Advertisement

ಕೋವಿಡ್‌ ಮುಕ್ತ ಕೋಲಾರಕ್ಕೆ ಮತ್ತಷ್ಟು ನೆರವು

02:04 PM Jun 01, 2021 | Team Udayavani |

ಕೋಲಾರ: ಆಕ್ಸಿಜನ್‌ ಸಾಂದ್ರಕಗಳಿಗಾಗಿ ತಮ್ಮ ಶಾಸಕರ ನಿಧಿಯಿಂದ ಈಗಾಗಲೇ 50 ಲಕ್ಷ ರೂ. ನೀಡಿದ್ದು, ಉಳಿದ 50 ಲಕ್ಷ ರೂ. ಅನ್ನು ಕೋವಿಡ್‌ ಮುಕ್ತ ಕೋಲಾರಕ್ಕಾಗಿ ಅಗತ್ಯ ವೈದ್ಯಕೀಯ ಸೌಲಭ್ಯಗಳಿಗೆ ಬಳಸಿ ಕೊಳ್ಳುವಂತೆಎಂಎಲ್ಸಿಡಾ.ವೈ.ಎ.ನಾರಾಯಣ ಸ್ವಾಮಿ ಡೀಸಿ ಸೆಲ್ವಮಣಿಗೆ ಸೂಚಿಸಿದರು.

Advertisement

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ವಿಧಾನ ಪರಿಷತ್‌ ಸದಸ್ಯರ ನಿಧಿಯಿಂದ ಖರೀದಿಸಿದ 14 ಆಕ್ಸಿಜನ್‌ ಸಾಂದ್ರಕಗಳನ್ನು ಡೀಸಿಗೆ ಹಸ್ತಾಂತರಿಸಿ, 5 ಸಾವಿರ ಮೆಡಿಕಲ್‌ ಕಿಟ್‌ ಬಿಡುಗಡೆ ಮಾಡಿ ಮಾತನಾಡಿ, ತಮ್ಮ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ 5 ಜಿಲ್ಲೆಗಳಿಗೆ 50 ಲಕ್ಷ ರೂ.ನಲ್ಲಿ 72 ಆಕ್ಸಿಜನ್‌ ಸಾಂದ್ರಕ ಒದಗಿಸುತ್ತಿರುವುದಾಗಿ ತಿಳಿಸಿದರು.

ಶ್ರೀನಿವಾಸಪುರಕ್ಕೆ ಸುಸಜ್ಜಿತ ಆ್ಯಂಬುಲೆನ್ಸ್‌: ಶ್ರೀನಿವಾಸಪುರಕ್ಕೆ ಐಸಿಯು ಒಳಗೊಂಡ ಸುಸಜ್ಜಿತ ಆ್ಯಂಬುಲೆನ್ಸ್‌ ನೀಡುವಂತೆ ಕೋರಿದ್ದು, ತಮ್ಮ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಕೂಡಲೇ ಒದಗಿಸಿಕೊಡಲು ಡೀಸಿಗೆ ಪತ್ರ ನೀಡಿರುವುದಾಗಿ ತಿಳಿಸಿದರು. ಶಿಕ್ಷಕರಿಲ್ಲದ ಗ್ರಾಮವಿಲ್ಲ, ಲಸಿಕೆ ಅಭಿಯಾನ ಯಶಸ್ವಿಗೊಳಿಸಲು ನಿಮ್ಮ ಸಹಕಾರ ಅಗತ್ಯವಿದೆ. ಪ್ರತಿ ಗ್ರಾಮದಲ್ಲೂ ಲಸಿಕೆ ಹಾಕಿಸಿಕೊಳ್ಳಲು ಅರಿವು ಮೂಡಿಸಿ ಎಂದರು.

ಡೀಸಿ ಡಾ.ಆರ್‌.ಸೆಲ್ವಮಣಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್‌ ಸಾಂದ್ರಕಗಳನ್ನು ಒದಗಿಸಿ ದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.ಕೋವಿಡ್‌ ಮಾರಿ ಹಳ್ಳಿಗಳಿಗೆ ಹೆಚ್ಚು ವ್ಯಾಪಿಸುತ್ತಿದ್ದು, ಇದನ್ನು ತಡೆಯಲು ಲಸಿಕೆಯೊಂದೇ ಅಸ್ತ್ರ ಎಂದ ಅವರು,ಕನಿಷ್ಠ ಶೇ.80 ಮಂದಿಗೆ ಲಸಿಕೆ ಹಾಕಿಸಿದ್ದೇ ಆದರೆ, ನಾವುಕೊರೊನಾ ವಿರುದ್ಧ ಗೆದ್ದಂತೆ ಎಂದರು.

ನಿರ್ಮಿತಿ ಕೇಂದ್ರದ ನಿರ್ದೇಶಕ ನಾರಾಯಣ ಗೌಡ, ಆಕ್ಸಿಜನ್‌ ಸಾಂದ್ರಕಗಳ ಬಳಕೆ ಮತ್ತು ಅದರ ಅಗತ್ಯತೆ ಕುರಿತು ಮಾಹಿತಿ ನೀಡಿದರು.

Advertisement

ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌, ಮುಖಂಡರಾದ ಎಸ್‌.ಬಿ.ಮುನಿವೆಂಕಟಪ್ಪ, ಜಿಪಂ ಸದಸ್ಯೆ ಅಶ್ವಿ‌ನಿ, ನಗರಸಭಾ ಸದಸ್ಯ ಮುರಳೀಗೌಡ, ಸಿಂಡಿಕೇಟ್‌ ಸದಸ್ಯ ಉದಯಕುಮಾರ್‌, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ ಬಾಬು, ಸಂಘದ ಮುಖಂಡರಾದ ಎಸ್‌. ಚೌಡಪ್ಪ, ಟಿ.ಕೆ.ನಟರಾಜ್‌, ಚಂದ್ರಪ್ಪ, ಗೋಪಿ ಕೃಷ್ಣನ್‌, ರತ್ನಪ್ಪ, ರವಿರೆಡ್ಡಿ, ಅಪ್ಪಯ್ಯಗೌಡ, ಎಂ.ನಾಗರಾಜ್‌, ವಿ.ಮುರಳಿಮೋಹನ್‌, ಖಾಸಗಿ ಶಾಲೆಗಳ ಮುನಿಯಪ್ಪ, ಶ್ರೀಕೃಷ್ಣ, ಬಿಜೆಪಿಯ ವಿಜಯಕುಮಾರ್‌, ತಿಮ್ಮ ರಾಯಪ್ಪ, ರಾಜೇಶ್‌ ಸಿಂಗ್‌, ಕೆಂಬೋಡಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next