ಮೈಸೂರು: ಲಕ್ಷ ಸಂಬಳ ಕೊಟ್ಟರೂ ವೈದ್ಯಕೀಯಸಿಬ್ಬಂದಿ ಸಿಗದ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು,ಶುಶ್ರೂಷಕಿಯರು ಮಾನವೀಯತೆ ದೃಷ್ಟಿಯಿಂದಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸುತ್ತಿರುವುದುಮಾದರಿಯಾಗಿದೆ.ಸೋಂಕಿತರ ಚಿಕಿತ್ಸೆಗಾಗಿ ತುಳಸಿದಾಸ್ ಆಸ್ಪತ್ರೆಯಲ್ಲಿಆರಂಭಿಸಿರುವ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ15 ಮಂದಿ ವೈದ್ಯಕೀಯ ಸಿಬ್ಬಂದಿ ಸ್ವಯಂಪ್ರೇರಿತರಾಗಿ ಆಗಮಿಸಿ ಕಾರ್ಯನಿರ್ವಹಿಸುವ ಮೂಲಕ ಕೊರೊನಾಸಂಕಷ್ಟದ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಹೆಗಲು ಕೊಟ್ಟಿದ್ದಾರೆ.
ಅಸಹಾಯಕತೆ: ಮೈಸೂರಿನಲ್ಲಿಬಹುತೇಕ ಆಸ್ಪತ್ರೆಗಳು ಸೋಂಕಿತರಿಂದಭರ್ತಿಯಾಗಿವೆ. ಜತೆಗೆ ಹೊಸಆಸ್ಪತ್ರೆಯನ್ನೂ ಕೊರೊನಾ ಚಿಕಿತ್ಸೆಗೆಆರಂಭಿಸ ಲಾಗಿದೆ. ಆದರೆ, ಅಗತ್ಯವೈದ್ಯರು, ನರ್ಸ್, ಪ್ಯಾರಾಮೆಡಿಕಲ್‌ಸಿಬ್ಬಂದಿ ಹೊಂದಿಸಿ ಕೊಳ್ಳುವುದು ಜಿಲ್ಲಾಡಳಿ ತಕ್ಕೆ ಸವಾಲಾಗಿದೆ.
ಇತ್ತೀಚೆಗೆ 60 ರಿಂದ 70ಸಾವಿರ ರೂ. ವೇತನಕ್ಕೆ ವೈದ್ಯರನ್ನು ಆಹ್ವಾನಿ ಸಿದ್ದರೂ,ಯಾರೊಬ್ಬರೂ ಹಾಜರಾಗಿರಲಿಲ್ಲ. ಪರಿಣಾಮಜಿಲ್ಲಾಡಳಿತ ವೈದ್ಯ ಕೀಯ ಸಿಬ್ಬಂದಿ ಕೊರತೆ ಎದುರಿಸುವಂತಾಗಿತ್ತು. ಜತೆಗೆ 1 ಲಕ್ಷ ರೂ. ಸಂಬಳ ಕೊಟ್ಟರೂವೈದ್ಯರು ಸಿಗುತ್ತಿಲ್ಲ ಎಂದು ಕೆಲ ದಿನಗಳ ಹಿಂದೆಶಾಸಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದ್ದರು.ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಕೆಲ ವೈದ್ಯರು,ನರ್ಸ್ ಹಾಗೂ ಸ್ವಯಂ ಸೇವಕರು ಮಾನವೀಯತೆಆಧಾರದಲ್ಲಿ ಯಾವ ಪ್ರತಿಫಲಾಪೇಕ್ಷೆ ಇಟ್ಟುಕೊಳ್ಳದೆತುಳಸಿದಾಸ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆಸಲ್ಲಿಸುತ್ತಿರುವುದು ಗಮನಾರ್ಹ ಸಂಗತಿ.ನಮ್ಮ ಓದು ಸಂಕಷ್ಟದಲ್ಲಿ ಬಳಕೆಯಾಗಬೇಕು: ತುಳಿಸಿದಾಸಪ್ಪ ಆಸ್ಪತ್ರೆಯಲ್ಲಿ 15 ವೈದ್ಯರು ಹಗಲು, ರಾತ್ರಿಪಾಳಿಯಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರೆ,ಅವರೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳೂ ಪಿಪಿಇಕಿಟ್ ತೊಟ್ಟು ವೈದ್ಯರಿಗೆ ಬೆನ್ನೆಲುಬಾಗಿದ್ದಾರೆ.
“ಉದಯವಾಣಿ’ ಯೊಂದಿಗೆ ಮಾತ ನಾಡಿದ ವೈದ್ಯ ಡಾಸಂಜನಾ,ಹಣ ಎಲ್ಲಾ ಸಂದರ್ಭ ದಲ್ಲೂ ಮುಖ್ಯವಲ್ಲ. ಸಂಕಷ್ಟದಸಂದರ್ಭದಲ್ಲಿ ನಮ್ಮ ಓದು ಬಳಕೆಯಾಗಬೇಕು. ಅದೇಮಾನವೀಯತೆ ಎಂದು ಹೇಳುತ್ತಾರೆ.
ತರಬೇತಿ: ಕೋವಿಡ್ ಆಸ್ಪತ್ರೆಯಲ್ಲಿ ಸಹಾಯಕರಾಗಿಸೇವೆ ಸಲ್ಲಿಸಲು ಉತ್ಸಾಹ ತೋರುವ ಸಾಮಾನ್ಯಜನರಿಗೆ ಕನಿಷ್ಠ ತರಬೇತಿ ನೀಡಿ, ಸೋಂಕಿತರನ್ನುಆ್ಯಂಬುಲೆನ್ಸ್ ನಿಂದ ಕರೆತರುವುದು, ಪಲ್ಸ… ಚೆಕ್‌ಮಾಡುವುದು, ಹಾಸಿಗೆ ರೆಡಿ ಮಾಡುವುದು, ವಯಸ್ಸಾದ ಸೋಂಕಿತರಿಗೆ ನೆರವು ಹೀಗೆ ಹಲವು ಕೆಲಸಗಳಿಗೆತೊಡಗಿಸಿ ಕೊಳ್ಳುವಂತೆ ಮಾಡಲಾಗಿದೆ.
ವಿವಿಧವೃತ್ತಯಲ್ಲಿ ತೊಡಗಿರುವ ಹತ್ತಾರು ಜನ ಕೊರೊನಾತಂಕ ಮರೆತು ಸ್ವಯಂ ಸೇವೆಯಲ್ಲಿ ತೊಡಗಿರುವುದುಇತರರಿಗೆ ಮಾದರಿಯಾಗಿದೆ. ಇವರೆಲ್ಲರ ಪರಿಶ್ರಮದಫಲವಾಗಿ ಕೋವಿಡ್ ಮಿತ್ರ ಎಂಬ ಟೆಲಿಮಾನಿಟರಿಂಗ್ ವ್ಯವಸ್ಥೆ ನಿರಾಯಾಸವಾಗಿ ನಡೆಯುತ್ತಿರುವುದು ಗಮನಾರ್ಹ.
ವಿವಿಧ ಸೇವೆ: ಮೈಸೂರಿನ ಸಿಟಿಜನ್ ಫೋರಂ ಸಂಸ್ಥೆಯಡಿ ಹಲವು ಸಂಘ-ಸಂಸ್ಥೆಗಳು ಕೋವಿಡ್ ಎದುರಿಸಲು ಸ್ವಯಂ ಸೇವೆಗೆ ತೊಡಗಿಸಿಕೊಂಡಿವೆ. ಕೋವಿಡ್‌ಮಿತ್ರದಲ್ಲಿ ಸೋಂಕಿತರ ನೋಂದಣಿ, ಬೆಡ್ ಅಲರ್ಟ್,ಮೆಡಿಷನ್ ಕಿಟ್, ಹೋಂ ಐಸೋಲೇಷನ್‌ನಲ್ಲಿರುವವರಿಗೆ ಟೆಲಿ ಮೆಡಿಷನ್ ಸೇವೆ ಸೇರಿ ಅನೇಕ ಕೆಲಸಗಳಲ್ಲಿ 40ಕ್ಕೂ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದಾರೆ.