ಕೋವಿಡ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೊದಲ ಅಲೆಯ ವೇಳೆ ವೃದ್ಧರು ಮತ್ತು ಅನಾರೋಗ್ಯ ಪೀಡಿತರನ್ನು ಕಾಡಿದ್ದ ಸೋಂಕು ಎರಡನೇ ಅಲೆ ವೇಳೆ ವಯಸ್ಕರನ್ನು ತೀವ್ರವಾಗಿ ಬಾಧಿಸಿತ್ತು. ಈಗ ಮಕ್ಕಳಿಗೆ ಕೋವಿಡ್ ಸೋಂಕು ತಗಲುವ ಸಂಖ್ಯೆ ಜಾಸ್ತಿ ಎಂದು ತಿಳಿದುಬಂದಿದೆ.
ಇಂಗ್ಲೆಂಡ್‌ನ ಇಂಪೀರಿಯಲ್ ಕಾಲೇಜು ಲಂಡನ್‌ನಲ್ಲಿ ಇತ್ತೀಚೆಗೆ ನಡೆದ ಸಂಶೋಧನೆ ಯಲ್ಲಿ 5ರಿಂದ 11 ವರ್ಷದೊಳಗಿನ ಮಕ್ಕಳಿಗೆ ವಯಸ್ಕರಿಗಿಂತ ಮೂರು ಪಟ್ಟು ಹೆಚ್ಚು ಸೋಂಕು ತಗಲುವ ಸಾಧ್ಯತೆಗಳಿರುವುದು ಸಾಬೀತಾಗಿದೆ. ಮಕ್ಕಳಿಗೂ ಕೊರೊನಾ ನಿರೋಧಕ ಲಸಿಕೆ ಹಾಕುವುದರಿಂದ ಇದನ್ನು ತಡೆಗಟ್ಟಲು ಸಾಧ್ಯ ಎಂದೂ ವರದಿ ತಿಳಿಸಿದೆ.
ಇದೇ ವೇಳೆ ವಯಸ್ಕರಿಗೆ ಬೂಸ್ಟರ್ ಡೋಸ್ ನೀಡುವುದರಿಂದ ಚಿಕ್ಕ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆಯನ್ನು ಕಡಿಮೆ ಮಾಡಬಹುದಾಗಿದೆಯಲ್ಲದೆ ಒಂದು ವೇಳೆ ಬಾಧಿಸಿದರೂ ಗಂಭೀರವಾಗಿ ಅನಾ ರೋಗ್ಯಕ್ಕೆ ಒಳಗಾಗಲಾರರು. ಈಗಾಗಲೇ ಹದಿಹರೆಯದವರು ಮತ್ತು ವಯಸ್ಕರು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತೆಗೆದು ಕೊಂಡಿ ರುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರುತ್ತಿಲ್ಲ. ಆದರೆ ಒಮಿಕ್ರಾನ್ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಪಸರಿಸುತ್ತಿದ್ದು ಮುಂದೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ ಎಂದೂ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಕೋವಿಡ್ ಲಸಿಕೆ: ರಾಜ್ಯದಲ್ಲಿ 3.60 ಕೋಟಿ ಜನರಿಗೆ 2ನೇ ಡೋಸ್ ಪೂರ್ಣ
ನ.23ರಿಂದ ಡಿ.14ರ ನಡುವೆ ನಡೆದ ಈ ಸಂಶೋಧನೆಯಲ್ಲಿ 97,000 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಫಲಿತಾಂಶದಲ್ಲಿ ಸುಮಾರು ಶೇ. 4.47ರಷ್ಟು ಪ್ರಾಥಮಿಕ ಶಾಲಾ ಮಕ್ಕಳಲ್ಲಿ ವೈರಸ್ ದೃಢಪಟ್ಟಿದೆ. ವ್ಯಾಕ್ಸಿನೇಶನ್ ಕಾರಣ ದಿಂದಾಗಿ ಮಾಧ್ಯಮಿಕ ಶಾಲಾ ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ಅರ್ಧದಷ್ಟು ಕಡಿಮೆ ಯಾಗಿದೆ. ಅಲ್ಲದೆ 75 ವರ್ಷಕ್ಕಿಂತ ಮೇಲ್ಪಟ್ಟ ವರಲ್ಲಿ ಕೂಡ ಕೊರೊನಾ ಪ್ರಕರಣ ಮೂರನೇ ಎರಡರಷ್ಟು ಇಳಿಕೆಯಾಗಿದೆ.
ಸಂಶೋಧಕರ ಪ್ರಕಾರ ಮಕ್ಕಳಲ್ಲಿ 650 ಪ್ರಕರಣಗಳಲ್ಲಿ 11 ಒಮಿಕ್ರಾನ್ ಕೇಸ್‌ಗಳಾಗಿದ್ದರೆ ಉಳಿದ ಪ್ರಕರಣಗಳು ಕೊರೊನಾದ ಹಳೆಯು ರೂಪಾಂತರ ಡೆಲ್ಟಾದ್ದಾಗಿದೆ. ಅಧ್ಯಯನಗಳ ಪ್ರಕಾರ ಒಮಿಕ್ರಾನ್ ಪ್ರಕರಣ ಪ್ರತೀ ದಿನ ಶೇ.66 ರಷ್ಟು ಹೆಚ್ಚಾಗುತ್ತಿದೆ. ಇದು ಡೆಲ್ಟಾ ಸೋಂಕಿನ ಹರಡುವಿಕೆಯ ಪ್ರಮಾಣಕ್ಕಿಂತ 3.5 ಪಟ್ಟು ಹೆಚ್ಚಾಗಿದೆ.
ಮಕ್ಕಳಿಗೆ ಈಗಾಗಲೇ ಯುಕೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಗಂಭೀರ ಕಾಯಿಲೆ ಇರುವ ಮಕ್ಕಳಿಗೆ ಅಥವಾ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕಡಿಮೆ ತೀವ್ರತೆಯ ಲಸಿಕೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ಮಕ್ಕಳಲ್ಲಿ ಸೋಂಕು ಕಡಿಮೆಯಾ ಗುತ್ತಿದೆ. ಯುಕೆಯಲ್ಲಿ ಈಗ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆಯಾದರೂ ಲಸಿಕೆಗಳಿಂದಾಗಿ ಜನರ ದೇಹದಲ್ಲಿ ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿದೆ.