Advertisement
ರಂಗಭೂಮಿ ಚಟುವಟಿಕೆನಿರತರಿಗೂ ಒಂದು ಸ್ಮರಣೀಯ ದಿನ ಬೇಕು ಎನ್ನುವ ಕಾರಣದಿಂದಾಗಿ1962ರಿಂದ ವಿಶ್ವ ರಂಗಭೂಮಿ ದಿನವನ್ನು ಮಾ.27ರಂದು ಆಚರಿಸಿಕೊಂಡುಬರಲಾಗುತ್ತಿದೆ. ಪ್ಯಾರಿಸ್ ನಲ್ಲಿ ಮುಖ್ಯ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ರಂಗಸಂಸ್ಥೆಯು ಪ್ರತಿವರ್ಷ ವಿಶ್ವದ ಯಾವುದಾದರೊಂದು ಭಾಷೆಯ ಹೆಸರಾಂತ ನಟ, ನಾಟಕಕಾರ, ನಿರ್ದೇಶಕ ಅಥವಾ ಸಂಘಟಕನಿಗೆ ಒಂದು ಸಂದೇಶ ಕೊಡುವಂತೆ ಕೇಳಿಕೊಂಡು ಅದನ್ನು ವಿಶ್ವದೆಲ್ಲೆಡೆಪಸರಿಸುತ್ತದೆ. 2002ರಲ್ಲಿ ಕನ್ನಡದ ಖ್ಯಾತ ನಾಟಕಕಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್‌ಅವರನ್ನು ವಿಶ್ವರಂಗಭೂಮಿ ದಿನದ ಸಂದೇಶ ನೀಡುವಂತೆ ಕೇಳಿಕೊಳ್ಳಲಾಗಿತ್ತು.
Related Articles
Advertisement
ಕೊವಿಡ್ ಸಂಕಷ್ಟ: ಕಳೆದ ವರ್ಷ ಮಾರ್ಚ್ ನಿಂದ ಕೋವಿಡ್ ಕಾರಣದಿಂದಾಗಿ ಲಾಕ್‌ಡೌನ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದ್ದರಿಂದ ಹಲವಾರು ವೃತ್ತಿ ಕಲಾವಿದರು ಸಂಕಷ್ಟ ಎದುರಿಸಬೇಕಾಯಿತು. ಸರ್ಕಾರ ಕಲಾವಿದರಿಗೆ ಕೋವಿಡ್ ನೆರವು ನೀಡಿದ್ದರೂ ಬಹಳಷ್ಟು ಕಲಾವಿದರಿಗೆ ತಲುಪಲಿಲ್ಲ. ಈಗ ಕಾರ್ಯಕ್ರಮಗಳು ಆರಂಭವಾಗಿವೆಯಾದರೂ, ಮೊದಲಿನಂತೆ ಇನ್ನೂ ಚಾಲನೆ ಯಾಗಿಲ್ಲ. ಲಾಕ್‌ಡೌನ್ ವೇಳೆ 55 ನಾಟಕಗಳು ನಿಂತು ಹೋಗಿ, ಡ್ರಾಮಾ ಸೀನರಿ ಕಾರ್ಮಿಕರನ್ನು ನಿಭಾಯಿಸುವುದೇ ಕಷ್ಟವಾಗಿ ನಷ್ಟ ಪಡಬೇಕಾಯಿತು ಎನ್ನುತ್ತಾರೆ ಸುವರ್ಣ ಡ್ರಾಮಾ ಸೀನರಿ ಮಾಲಿಕ ರವಿ. ಹರಿಕತೆ, ನಾಟಕ, ಮೊದಲಾಗಿಹಲವರು ಕಾರ್ಯಕ್ರಮಗಳು ಕೊವಿಡ್ ದಿಂದಾಗಿ ರದ್ದಾಗಿ, ಸಂಕಷ್ಟಪಡಬೇಕಾಯಿತು ಎನ್ನುತ್ತಾರೆ ತಬಲ ವಾದಕ ಮಂಜುನಾಥ್
ಕಾಡುತ್ತಿದೆ ಪ್ರೇಕ್ಷಕರ ಕೊರತೆ: ನಾಟಕ ಸೇ ರಿ ಹಲವು ಸಾಂಸ್ಕೃ ತಿಕ ಕಾರ್ಯಕ್ರಮ ಗ ಳಿಗೆ ಪ್ರೇ ಕ್ಷ ಕರ ಕೊರತೆ ಕಾಡುತ್ತಿದೆ ಎ ನ್ನು ವುದು ಆ ಯೋಜಕರ ಸಾ ಮಾನ್ಯ ಮಾತಾಗಿದೆ. ಆದರೆ, ಗ್ರಾ ಮಾಂತರ ಪ್ರದೇಶಗಳಲ್ಲಿ, ಹಬ್ಬ ಹರಿದಿನ, ಜಾತ್ರಾ ವಿ ಶೇಷ ಸಂದರ್ಭಗಳಲ್ಲಿ ನಾಟಕಗಳಿಗೆ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ಅಂದರೆ ಗ್ರಾಮದಲ್ಲಿ ನ ಡೆ ಯುವ ನಾಟಕ ಎನ್ನುವ ಅಭಿಮಾನದೊಂದಿಗೆ ಪಾತ್ರದಾರಿಗಳು ತಮ್ಮ ಗೆಳೆಯರೋ, ಬಂಧು ಗಳ್ಳೋ ಆಗಿರುವುದು ಸಹ ಪ್ರೇಕ್ಷಕರ ಸಂಖ್ಯೆ ಹೆಚ್ಚಲು ಕಾರಣವಾಗಿರಬಹುದು. ಇನ್ನೊಂದೆಡೆ ಪ್ರೇಕ್ಷಕರೇ ಇಲ್ಲದೇ ಹಲವಾರು ನಾಟಕೋತ್ಸವಗಳು ನಡೆದಿರುವ ನಿದರ್ಶನಗಳಿವೆ.
ರಂಗ ಕಲೆಗೆ ಉತ್ತೇಜನ ಅಗತ್ಯ: ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಮತ್ತುಪ್ರಧಾನ ಕಾ ರ್ಯ ದರ್ಶಿ ಬಿ. ಚಂದ್ರ ಶೇಖರ್ ಮಾತನಾಡಿ, ನಾಟಕ ಪ್ರದರ್ಶನಕ್ಕೆ ಒಂದು ಲಕ್ಷಕ್ಕೂ ಹೆಚ್ಚು ವೆಚ್ಚ ತಗುಲಲಿದ್ದು, ಇದನ್ನು ಭರಿಸುವುದು ಕಲಾವಿದರಿಗೆ ಕಷ್ಟಸಾಧ್ಯವಾಗಿದೆ. ರಂಗ ಚಟುವಟಿಕೆ ಗಳ ಆಯೋಜನೆಗಳು ಸಹ ದುಬಾರಿಯಾಗಿದೆ. ಕೆಲವೇ ಕಲಾವಿದರಿಗೆ ಸರ್ಕಾರದ ಸೌಲಭ್ಯಗಳು ತುಪುತ್ತಿದ್ದು, ರಂಗಕಲೆಗಳನ್ನು ಆಯೋಜಿಸುವ ಸಂಸ್ಥೆಗಳಿಗೆ ಕನ್ನಡಮತ್ತು ಸಂಸ್ಕೃತಿ ಇಲಾಖೆಯಿಂದ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. ಕಲಾವಿದರಿಗೂ ಆರೋಗ್ಯ ವಿಮೆ ನೀಡಬೇಕು ಎನ್ನುತ್ತಾರೆ.
– ಡಿ.ಶ್ರೀಕಾಂತ