Advertisement

ಸಾಂಕ್ರಾಮಿಕದ ಪರಿಣಾಮ : ಹೊಟೇಲೂಟ ಕೋವಿಡ್ ಗೆ ಬಲಿ!

01:12 AM Feb 10, 2021 | Team Udayavani |

ಹೊಸದಿಲ್ಲಿ: ಕೊರೊನಾ ಲಾಕ್‌ಡೌನ್‌ ಮತ್ತು ಆ ಬಳಿಕ ಭಾರತದ ನಗರಗಳ ನಿವಾಸಿಗಳು ಹೊಟೇಲ್‌ ಊಟವನ್ನು ಕಡಿಮೆ ಮಾಡಿದ್ದಾರೆ. ಆನ್‌ಲೈನ್‌ ಶಾಪಿಂಗ್‌ ನಲ್ಲಿ ಹೆಚ್ಚು ಸಮಯ ಮತ್ತು ಹಣವನ್ನು ವ್ಯಯಿಸುತ್ತಿದ್ದಾರೆ ಹಾಗೂ ಅಗತ್ಯ ವಸ್ತುಗಳಿಗಾಗಿ ಹತ್ತಿರದ ಕಿರಾಣಿ ಅಂಗಡಿಗಳನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ.

Advertisement

ಕೊರೊನಾ ಸಾಂಕ್ರಾಮಿಕದಿಂದಾಗಿ ಗ್ರಾಹಕರ ಬದಲಾಗಿರುವ ಖರೀದಿ ಜಾಯಮಾನದ ಬಗ್ಗೆ ಇಪ್ಸೋಸ್‌ ಎಂಬ ಸಂಸ್ಥೆ ಜಾಗತಿಕ ಮಟ್ಟದಲ್ಲಿ ನಡೆಸುತ್ತಿರುವ ಅಧ್ಯಯನದಲ್ಲಿ ಕಂಡುಬಂದಿರುವ ಅಂಶಗಳಿವು.

ಇಪ್ಸೋಸ್‌ ಜಾಗತಿಕವಾಗಿ 28 ಮಾರುಕಟ್ಟೆಗಳಲ್ಲಿ 20,504 ವಯಸ್ಕರನ್ನು ಈ ಅಧ್ಯಯನಕ್ಕಾಗಿ ಸಂದರ್ಶಿಸಿದೆ. 2020ರ ನ. 20ರಿಂದ ಡಿ. 4ರ ನಡುವೆ ಇದನ್ನು ಕೈಗೊಳ್ಳಲಾಗಿದೆ.

ಹೊಟೇಲೂಟಕ್ಕೆ ವಿದಾಯ
ಭಾರತೀಯ ನಗರ ನಿವಾಸಿಗಳು: ಶೇ. 50
ಜಾಗತಿಕ: ಶೇ. 63 ಮಂದಿ

ಭಾರತದಲ್ಲಿ
ಆಹಾರ ಪಾರ್ಸೆಲ್‌ ಇಳಿಕೆ: ಶೇ. 41
ಆನ್‌ಲೈನ್‌ ಶಾಪಿಂಗ್‌ ನೆಚ್ಚಿಕೊಂಡವರು: ಶೇ. 43

Advertisement

ಕೃಷಿಕರು, ಸಣ್ಣ ಉತ್ಪಾದಕರಿಗೆ ಪ್ರೋತ್ಸಾಹ: ಶೇ. 45
ಸ್ಥಳೀಯ ಕಿರಾಣಿ ಅಂಗಡಿ ಭೇಟಿ: ಶೇ. 40 ಜಾಗತಿಕವಾಗಿ: ಶೇ. 54

Advertisement

Udayavani is now on Telegram. Click here to join our channel and stay updated with the latest news.

Next