Advertisement
ಇದು ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿದೆ.ಗ್ರಾಮಗಳಲ್ಲಿ ಸುಮಾರು 30ರಿಂದ 40 ಮಂದಿಗೆಸೋಂಕು ಆವರಿಸುತ್ತಿದ್ದು, ನಿಧಾನವಾಗಿಗ್ರಾಮಗಳಿಗೆ ವ್ಯಾಪಿಸುತ್ತಿದೆ.ಮಂಡ್ಯ ತಾಲೂಕಿನ 10 ಗ್ರಾಮ, ಕೆ.ಆರ್.ಪೇಟೆ 3,ಶ್ರೀರಂಗಪಟ್ಟಣ 12, ಮದ್ದೂರು 4 ಹಾಗೂ ಪಾಂಡವಪುರ 22, ನಾಗಮಂಗಲ 1 ಗ್ರಾಮಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಮಳವಳ್ಳಿ ತಾಲೂಕಿನ 7 ಗ್ರಾಮಗಳನ್ನು ಸೀಲ್‌ಡೌನ್ ಮಾಡಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ.
Related Articles
Advertisement
ಕಳೆದ 15 ದಿನಕ್ಕೆ 10 ಸಾವಿರ ಪ್ರಕರಣ: ಕಳೆದ 15ದಿನ ಗಳಿಂದ 10274 ಪ್ರಕರಣ ದಾಖಲಾಗಿದ್ದು, ಪರೀಕ್ಷೆಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚು ತ್ತಿದೆ.ಶೇಕಡವಾರು ಪ್ರಕರಣಗಳ ಸಂಖ್ಯೆ ದಾಖಲಾಗು ತ್ತಿದೆ.ಏ.17ರಂದು 224, ಏ.18ರಂದು 338, ಏ.19 ರಂದು279, ಏ.20ರಂದು 413, 21ರಂದು 492, 22ರಂದು385, 23ರಂದು 520, 24ರಂದು 688, 25ರಂದು812, 26ರಂದು 929, 27ರಂದು 737, 28ರಂದು935, 29ರಂದು 939, 30ರಂದು 1348, ಮೇ1ರಂದು 1235 ಪ್ರಕರಣ ದಾಖಲಾಗಿವೆ.
ಅದ ರಂತೆಇದೇ ಅವ ಧಿಯಲ್ಲಿ 4946 ಮಂದಿಚೇತರಿಸಿಕೊಂಡಿದ್ದಾರೆ.ಕ್ಷೇತ್ರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಮೊಕ್ಕಾಂಕೊರೊನಾ 2ನೇ ಅಲೆಯ ಸೋಂಕಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಾಂಡವಪುರದಲ್ಲಿ ಗ್ರಾಮಗಳು ಸೀಲ್‌ಡೌನ್ ಮಾಡಲಾಯಿತು. ಎಚ್ಚೆತ್ತ ಶಾಸಕ ಸಿ.ಎಸ್.ಪುಟ್ಟರಾಜು, ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿ ಸ್ವತಃಗ್ರಾಮಗಳಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಕೊರೊನಾದಿಂದ ಮೃತಪಟ್ಟವರಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ತಾಲೂಕಿನಲ್ಲಿ ಸೋಂಕುನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಅ ಧಿಕಾರಿಗಳ ಸಭೆ ನಡೆಸುತ್ತಾ, ಹೆಚ್ಚು ಸೋಂಕು ಕಂಡು ಬರುವಗ್ರಾಮಗಳ ಸೀಲ್‌ಡೌನ್ ಮಾಡಿ, ರಸಾಯನಿಕ ದ್ರಾವಣ ಸಿಂಪಡಿಸಿ, ಮನೆಯಿಂದ ಯಾರೂ ಹೊರಗೆಬರದಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಹಿಮ್ಸ್ ನಲ್ಲಿ 13000 ಲೀಟರ್ ಆಕ್ಸಿಜನ್ ಪ್ಲಾಂಟ್ ಹಾಸನ: ಕೊರೊನಾ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಿ ರುವ ಹಾಸನ ವೈದ್ಯಕೀಯ ಕಾಲೇಜು (ಹಿಮ್ಸ್)ಆಸ್ಪತ್ರೆಯಲ್ಲಿ 13,000 ಲೀಟರ್ (13 ಕೆ.ಎಲ್)ಸ್ವಾಮರ್ಥ್ಯದ ಆಕ್ಸಿಜನ್ ಘಟಕವಿದ್ದು, ಪ್ರಸ್ತುತ ಪ್ರತಿದಿನ ರೋಗಿಗಳಿಗೆ 8000 ಲೀಟರ್ ಆಕ್ಸಿಜನ್‌ಬಳಕೆಯಾಗುತ್ತಿದೆ.ಒಂದು ವಾರಕ್ಕೆ 57,000 ಲೀಟರ್ ಆಕ್ಸಿಜನ್‌ಹಿಮ್ಸ್ ಆಸ್ಪತ್ರೆಗೆ ಬೇಕಾಗುತ್ತದೆ.
ಬೆಂಗಳೂರುಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆಯಿಂದ ಪ್ರತಿದಿನ ಬರುವ ಟ್ಯಾಂಕರ್ ಆಕ್ಸಿಜನ್ ಅನ್ನು ತಂದುಹಿಮ್ಸ್ ಆಸ್ಪತ್ರೆಯ ಆಕ್ಸಿಜನ್ ಘಟಕಕ್ಕೆ ಪೂರೈಕೆಮಾಡುತ್ತದೆ.ಸದ್ಯಕ್ಕೆ ಹಿಮ್ಸ್‌ನಲ್ಲಿ ಆಕ್ಸಿಜನ್ ಕೊರತೆಯಿಲ್ಲ.ಹಿಮ್ಸ್ ಆಸ್ಪತ್ರೆಯಲ್ಲಿ ಈಗ 400 ಹಾಸಿಗೆಗಳಿಗೆಆಕ್ಸಿಜನ್ ಹರಿವಿನ ವ್ಯವಸ್ಥೆಯಿದೆ. ಪ್ರಸ್ತುತ 381ಮಂದಿ ಸೋಂಕಿತರು ಆಕ್ಸಿಜನ್ ಹಾಸಿಗೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ ಹೆಚ್ಚುವರಿ 50ಹಾಸಿಗೆಗಳ ವಾರ್ಡ್ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.ಕೊರೊನೇತರ ರೋಗಿಗಳ ಚಿಕಿತ್ಸೆಗಾಗಿ ಹಾಸನದ ಮಲಾ°ಡ್ ಗ್ಯಾಸ್ ಏಜೆನ್ಸಿಯಿಂದ 50 ಜಂಬೋಸಿಲಿಂ ಡರ್ ಪ್ರತಿದಿನ ಪಡೆಯಲಾಗುತ್ತಿದೆ ಎಂದುಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಮಾಹಿತಿನೀಡಿದ್ದಾರೆ.ಜಿಲ್ಲೆಯ 7 ತಾಲೂಕು ಆಸ್ಪತ್ರೆಗಳಿಗೆ ಪ್ರತಿದಿನ 24ಜಂಬೋ ಸಿಲಿಂಟರ್‌ಗಳನ್ನು ಪ್ರತಿದಿನ ಸರಬರಾಜುಮಾಡಲಾಗುತ್ತಿದೆ. ಸಮುದಾಯ ಆರೋಗ್ಯಕೇಂದ್ರಗಳಲ್ಲೂ ಐಸಿಯು ವ್ಯವಸ್ಥೆ ಕಲ್ಪಿಸಲು ಸಿದ್ಧತೆಪೂರ್ಣಗೊಂಡಿದ್ದು, ಪ್ರತಿ ಸಮುದಾಯ ಆರೋಗ್ಯಕೇಂದ್ರಕ್ಕೆ ತಲಾ 18 ಜಂಬೋ ಸಿಲಿಂಡರ್‌ಗಳಂತೆಒಟ್ಟು 270 ಜಂಬೋ ಸಿಲಿಂಡರ್ ಅಗತ್ಯವಿದೆಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾಹಿತಿನೀಡಿದ್ದಾರೆ.
ಎಚ್.ಶಿವರಾಜು