Advertisement

ಇಂದಿನಿಂದ ಆದ್ಯತಾ ವಲಯದ ಸಿಬ್ಬಂದಿಗೆ ಲಸಿಕೆ

04:25 PM May 22, 2021 | Team Udayavani |

ರಾಮನಗರ: ಆದ್ಯತಾ ವಲಯದ 18 ವರ್ಷಮೇಲ್ಪಟ್ಟು 45 ವರ್ಷ ಒಳಗಿನ ವಯೋಮಾನದವರಿಗೆ ಕೋವಿಡ್‌ ಲಸಿಕೆ ಶನಿವಾರದಿಂದ ನೀಡುವುದಾಗಿ ಜಿಲ್ಲಾಧಿಕಾರಿ ಡಾ.ರಾಕೇಶ್‌ ಕುಮಾರ್‌.ಕೆ. ತಿಳಿಸಿದರು.

Advertisement

ನಗರದ ಅವರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೆಟ್ರೋಲ್‌ಬಂಕ್‌ ಉದ್ಯೋಗಿಗಳು, ಟೆಲಿಕಾಂ ಮತ್ತುಇಂಟರ್‌ನೆಟ್‌ ಸೇವಾದಾರರು, ವಿಮಾನಯಾನ ಸಂಸ್ಥೆ ಸಿಬ್ಬಂದಿ, ಕಟ್ಟಡ ಕಾರ್ಮಿಕರು,ಕೆ.ಎಂ.ಎಫ್ ಸಿಬ್ಬಂದಿ, ರೈಲ್ವೆ ಸಿಬ್ಬಂದಿ, ಅರಣ್ಯಇಲಾಖೆ ಸಿಬ್ಬಂದಿ, ಗಾರ್ಮೆಂಟ್‌ ಕಾರ್ಖಾನೆಗಳಸಿಬ್ಬಂದಿ, ಜೈಲು ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ,ಚಿತ್ರೋದ್ಯಮದ ಸಿಬ್ಬಂದಿ, ಅಡ್ವೋಕೇಟ್‌ಗಳು, ಹೋಟೆಲ್‌ ಮತ್ತು ಆತಿಥ್ಯಸೇವಾದಾರರು, ಕೆ.ಎಂ.ಎಫ್ ಸಿಬ್ಬಂದಿ, ರಾಜ್ಯಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವ ಆಟಗಾರರು, ಸ್ಪರ್ಧಾ ‌r ಗೃಹ ವಾಸಿಗಳು ಮತ್ತುರಾಜ್ಯ ಮಹಿಳಾ ನಿಲಯವಾಸಿಗಳು (ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ),ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ಸಂಸ್ಥೆಯ ಸಿಬ್ಬಂದಿಗೆ ಲಸಿಕೆ ಸಿಗಲಿದೆ. ಈಕಾರ್ಯಕ್ಕೆ ನೋಡಲ್  ಅಧಿಕಾರಿಗಳನ್ನು ನೇಮಕ ಮಾಡಿಲಸಿಕೆನೀಡಲಾಗುವುದುಎಂದುಮಾಹಿತಿ ನೀಡಿದರು.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಮಸ್ಯೆ ಇಲ್ಲ ಜಿಲ್ಲೆಯಲ್ಲಿ  45 ವರ್ಷ ಮೇಲ್ಪಟ್ಟ ವಯೋಮಾನದ ನಾಗರಿಕರಿಗೆ ಲಸಿಕೆ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದಅವರು,ಕೋವಿಶೀಲ್ಡ್‌ ಲಸಿಕೆ ಲಭ್ಯವಿದೆ.ಆದರೆ ಕೊವ್ಯಾಕ್ಸಿನ್‌ 2ನೇ ಡೋಸ್‌ಗೆ ಮಾತ್ರ ಸಿಗಲಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 45 ವರ್ಷಮೇಲ್ಪಟ್ಟವರಿಗೆ ಮೊದಲನೇ ಡೋಸ್‌ ಲಸಿಕೆ ಶೇ.57 ಹಾಗೂ ಎರಡನೇ ಡೋಸ್‌ ಶೇ.38 ಜನರಿಗೆಸಿಕ್ಕಿದೆ ಎಂದರು.5 ಮಂದಿಗೆ ಬ್ಲ್ಯಾಕ್‌ ಫಂಗಸ್‌ ಜಿಲ್ಲೆಯಲಿ ಇಲ್ಲಿಯವರೆಗೆ 5 ಮಂದಿಯಲ್ಲಿ ಬ್ಲ್ಯಾಕ್‌ ಫಂಗಸ್‌ಪ್ರಕರಣಗಳು ವರದಿಯಾಗಿದೆ.

ಸದ್ಯ ಇವರನ್ನುಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆದಾಖಲಿಸಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳುಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಸೂಲಿಮಾಡಿದರೆ ದೂರು ದಾಖಲಿಸಿ ಎಂದರು.ಆರೋಗ್ಯ ಶಿಬಿರಗಳು ಗ್ರಾಪಂ ಮಟ್ಟದಲ್ಲಿಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಮೂಲಕ ಕೋವಿಡ್‌ಲಕ್ಷಣ ಉಳ್ಳವರ ಸರ್ವೆ ನಡೆಸುತ್ತಿದ್ದಾರೆ.

ಎಲ್ಲಾ ತಾಲೂಕುಗಳಲ್ಲಿ ಪ್ರತಿ ದಿನ 3 ಗ್ರಾಮಗಳಲ್ಲಿಆರೋಗ್ಯ ಶಿಬಿರ ಆಯೋಜಿಸಲಾಗುವುದು.ಆರೋಗ್ಯ ಶಿಬಿರದಲ್ಲಿ ಕೋವಿಡ್‌ ಲಕ್ಷಣ ಉಳ್ಳವರು ಪತ್ತೆಯಾದರೆ ಸ್ಥಳದಲ್ಲೇ ಸ್ವಾಬ್‌ ಸಂಗ್ರಹಿಸಲಾಗುವುದು. ಕೋವಿಡ್‌ ವರದಿ ಬರುವವರೆಗೂ ಕಾಯದೆ ಲಕ್ಷಣಗಳಿಗೆ ಅಗತ್ಯ ಚಿಕಿತ್ಸೆಆರಂಭಿಸಲಾಗುವುದು ಎಂದರು.ಈ ಕೆಲಸಕ್ಕಾಗಿ ಪ್ರಾಥಮಿಕ ‌ ಆರೋಗ್ಯಕೇಂದ್ರ ‌ಎಎಂಒಗಳನ್ನು ನಿಯೋಜಿಸಲಾಗಿದೆ. ಎಪಿಚ್‌ಸಿಗಳಿಗೆ ಔಟ್‌ ಸರ್ಜನ್‌ಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಗಿರೀಶ್‌, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್‌, ಆರ್‌.ಸಿ.ಎಚ್‌. ಅಧಿಕಾರಿ ಡಾಪದ್ಮ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next