Advertisement

ಕಾರ ಹುಣ್ಣಿಮೆಗೆ ಕೊರೊನಾ ಕರಿನೆರಳು

07:44 PM Jun 23, 2021 | Girisha |

ಬಸವನಬಾಗೇವಾಡಿ: ರೈತರು ಸಂಭ್ರಮದಿಂದ ಆಚರಿಸುವ ಕಾರ ಹುಣ್ಣಿಮೆ ಮೇಲೆ ಕಳೆದ ವರ್ಷದಂತೆ ಈ ವರ್ಷವೂ ಸಹ ಕೊರೊನಾ ಕರಿ ನೆರಳು ಬಿದ್ದಿದೆ. ರೈತರು ತಮ್ಮ ದನ ಕರುಗಳಿಗೆ ಬೇಕಾಗಿರುವ ಹಗ್ಗ, ಬಾರಕೋಲು, ಗೆಜ್ಜೆಸರ, ಮುಗದಾನಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ವಸ್ತುಗಳನ್ನು ಕಾರ ಹುಣ್ಣಿಮೆ ನಿಮಿತ್ತ ಖರೀದಿಸುತ್ತಿದ್ದರು.

Advertisement

ಕಳೆದ 2 ವರ್ಷದಿಂದ ಕೊರೊನಾ ಭೀತಿ ಹಿನ್ನೆಲೆ ಜಾತ್ರೆ, ಸಾರ್ವಜನಿಕವಾಗಿ ಹಬ್ಬ ಆಚರಣೆ ರದ್ದುಗೊಳಿಸಿದ್ದು ರೈತರು ಮಾರುಕಟ್ಟೆಯತ್ತ ಬರುತ್ತಿಲ್ಲ. ಇದರಿಂದ ವ್ಯಾಪಾರಸ್ಥರು ಸಹ ಆತಂಕದಲ್ಲಿದ್ದಾರೆ. ಸರ್ಕಾರ ಕಳೆದರಡು ದಿನದಿಂದ ವ್ಯಾಪಾರ ವಹಿವಾಟಿಗೆ ಅವಕಾಶ ಕೊಟ್ಟಿದ್ದರೂ ವಹಿವಾಟು ಮೊದಲಿನಂತಿಲ್ಲ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.

ಯುಗಾದಿ ಜಾತ್ರೆಗೆ 2 ಲಕ್ಷ ರೂ. ಮೌಲ್ಯದ ಕೃಷಿ ಚಟುವಟಿಕೆಗಳ ವಸ್ತುಗಳನ್ನು ಮಾರಾಟಕ್ಕೆ ತಂದಿದ್ದೆ. ಜಾತ್ರೆ ರದ್ದಾಗಿದ್ದರಿಂದ ತಂದ ವಸ್ತುಗಳು ಹಾಗೆ ಉಳಿದಿವೆ. ಈ ವರ್ಷದ ವಸ್ತುಗಳು ಈ ವರ್ಷವೆ ಮಾರಿದಾಗ ನಮಗೆ ಲಾಭವಾಗುತ್ತದೆ. ಮುಂದಿನ ವರ್ಷ ಮಾರಿದರೆ ಆ ವಸ್ತುವಿಗೆ ಬೆಲೆ ಇರುವುದಿಲ್ಲ. ಹೀಗಾಗಿ ಇಂಥ ವಸ್ತು ಅರ್ಧ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಕಳೆದ 7-8 ವರ್ಷದ ಹಿಂದೆ ಲಕ್ಷದವರೆಗೆ ವ್ಯಾಪಾರ ಮಾಡುತ್ತಿದ್ದೇವೆ.

ಈ ವರ್ಷ 7 ಸಾವಿರ ರೂ. ವ್ಯಾಪಾರವಾಗಿದೆ ಎನ್ನುತ್ತಾರೆ ಇಂಗಳೇಶ್ವರದ ವ್ಯಾಪಾರಸ್ಥರು.

Advertisement

Udayavani is now on Telegram. Click here to join our channel and stay updated with the latest news.

Next