ಸಕಲೇಶಪುರ: ಲಾಕ್‌ಡೌನ್ ಪರಿಣಾಮ ತಾಲೂಕಿನಲ್ಲಿಬೆಳೆಯುವ ಬೀನ್ಸ್‌ಗೆ ಬೇಡಿಕೆಯಿಲ್ಲದಂತಾಗಿದ್ದು, ಖರ್ಚುಮಾಡಿ ಲಾಭದ ಕನಸು ಕಂಡಿದ್ದ ಕೃಷಿಕರು ಇದೀಗ ನಷ್ಟಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ತಾಲೂಕಿನ ಹೊಂಗಡಹಳ್ಳ, ಅತ್ತಿಹಳ್ಳಿ, ಬಿಳುತಾಳ್ ಇನ್ನುಹಲವೆಡೆ ಉಪಬೆಳೆಯಾಗಿ ಬೆಳೆಯುತ್ತಿದ್ದ ಬೀನ್ಸ್‌ನ್ನು ಇತ್ತೀಚಿನದಿನಗಳಲ್ಲಿ ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ.
ಈ ಹಿಂದೆ ಮ®ಯ ೆ ಅಗತ್ಯವನ್ನು ಪೂರೈಸಿಕೊಳ್ಳಲು ಬೆಳೆಯಲಾಗುತ್ತಿದ್ದ ಬೀನ್ಸ್ ನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಆರಂಭಿಸಿದ್ದರಿಂದ ಬೆಳೆಯಮಾರುಕಟ್ಟೆ ರಾಜ್ಯದ ಹಲವೆಡೆಗೆ ವಿಸ್ತರಿಸಿದೆ.ಬೆಲೆಕುಸಿತ:ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು,ಹಾಸನ,ರಾಮನಗರ ಇನ್ನು ಹಲವೆಡೆಗೆ ತಾಲೂಕಿನಿಂದ ಬೀನ್ಸ್ ಮಾರುಕಟ್ಟೆಗೆಹೋಗುತ್ತಿದ್ದು, ಉತ್ತಮ ಧಾರಣೆ ದೊರಕುತ್ತಿತ್ತು.
ಇದೀಗ ಲಾಕ್‌ಡೌನ್ ಪರಿಣಾಮ ಬೀನ್ಸ್‌ಗೆ ಬೇಡಿಕೆಯಿಲ್ಲದಂತಾಗಿ ಬೆಲೆಸಂಪೂರ್ಣವಾಗಿ ಕುಸಿತ ಕಂಡಿದೆ.ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್ ವರೆಗೆ ಬೀನ್ಸ್ ಬೆಳೆಬೆಳೆಯಲಾಗುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ಕುಟುಂಬಗಳುತಾಲೂಕಿನಲ್ಲಿಈ ಕೃಷಿಯಲ್ಲಿ ತೊಡಗಿಸಿಕೊಂಡಿದೆ.
ಈಹಿಂದೆಕೆಲವರುಮಾತ್ರ ಸಾಂಪ್ರಾದಾಯಿಕ ಶೈಲಿಯಲ್ಲಿ ಬೀನ್ಸ್ ಬೆಳೆಯುತ್ತಿದ್ದರು.ಆದರೆ, ಇತ್ತೀಚೆಗೆ ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿಗ್ರಾಮಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಹಲವು ಯುವಕರು ಹನಿನೀರಾವರಿಪದ್ಧತಿಯನ್ನು ಅಳವಡಿಸಿಕೊಂಡು ವ್ಯಾಪಕಖರ್ಚುಮಾಡಿಬೀನ್ಸ್ ಬೆಳೆಯಲು ಮುಂದಾಗಿದ್ದು, ಇದರಿಂದ ಉತ್ಪಾದನೆ ಹೆಚ್ಚಾಗಿಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಲುಪಿಸಲು ಆಗುತ್ತಿಲ್ಲ.
ಕುಯ್ಲು ಮಾಡಿಲ್ಲ: ಮಾರುಕಟ್ಟೆಗೆ ಜನ ಸಹ ಹೆಚ್ಚಾಗಿ ಬರುತ್ತಿಲ್ಲದಕಾರಣ ಮಧ್ಯವರ್ತಿಗಳು ಸಹ ಬೀನ್ಸ್ ಕೊಳ್ಳಲು ಮುಂದಾಗುತ್ತಿಲ್ಲ.ಕಳೆದ ವರ್ಷ ಕೆ.ಜಿ.ಗೆ 20ರಿಂದ 25 ರೂ.ಗಳಿದ್ದ ಬೀನ್ಸ್ ಇದೀಗಕೆ.ಜಿ.ಗೆ5 ರಿಂದ8 ರೂ.ಗಳಿಗೆಕುಸಿದಿದ್ದು, ಇದರಿಂದ ರೈತರಿಗೆ ಅಪಾರನಷ್ಟವುಂಟಾಗುತ್ತಿದ್ದು, ಹಲವು ರೈತರು ಬೇಸತ್ತು ಬೀನ್ಸ್ ಕುಯ್ಲುಮಾಡದೆ ಹಾಗೆಯೇ ಬಿಟ್ಟಿದ್ದಾರೆ.
ಸುಧೀರ್‌ಎಸ್.ಎಲ್