Advertisement

20 ನಿಮಿಷದಲಿ ಕೋವಿಡ್ ಪತ್ತೆ: ಜಿಲೆಯಲ್ಲಿ 6 ಸಾವಿರ ಮಂದಿಗೆ ಕೋವಿಡ್ ಟೆಸ್ಟ್ ಗೆ ನಿರ್ಧಾರ

12:38 PM Apr 29, 2020 | Team Udayavani |

ಕೋಲಾರ: ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲೆಯಲ್ಲಿ ಕೊವಿಡ್‌-19ರ ರ್ಯಾಪಿಡ್‌ ಟೆಸ್ಟ್‌ ನಡೆಸಲಾಗುತ್ತಿದ್ದು, 6 ಸಾವಿರ ಮಂದಿಗೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವಿಜಯಕಮಾರ್‌ ತಿಳಿಸಿದರು. ಈ ಕುರಿತು ಮಾಹಿತಿ ನೀಡಿದ ಅವರು, ದಕ್ಷಿಣ ಕೊರಿಯಾದಿಂದ 1500 ಕಿಟ್‌ಗಳನ್ನು ತರಿಸಿಕೊಳ್ಳಲಾಗಿದ್ದು,
ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಲು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕಿಟ್‌ಗಳಿಂದ ಕೇವಲ 20 ನಿಮಿಷಗಳಲ್ಲಿ ಸೋಂಕು ಪತ್ತೆ ಹಚ್ಚಬಹುದಾಗಿದೆ ಎಂದು ತಿಳಿಸಿದರು.

Advertisement

ಲಕ್ಷಣಗಳಿರುವವರು ಕೋವಿಡ್ ಇದೆಯೇ ಎಂದು ತಿಳಿಯಲು ರಕ್ತ ಮತ್ತು ಗಂಟಲು ದ್ರವ ನೀಡಿ ಕನಿಷ್ಠ 24 ಗಂಟೆ ಆತಂಕದಲ್ಲೇ ಕಾಯಬೇಕಾಗಿತ್ತು, ಜಿಲ್ಲೆಯಲ್ಲಿ ಮೊದಲ ಹಂತವಾಗಿ ಕೋವಿಡ್ ಸೈನಿಕರಾಗಿ ದುಡಿಯುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ದಕ್ಷಿಣ ಕೊರಿಯಾದಿಂದ ಈ ಕಿಟ್‌ಗಳು
ಬಂದಿದ್ದು, ಈಗಾಗಲೇ ವೈದ್ಯಕೀಯ ಸಿಬ್ಬಂದಿಯನ್ನು ಪ್ರಾಯೋಗಿಕವಾಗಿ ಪರೀಕ್ಷೆಗೆ ಒಳಪಡಿಸಿ ಫಲಿತಾಂಶ ಪಡೆಯಲಾಗಿದೆ. ಜಿಲ್ಲೆ ಇದೀಗ ಹಸಿರುವಲಯದಲ್ಲಿದ್ದು, ಇದನ್ನು ಮುಂದುವರಿಸುವ ಮೂಲಕ ಜಿಲ್ಲೆಯತ್ತ ಸೋಂಕು ಹರಡದಂತೆ ಹೆಚ್ಚಿನ ಮುಂಜಾಗ್ರತೆ ವಹಿಸಿರುವ ಜಿಲ್ಲಾಡಳಿತ ಇದೀಗ ಸೋಂಕು ಪತ್ತೆ ಹೆಚ್ಚಲು ರ್ಯಾಪಿಡ್‌ ಟೆಸ್ಟ್‌ಗೆ ಮುಂದಾಗಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ರ್ಯಾಪಿಡ್‌ ಟೆಸ್ಟ್‌ಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಆರಂಭಿಕವಾಗಿ ಆರೋಗ್ಯ ಸೇವೆಯ ಇಪ್ಪತ್ತು ಮಂದಿ ಸಿಬ್ಬಂದಿಗೆ ಟೆಸ್ಟ್‌ ಮಾಡಲಾಗುವುದು. ಈ ಟೆಸ್ಟ್‌ಗಳ ಮೂಲಕ ಮಾನವ ದೇಹದ ರೋಗ ನಿರೋಧಕ ಶಕ್ತಿಯನ್ನು ಪರಿಶೀಲಿಸಲಾಗುವುದು. ಟೆಸ್ಟ್‌ನಲ್ಲಿ ಪಾಸಿಟಿವ್‌ ಬಂದಲ್ಲಿ ಅಂತವರ ಗಂಟಲ ದ್ರಾವಣವನ್ನು ಕಲೆ ಹಾಕಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪಾಸಿಟಿವ್‌ ಬಂದವರ 14 ದಿನಗಳ ಹಿಂದಿನ ಪ್ರಯಾಣ ಇತಿಹಾಸವನ್ನು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸಲು ರ್ಯಾಪಿಡ್‌ ಟೆಸ್ಟ್‌ ನೆರವಾಗಲಿದೆ.
●ಡಾ.ಚಾರಿಣಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next