು. ಮಂಗಳೂರು ಸೆಂಟ್ರಲ್‌ನಿಂದ ಪ್ರಸ್ತುತ 10ಕ್ಕೂ ಹೆಚ್ಚು ವಿಶೇಷ ರೈಲುಗಳು ವಿವಿಧೆಡೆಗಳಿಗೆ ಸಂಚರಿಸುತ್ತಿವೆ.
Related Articles
Advertisement
ಇದಲ್ಲದೆ ಕೊಂಕಣ ರೈಲುಮಾರ್ಗದಲ್ಲಿ ಎರಡು ಪ್ರಮುಖ ವಿಶೇಷ ರೈಲುಗಳಾದ ನಂ. 02414/02413 ಮಡಂಗಾವ್ ಜಂಕ್ಷನ್-ಎಚ್. ನಿಜಾಮುದ್ದೀನ್ – ಮಡಂಗಾವ್ ಜಂಕ್ಷನ್- ರಾಜಧಾನಿ ಸೂಪರ್‌ಫಾಸ್ಟ್ ಹಾಗೂ ನಂ. 02120/02119 ಕರ್ಮಲಿ-ಮುಂಬಯಿ ಸಿಎಸ್‌ಎಂಟಿ ತೇಜಸ್ ಸೂಫರ್‌ಫಾಸ್ಟ್ ಕೂಡ ರದ್ದುಗೊಂಡಿದೆ.
ನೈಋತ್ಯ ರೈಲ್ವೇಯು ಕೆ.ಎಸ್.ಆರ್. ಬೆಂಗಳೂರು-ಚೆನ್ನೈ, ಕೊಚ್ಚುವೇಲಿ -ಬಾಣಸವಾಡಿ, ಕೆ.ಎಸ್.ಆರ್. ಬೆಂಗಳೂರು- ಕೊಯಮತ್ತೂರು, ಮೈಸೂರು- ಎಂಜಿಆರ್ ಚೆನ್ನೈ ಸೆಂಟ್ರಲ್, ಬಾಣಸವಾಡಿ-ಎರ್ನಾಕುಲಂ ವಾರಕ್ಕೆ ಎರಡು ಬಾರಿ ಸಂಚರಿಸುವ ರೈಲುಗಳ ಸಂಚಾರವನ್ನು ಎ. 29ರಿಂದ ರದ್ದುಗೊಳಿಸಿದೆ.