ನೆಲಮಂಗಲ: ಕೊರೊನಾ ಸೋಂಕಿತ ಮಹಿಳೆಗೆಆ್ಯಂಬುಲೆನ್ಸ್ ಹಾಗೂ ಬೆಡ್ ಸಿಗದ ಪರಿಣಾಮಕಾರಿನ ಸೀಟ್‌ನಲ್ಲಿಯೇ ಚಿಕಿತ್ಸೆ ಪಡೆಯವಂತಹದುಸ್ಥಿತಿ ತಾಲೂಕಿನಲ್ಲಿ ಎದುರಾಗಿದೆ.ನಗರದ ಸರ್ಕಾರಿ ಆಸ್ಪತ್ರೆಗೆ ಉಸಿರಾಟದಿಂದಬಳಲುತ್ತಿದ್ದ ಕೊರೊನಾ ಸೋಂಕಿತ ಮಹಿಳೆಯೊಬ್ಬರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆತಂದು ಬೆಡ್‌ನೀಡುವಂತೆ ಬೇಡಿಕೊಂಡರೂ ಹಾಸಿಗೆ ದೊರೆಯದಪರಿಣಾಮ ಕಾರಿನ ಸೀಟನ್ನು ಬೆಡ್ ಆಗಿ ಪರಿವರ್ತನೆಮಾಡಿಕೊಂಡು ಚಿಕಿತ್ಸೆ ನೀಡುವಂತೆ ನರಳಾಡಿದಅಮಾನವೀಯ ದೃಶ್ಯ ಶನಿವಾರ ಕಂಡುಬಂದಿದೆ.
ನರಳಾಡಿದ ಮಹಿಳೆ: ಪಟ್ಟಣ ಸಮೀಪದ ಮತ್ತಹಳ್ಳಿ ಗ್ರಾಮದ ಮಹಿಳೆ ರತ್ನ ಎಂಬಾಕೆ ಕೋವಿಡ್‌ಕೊರೊನಾ ಸೋಂಕು ದೃಢವಾದ ನಂತರಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದಕ್ಕೆಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ.
ಆ್ಯಂಬುಲೆನ್ಸ್‌ಸಿಗದ ಕಾರಣ ಕಾರಿನಲ್ಲಿ ಶುಕ್ರವಾರ ಸರ್ಕಾರಿ ಆಸ್ಪತ್ರೆಗೆಕರೆತಂದಿದ್ದು, ಎಷ್ಟೇ ಪರದಾಡಿದರೂ ಬೆಡ್ ಸಿಕ್ಕಿಲ್ಲ,ರಾತ್ರಿ ವಾಪಸ್ ಮನೆಗೆ ಹೋಗಿ ಶನಿವಾರ ಬೆಳಗ್ಗೆಸರ್ಕಾರಿ ಆಸ್ಪತ್ರೆ ಬಳಿ ಬಂದರೂ ಆಕ್ಸಿಜನ್ ಬೆಡ್‌ಇಲ್ಲ ಎಂಬ ಮಾತು ಕೇಳಿ ಕಾರಿನಲ್ಲಿ ಬೆಡ್‌ಹಾಕಿಕೊಂಡು ಇಲ್ಲಿಯೇ ಚಿಕಿತ್ಸೆ ನೀಡುವಂತೆ ಮಹಿಳೆಯ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಐದಾರು ಗಂಟೆಗಳ ಕಾಲ ಕಾರಿನಲ್ಲಿ ನರಳಾಡಿದಮಹಿಳೆಗೆ ಕಾರಿನಲ್ಲಿಯೇ ಚಿಕಿತ್ಸೆಯನ್ನುನೀಡಲಾಗಿದ್ದು, ಬೆಡ್ ವ್ಯವಸ್ಥೆ ಮಾಡುವಭರವಸೆಯನ್ನು ಅಧಿಕಾರಿಗಳು ಹೇಳಿದ್ದಾರೆ.
ಕಣ್ಣೀರು: ಮಹಿಳೆಯ ಕುಟುಂಬಸ್ಥರು ಒಂದು ಆಕ್ಸಿಜನ್ ಬೆಡ್ ನೀಡುವಂತೆ ಕಣ್ಣೀರಿಟ್ಟು ಬೇಡಿಕೊಂಡರೂ ಬೆಡ್ ಸಿಕ್ಕಿಲ್ಲ, ತಾಯಿಯನ್ನುಉಳಿಸಿಕೊಳ್ಳಲು ಮಕ್ಕಳು ಸಾಕಷ್ಟು ಪರದಾಡಿದು,ªಕೊನೆಯಲ್ಲಿ ಕಾರಿನಲ್ಲಿ ಬೆಡ್ ವ್ಯವಸ್ಥೆ ಮಾಡಿಕೊಂಡುಚಿಕಿತ್ಸೆಯನ್ನು ನೀಡುವಂತೆ ಬೇಡಿಕೊಂಡಿದ್ದಾರೆ.ಎಷ್ಟೇ ಅಂಗಲಾಚಿದರೂ ಬೆಡ್ ಮತ್ತು ಸೂಕ್ತ ಚಿಕಿತ್ಸೆಲಭ್ಯವಾಗುತ್ತಿಲ್ಲ ಎಂದು ಕುಟುಂಬ ಸದಸ್ಯರುಅಳಲು ತೋಡಿಕೊಂಡಿದ್ದಾರೆ.