ದೊಡ್ಡಬಳ್ಳಾಪುರ: ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಚಾಲನೆ ದೊರೆತ ಬೆನ್ನಲ್ಲೇ ದೊಡ್ಡಬಳ್ಳಾ ಪುರದ ಹಲವಾರು ಮನೆಗಳಲ್ಲಿಯೂ ದಸರಾ ದರ್ಬಾರ್ ಅಂದರೆ ದಸರಾ ಬೊಂಬೆಗಳನ್ನು ಕೂಡಿಸುವ ಆಚರಣೆ ಆರಂಭಗೊಂಡಿದೆ. ಆದರೆ ಈ ಬಾರಿ ಕೋವಿಡ್ ಬೊಂಬೆಗಳ ಸಂಭ್ರಮಕ್ಕೆ ತಣ್ಣೀರು ಎರೆಚಿದ್ದು, ಎಲ್ಲೆಡೆ ಸರಳ ಆಚರಣೆಕಂಡು ಬರುತ್ತಿದೆ.
ಪ್ರತಿವರ್ಷ ಹಬ್ಬದ ದಿನದಂದು ಸಂಜೆ ಯಾಗುತ್ತಿದ್ದಂತೆಯೇ ಬೊಂಬೆ ಕೂಡಿಸುವವರ ಮನೆಗಳಿಗೆ ಭೇಟಿ ನೀಡುತ್ತಿದ್ದ ಚಿಣ್ಣರು ಬೊಂಬೆ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈಗ ಬೊಂಬೆಗಳನ್ನು ಸಾಂಕೇತಿಕವಾಗಿ ಕೂಡಿಸಿ ದಸರಾ ಆಚರಣೆ ಮಾಡಲಾಗುತ್ತಿರುವುದರಿಂದ ಸಂಭ್ರಮ ಕಡಿಮೆಯಾಗಿದೆ.
ಬೊಂಬೆ ಹಬ್ಬ ಆಚರಣೆ: ನವರಾತ್ರಿಯ ಒಂಬತ್ತು ದಿನ ನಡೆಯುವ ಬೊಂಬೆ ಹಬ್ಬದಲ್ಲಿಕಳಸ ಸ್ಥಾಪನೆ ಮಾಡಿ ನಿತ್ಯ ನೈವೇದ್ಯದೊಂದಿಗೆ ಪೂಜೆ ಸಮರ್ಪಣೆಯಾಗುತ್ತದೆ. ಮನೆಗೆ ಬಂದ ಮಾನಿನಿಯರಿಗೆ ಬಾಗಿನ ಹಾಗೂ ಬಂಧು ಮಿತ್ರರ ಸಂಭ್ರಮವಿರುತ್ತದೆ. ವಿವಿಧ ದೇವಾನುದೇವತೆಗಳ ಬೊಂಬೆ ಗಳೊಂದಿಗೆ ಕೈಲಾಸ ಶಿವದರ್ಶನ, ತಿರುಪತಿಬ್ರಹ್ಮೋತ್ಸವ, ಶ್ರೀಕೃಷ್ಣ ಪಾರಿಜಾತ, ದಶಾವತಾರ,ತಿರುಪತಿ, ಗರುಡೋತ್ಸವ, ಮದುವೆ ದಿಬ್ಬಣದ ಬೊಂಬೆಗಳು, ಕುಂಬಕರ್ಣನ ನಿದ್ರಾಭಂಗ, ದಸರಾ ಮೆರವಣಿಗೆ, ಮೈಸೂರು ಅರಮನೆ, ಗ್ರಾಮೀಣ ಚಿತ್ರಣ, ಉದ್ಯಾನವನ, ಮೃಗಾಲಯ, ಕಾಡು, ಕೈಲಾಸ ಪರ್ವತ, ಅರಮನೆ, ದೇವಾಲಯ ಸೇರಿದಂತೆ ವಿಶೇಷ ಬೊಂಬೆಗಳನ್ನುಕೂರಿಸಲಾಗುತ್ತದೆ.
ನಗರದ ಟಿ.ಎಸ್.ಉಮಾದೇವಿ ಮಹದೇವಯ್ಯ, ಪ್ರಭಾವತಿ ದಯಾಶಂಕರ್, ಶ್ರೀನಿವಾಸರಾಘವನ್, ನಟರಾಜ್, ಮಂಜುಳಾ ಮಂಜು ನಾಥ್, ರವಿಶಂಕರ್, ಮಂಜಣ್ಣ, ಲಕ್ಷ್ಮೀ ಶ್ರೀನಿವಾಸಯ್ಯ, ಪುಷ್ಪಾ ಶಿವಶಂಕರ್, ಕಣಿತಹಳ್ಳಿದೇವರಾಜ್ ಮೊದಲಾದವರ ಮನೆಗಳಲ್ಲಿಬೊಂಬೆಗಳನ್ನು ಕೂಡಿಸುವ ಆಚರಣೆ ನಡೆಯುತ್ತಿದೆ. ದಸರಾ ಬೊಂಬೆಗಳನ್ನು ನೋಡಲು ಹೆಚ್ಚು ಮಕ್ಕಳೇ ಬರುವುದರಿಂದ, ಸೋಂಕು ಹರಡುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಬೊಂಬೆಗಳನ್ನು ಕಡಿಮೆ ಪ್ರಮಾಣದಲ್ಲಿ ಇಟ್ಟುಪೂಜೆ ಸಲ್ಲಿಸಲಾಗುತ್ತಿದೆ ಎಂದು ನಗರದ ವರ ಲಕ್ಷ್ಮೀ ದೇವರಾಜ್ ಹಾಗೂ ಲಕ್ಷ್ಮೀ ಶ್ರೀನಿವಾಸಯ್ಯ ತಿಳಿಸಿದ್ದಾರೆ.