Advertisement

ಮನೆ ಊಟ ನೀಡುತ್ತಿರುವ ದಂಪತಿ

03:35 PM May 02, 2021 | Team Udayavani |

ಬೆಂಗಳೂರು: ನಗರದ ಬನಶಂಕರಿ ಸುತ್ತಮುತ್ತಲಿನ ಕೊರೊನಾ ಸೋಂಕಿತರಿಗೆ ಮಧ್ಯಾಹ್ನಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡುತ್ತಿರುವದಂಪತಿ. ಪದ್ಮ ನಾಭನಗರದ ನಿತ್ಯ ಮತ್ತುಮಿಥಿಲ್‌ ದಂಪತಿಯು ನಿತ್ಯವೂ ನಿರ್ದಿಷ್ಟಸಂಖ್ಯೆಯಲ್ಲಿ ಕೊರೊನಾ ಸೋಂಕಿತರಿಗೆಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

Advertisement

ಮಧ್ಯಾಹ್ನದಊಟಕ್ಕೆ ಅನ್ನ, ಸಾರು, ಒಂದು ಬಗೆಯ ಪಲ್ಯಹಾಗೂ ಉಪ್ಪಿನ ಕಾಯಿ, ರಾತ್ರಿ ಊಟಕ್ಕೆಚಪಾತಿ, ಚಿತ್ರಾನ್ನ ಅಥವಾ ಮೊಸರಾನ್ನ, ಒಂದುಬಗೆಯ ಪಲ್ಯ ನೀಡುತ್ತಿದ್ದಾರೆ. ಹಿಂದಿನ ದಿನವೇಊಟದ ಅಗತ್ಯ ಇದೆ ಎಂದು ಹೇಳಿದವರಿಗೆ ಮನೆಯಲ್ಲೇ ಅಡುಗೆ ಮಾಡಿ, ಆನ್‌ಲೈನ್‌ವ್ಯವಸ್ಥೆ ಮೂಲಕ ಸಂಬಂಧಪಟ್ಟವರಿಗೆ ಕಳುಹಿಸಲಾಗುತ್ತದೆ.

ಆನ್‌ಲೈನ್‌ ಮೂಲಕಊಟ ಕಳುಹಿಸುವುದರಿಂದ ಇದರ ಶುಲ್ಕವನ್ನುಊಟ ಪಡೆಯುವವರಿಗೆ ಭರಿಸಬೇಕು ,ಪ್ಯಾಕಿಂಗ್‌ ಶುಲ್ಕವನ್ನು ಪಡೆಯುತ್ತೇವೆ. ನಿತ್ಯವೂ10ರಿಂದ 15 ಮಂದಿಗೆ ಊಟಕಳುಹಿಸುತ್ತಿದ್ದೇವೆ. ಅವರ ಅನುಕೂಲಕ್ಕಾಗಿನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟುಸಹಾಯ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಈ ಕಾರ್ಯ ಮಾಡುತ್ತಿದ್ದೇವೆ ಎಂದುನಿತ್ಯಾ ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next