Advertisement

ಸೋಂಕು ತಡೆಗಾಗಿ ಮಾರ್ಗಸೂಚಿ; ಚೌತಿ ಸಂಭ್ರಮಕ್ಕೆ ಕೋವಿಡ್ ಛಾಯೆ

07:51 PM Aug 20, 2020 | mahesh |

ಕಾರ್ಕಳ: ಗಣೇಶ ಹಬ್ಬ ಬಂತೆಂದರೆ, ತಿಂಗಳುಗಳ ಕಾಲ ಹಳ್ಳಿ, ನಗರಗಳ ಗಲ್ಲಿ, ಓಣಿಗಳಲ್ಲಿ ನಿತ್ಯ ಸದ್ದು ಗದ್ದಲ. ಸಾಂಸ್ಕೃತಿಕ ಕಾರ್ಯಕ್ರಮ, ಆರ್ಕೆಸ್ಟ್ರಾಕ್ಕೆ ಹೆಚ್ಚಿನ ಬೇಡಿಕೆ. ಆದರೆ ಇದಕ್ಕೆಲ್ಲ ಕೊರೊನಾ ಹೊಡೆತ ಬಾಧಿಸಿದೆ. ಸರಕಾರದ ಕೊನೆ ಕ್ಷಣದ ಆದೇಶದಿಂದಲೂ ಗೊಂದಲಗಳು ಏರ್ಪಟ್ಟಿವೆ.

Advertisement

ಭಕ್ತಿ ಇರುವಲ್ಲಿ ಭಯ!
ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಿದ್ದರೂ ಮೂರ್ತಿ ಸ್ಥಾಪನೆ, ಧಾರ್ಮಿಕ ವಿಧಾನಗಳಿಗಷ್ಟೇ ಸೀಮಿತ. ಮೆರವಣಿಗೆ, ಆರ್ಕೆಸ್ಟ್ರಾಗಳಿಗೆ ಈ ಬಾರಿ ಅವಕಾಶವಿಲ್ಲ. ಸೋಂಕು ತಡೆಗಾಗಿ ಮಾರ್ಗ ಸೂಚಿಗಳನ್ನು ಆಯೋಜಕರು, ಭಕ್ತರು ಅಳವಡಿಸಿಕೊಳ್ಳುವುದು ಅನಿವಾರ್ಯ ವಾಗಿದೆ. ಕೊರೊನಾದಿಂದಾಗಿ ಭಕ್ತಿ ಇರು ವಲ್ಲಿ ಈಗ ಭಯದ ವಾತಾವರಣವಿದೆ.

ಗಣೇಶ ಮೂರ್ತಿಗೆ ದಿಢೀರ್‌ ಬೇಡಿಕೆ
ಸಾರ್ವಜನಿಕ ಮೂರ್ತಿ ಸ್ಥಾಪನೆಗೆ ಕೊನೆ ಕ್ಷಣದಲ್ಲಿ ಸರಕಾರ ಅವಕಾಶ ನೀಡಿದ್ದರಿಂದ ಮೂರ್ತಿ ತಯಾರಕರು ಮತ್ತು ಆಯೋಜಕರು ಗೊಂದಲಕ್ಕೆ ಒಳಗಾಗಿದ್ದಾರೆ. ಪರಿಷ್ಕೃತ ಆದೇಶ ಹೊರಬಿದ್ದ ಮೇಲೆ 2 ದಿನಗಳಿಂದ ಮೂರ್ತಿಗಳಿಗೆ ಬೇಡಿಕೆ ಬರಲಾರಂಭಿಸಿದೆ. ಇನ್ನು ಕೆಲವರು ಫೆಬ್ರವರಿ ಮಾಘ ಮಾಸ ಹಾಗೂ ನವರಾತ್ರಿ ಉತ್ಸವದ ಚೌತಿಯಂದು ಹಬ್ಬ ಆಚರಿಸಲು ಉದ್ದೇಶಿಸಿದ್ದಾರೆ.

ಮನೆಗಳಿಂದ ಬೇಡಿಕೆ
ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ದೊಡ್ಡ ಗಾತ್ರದ ಗಣಪತಿ ಹಾಗೂ ಮನೆಗಳಲ್ಲಿ ಪೂಜಿಸುವವರು ಸಣ್ಣ ಗಾತ್ರದ ಮೂರ್ತಿಗೆ ಬೇಡಿಕೆ ಇಡುತ್ತಿದ್ದರು. ಈ ಬಾರಿ ಸಾರ್ವಜನಿಕರಿಂದ ಬೇಡಿಕೆ ಕಡಿಮೆ, ಮನೆಗಳಲ್ಲಿ ಪೂಜಿಸುವವರಿಂದ ಬೇಡಿಕೆ ಕಮ್ಮಿಯಾಗಿಲ್ಲ. ಕಳೆದ ವರ್ಷ 240 ಮೂರ್ತಿಗಳಿಗೆ ಬೇಡಿಕೆಯಿತ್ತು. ದೊಡ್ಡ ಗಾತ್ರದ್ದೂ ಅದರಲ್ಲಿ ಸೇರಿತ್ತು. ಈ ಬಾರಿ 180ರಿಂದ 190ಕ್ಕೆ ಇಳಿದಿದೆ. -ಪ್ರೇಮಾನಂದ ಎಣ್ಣೆಹೊಳೆ, ಮೂರ್ತಿ ತಯಾರಕರು

ಬೆಳ್ಮಣ್‌: ಕೋವಿಡ್ ಆತಂಕದಿಂದಾಗಿ ಸಾರ್ವಜನಿಕ ಗಣೇಶೋತ್ಸವಗಳು ಅನಿಶ್ಚಿತ‌ತೆಯಲ್ಲಿದ್ದರೂ ಬೆಳ್ಮಣ್‌ನಲ್ಲಿ ಮೂರ್ತಿ ತಯಾರಿಕೆ ಅಂಗಡಿ ಹೊಂದಿರುವ ಕಲಾವಿದ ಬೋಳ ಸುಧಾಕರ ಆಚಾರ್ಯ ಅವರು ಈಗಾಗಲೇ 20 ವಿಗ್ರಹಗಳನ್ನು ತಯಾರಿಸಿದ್ದಾರೆ. ಕಳೆದ ವರ್ಷ 23 ವಿಗ್ರಹಗಳನ್ನು ತಯಾರಿಸಿದ್ದ ಸುಧಾಕರ ಆಚಾರ್ಯ ಅವರು ಈ ಬಾರಿ 19 ವಿಗ್ರಹಗಳನ್ನು ಬೆಳ್ಮಣ್‌ನಲ್ಲಿ ತಯಾರಿಸುತ್ತಿದ್ದಾರೆ. ಹುಟ್ಟೂರು ಬೋಳ ವಂಜಾರಕಟ್ಟೆಯ ವಿಗ್ರಹ ಅಲ್ಲೇ ಸಹೋದರ ತಯಾರಿಸುತ್ತಿದ್ದಾರೆ. ಈ ವರ್ಷ ಕೇವಲ ವಿಗ್ರಹ ಅಳತೆಯ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸಗಳು ಆಗಿಲ್ಲ ಎಂದಿದ್ದಾರೆ ಸುಧಾಕರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next