Advertisement

ನೌಕಾಪಡೆಯನ್ನೂ ಬಿಡಲಿಲ್ಲ ಕೋವಿಡ್‌

10:13 AM Apr 18, 2020 | sudhir |

ಪ್ಯಾರಿಸ್‌: ಅಮೆರಿಕದ ಬಳಿಕ ಈಗ ಫ್ರಾನ್ಸ್‌ನ ನೌಕಾಪಡೆಯ ಸಮರ ನೌಕೆಯೊಂದರಲ್ಲಿ ಕೋವಿಡ್‌ ವೈರಾಣು ಹಾವಳಿ ಕಾಣಿಸಿಕೊಂಡಿದೆ. ಯುದ್ಧ ವಿಮಾನಗಳನ್ನು ಸಾಗಿಸುವ ಚಾರ್ಲ್ಸ್‌ ಡಿ ಗಲ್‌ ಎಂಬ ಯುದ್ಧನೌಕೆಯಲ್ಲಿದ್ದ 2000 ಯೋಧರ ಪೈಕಿ 668 ಮಂದಿ ಸೋಂಕಿಗೊಳಗಾಗಿದ್ದಾರೆ. ಹಡಗಿನ ಪೈಲಟ್‌ಗೂ ಸೋಂಕು ತಗಲಿದೆ. ಸಮುದ್ರ ಮಧ್ಯದಲ್ಲಿರುವ ಹಡಗಿನೊಳಗೆ ವೈರಸ್‌ ಹೋಗಿರುವುದು ಚಿಂತೆಗೆ ಕಾರಣವಾಗಿದೆ.

Advertisement

ಅಟ್ಲಾಂಟಿಕದಲ್ಲಿ ಸಮರ ಅಭ್ಯಾಸ ನಿರತವಾಗಿದ್ದ ಚಾರ್ಲ್ಸ್‌ ಡಿ ಗಲ್‌ ಸೋಂಕು ವ್ಯಾಪಕವಾದ ಕಾರಣ ಅಭ್ಯಾಸವನ್ನು ಮೊಟಕುಗೊಳಿಸಿ ಎರಡು ವಾರ ಮೊದಲೇ ಟೌಲನ್‌ ಬಂದರಿಗೆ ಆಗಮಿಸಿದೆ. ಇನ್ನೂ ಶೇ.30 ಯೋಧರ ಪರೀಕ್ಷೆ ಫ‌ಲಿತಾಂಶಗಳು ಬಾಕಿಯಿದ್ದು, ಹೀಗಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಒಂದು ವಾರದ ಹಿಂದೆ ಅಮೆರಿಕದ ಥಿಯೊಡರ್‌ ರೂಸ್‌ವೆಲ್ಟ್ ಸಮರ ನೌಕೆಯಲ್ಲಿ 600 ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದವು. ಹಡಗಿನ ಕ್ಯಾಪ್ಟನ್‌ ಸಹಾಯ ಯಾಚಿಸಿ ಬರೆದಿದ್ದ ಪತ್ರ ಸೋರಿಕೆಯಾದ ಬಳಿಕ ಅವರನ್ನು ಅಮಾನತಿನಲ್ಲಿಡಲಾಗಿದೆ. ಸಮರ ನೌಕೆಯಲ್ಲಿ ಸೋಂಕು ಕಾಣಿಸಿಕೊಂಡದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ನೌಕಾಪಡೆಯ ಹಂಗಾಮಿ ಸಚಿವ ಥಾಮಸ್‌ ಮೋಡ್ಲಿ ರಾಜೀನಾಮೆ ನೀಡಿದ್ದಾರೆ.

ಡೆನ್ಮಾರ್ಕ್‌ ನೌಕಾಪಡೆಯ ಎಂಎಸ್‌ ಡಾಲ್ಫಿನ್‌ ಎಂಬ ಸಮರ ನೌಕೆಯಲ್ಲೂ ಸೋಂಕು ಕಾಣಿಸಿಕೊಂಡ ಬಳಿಕ ಈ ಹಡಗು ಡೆನ್‌ ಹೆಲೆxರ್‌ ನೌಕಾನೆಲೆಗೆ ವಾಪಸಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next