Advertisement
ಹಾಸನದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಆಸ್ಪತ್ರೆ ಮುಖ್ಯ ಕಟ್ಟಡವನ್ನು ಕೊರೊನಾಆಸ್ಪತ್ರೆಯಾಗಿ ಘೋಷಣೆ ಮಾಡಿ 400 ಹಾಸಿಗೆಗಳನ್ನುಕೊರೊನಾ ಸೋಂಕಿತರಿಗೆ ವ್ಯವಸ್ಥೆ ಮಾಡಲಾಗಿದೆ. 7ತಾಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ 235 ಹಾಸಿಗೆಹಾಗೂ 6 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ220 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.
Related Articles
Advertisement
ಇತರೆ ರೋಗಿಗಳಿಗೆ ವ್ಯವಸ್ಥೆ: ಹಾಸನ ಹಿಮ್ಸ್‌ನಲ್ಲಿಕೊರೊನಾ ಸೋಂಕಿತರ ಹೊರತಾಗಿ ಪ್ರತ್ಯೇಕಕಟ್ಟಡದಲ್ಲಿ 350 ಹಾಸಿಗೆಗಳ ಕೊರೊನೇತರರೋಗಿಗಳ ಚಿಕಿತ್ಸೆಗಾಗಿ ಮತ್ತು ಹೊರ ರೋಗಿಗಳಿಗೆಹಳೆ ಕೋರ್ಟ್ ಕಟ್ಟಡದಲ್ಲಿ ಚಿಕಿತ್ಸೆಗೆ ವ್ಯವಸ್ಥೆಮಾಡಲಾಗಿದೆ. 7 ತಾಲೂಕು ಕೇಂದ್ರದಆಸ್ಪತ್ರೆಗಳಲ್ಲೂ ತಲಾ 70 ಹಾಸಿಗೆ ಚಿಕಿತ್ಸೆಗೆ ಲಭ್ಯವಿವೆ.ಹೀಗಾಗಿ ಕೊರೊನೇತರ ರೋಗಿಗಳ ಚಿಕಿತ್ಸೆಗೆಹಾಸಿಗೆಗಳ ಕೊರತೆಯಿಲ್ಲ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರು ಮತ್ತುಎಂಬಿಬಿಎಸ್ ವೈದ್ಯರು ಸೇರಿ ಒಟ್ಟು 286 ವೈದ್ಯಹುದ್ದೆಗೆ ಬದಲಾಗಿ 216 ವೈದ್ಯ ಹುದ್ದೆಭರ್ತಿಯಾಗಿದ್ದು, 70 ಹುದ್ದೆ ಖಾಲಿಯಿವೆ.
ಆಕ್ಸಿಜನ್ ವ್ಯವಸ್ಥೆ: ಹಿಮ್ಸ್‌ನಲ್ಲಿ 13,000 ಕಿಲೋಲೀಟರ್ ಸಾಮರ್ಥಯದ ಆಕ್ಸಿಜನ್‌ಘಟಕವಿರುವುದರಿಂದ ಆಕ್ಸಿಜನ್‌ನ ಸಮಸ್ಯೆಯಿಲ್ಲ.ಮೀಸಲಿರಿಸಿರುವ 400 ಹಾಸಿಗೆಗಳಿಗೂ ಆಕ್ಸಿಜನ್‌ಹರಿವಿನ ವ್ಯವಸ್ಥೆಯಿದೆ. ತಾಲೂಕು ಕೇಂದ್ರದಆಸ್ಪತ್ರೆಗಳಲ್ಲೂ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ್ದುತಲಾ 24 ಜಂಬೋ ಸಿಲಿಂಡರ್ ಪ್ರತಿ ತಾಲೂಕುಆಸ್ಪತ್ರೆಗಳಿಗೂ ಸರಬರಾಜು ಮಾಡಲಾಗಿದೆ.ಇನ್ನುಳಿದಂತೆ ಸಮುದಾಯ ಆರೋಗ್ಯ ಕೇಂದ್ರಕ್ಕೆಆಕ್ಸಿಜನ್ ವ್ಯವಸ್ಥೆಗಾಗಿ ತಲಾ 18 ಜಂಬೋ ಸಿಲಿಂಡರ್‌ಗಳಂತೆ ಒಟ್ಟು 270 ಅಗತ್ಯವಿದೆ.
ರೆಮ್‌ಡಿಸಿವಿರ್ ಕೊರತೆ: ಸರ್ಕಾರಿ ಆಸ್ಪತ್ರೆಕೊರೊನಾ ಸೋಂಕಿತರಿಗೆ ರೆಮ್‌ಡಿಸಿವಿರ್‌ಚುಚ್ಚುಮದ್ದುಗಳ ಕೊರತೆ ಎದುರಾಗಿಲ್ಲ. ಆದರೆಖಾಸಗಿ ಆಸ್ಪತ್ರೆಗೆ ಅಗತ್ಯದಷ್ಟು ರೆಮ್‌ಡಿಸಿವಿರ್‌ಚುಚ್ಚುಮದ್ದು ಪೂರೈಕೆಯಾಗುತ್ತಿಲ್ಲ. ಪ್ರತಿದಿನ 1000ಪಾಟಿಟಿವ್ ಪ್ರಕರಣ ವರದಿಯಾಗುತ್ತಿದ್ದು, ಅಂದಾ ಜುಪ್ರತಿದಿನ 320 ಜನರಿಗೆ ರೆಮ್‌ಡಿಸಿವಿರ್ ಚುಚ್ಚುಮದ್ದುಅಗತ್ಯವಿದೆ. ಮುಂದಿನ 15 ದಿನಕೆ R 5000 ವಯಲ್‌ರೆಮ್‌ಡಿಸಿವಿರ್ ಚುಚ್ಚುಮದ್ದು ಅಗತ್ಯವಿದೆ ಎಂದುಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಎನ್.ನಂಜುಂಡೇಗೌಡ