Advertisement
ಅವರು ಶನಿವಾರ ಬಿ.ಸಿ.ರೋಡ್‌ನಲ್ಲಿರುವ ತಾ.ಪಂ. ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ.ಸಂಸದ ನಳಿನ್‌ಕುಮಾರ್ ಕಟೀಲು ಅವರ ನೇತೃತ್ವದಲ್ಲಿ ನಡೆದ ತಾಲೂಕಿನ ಕೊರೊನಾ ನಿಯಂತ್ರಣದ ಕಾರ್ಯದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
ಕಳೆದ ವರ್ಷ ಕೊರೊನಾ ನಿಯಂತ್ರಣದ ದೃಷ್ಟಿಯಿಂದ ತನ್ನ ನೇತೃತ್ವದಲ್ಲಿ ಬಂಟ್ವಾಳ ಕ್ಷೇತ್ರದ ಎಲ್ಲ 39 ಗ್ರಾ.ಪಂ.ಗಳಲ್ಲೂ ಸ್ಥಳೀಯ ಟಾಸ್ಕ್ಫೋರ್ಸ್ ಸಭೆಯನ್ನು ಮಾಡಲಾಗಿದೆ. ಆದರೆ ಈ ಬಾರಿ ಟಾಸ್ಕ್ಫೋರ್ಸ್‌ನಲ್ಲಿ ಬದಲಾವಣೆ ಮಾಡಿರುವ ಕುರಿತು ಮಾಹಿತಿಯೇ ಬಂದಿಲ್ಲ ಎಂದು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಸಭೆಯ ಗಮನಕ್ಕೆ ತಂದರು.
ಈ ವೇಳೆ ಜಿ.ಪಂ.ಸಿಇಒ ಡಾ| ಕುಮಾರ್ ಹಾಗೂ ಜಿಲ್ಲಾಧಿಕಾರಿಗಳು ತಾ.ಪಂ.ಇಒ ರಾಜಣ್ಣ ಅವರ ಬಳಿ ಸ್ಪಷ್ಟನೆ ಕೇಳಿದರು. ಮುಂದಿನ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಗ್ರಾ.ಪಂ.ಮಟ್ಟದ ಟಾಸ್ಕ್ಪೋರ್ಸ್‌ಗಳ ಸಭೆ ನಡೆಸುವುದಾಗಿ ಇಒ ಅವರು ಭರವಸೆ ನೀಡಿದರು.
Related Articles
ಆಸಕ್ತಿಯಿಂದ ಕೆಲಸ ಮಾಡುವುದಾದರೆ ಮಾಡಿ: ನಳಿನ್ ಕುಮಾರ್ ಕಟೀಲು
Advertisement
ದ.ಕ. ಜಿ.ಪಂ. ಸಿಇಒ ಡಾ| ಕುಮಾರ್ ಮಾತನಾಡಿ, ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಾಗ 1:30 ಪ್ರಾಥಮಿಕ ಸಂಪರ್ಕದ ಟ್ರೇಸಿಂಗ್ ನಡೆಯಬೇಕಿದ್ದು, ಈ ವಿಚಾರದಲ್ಲಿ ಬೇರೆ ತಾಲೂಕುಗಳಿಗಿಂತ ಬಂಟ್ವಾಳ ಚೆನ್ನಾಗಿ ಕೆಲಸ ಮಾಡಿದೆ. ಆದರೆ ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಈ ಕಾರ್ಯದಲ್ಲಿ ಹಿಂದೆ ಬಿದ್ದಿದೆ. ಅಳಿಕೆ, ಮಂಚಿ, ಪುಣಚ, ಪುಂಜಾಲಕಟ್ಟೆ ಹಾಗೂ ಪಂಜಿಕಲ್ಲು ಆರೋಗ್ಯ ಕೇಂದ್ರಗಳ ಪ್ರತಿ ತೀರಾ ಕಡಿಮೆ ಇದೆ ಎಂದರು.
ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸಮರ್ಪಕ ಉತ್ತರ ನೀಡದೆ ಇದ್ದಾಗ ಅವರನ್ನು ತರಾಟೆಗೆ ತೆಗೆದುಕೊಂಡ ಸಂಸದ ನಳಿನ್ ಕುಮಾರ್ ಕಟೀಲು, ನೀವು ಆಸಕ್ತಿಯಿಂದ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು. ಡಾಟಾ ಎಂಟ್ರಿಯ ಕುರಿತು ಗ್ರಾ.ಪಂ. ಬಳಿ ಹೇಳಿದರೂ ಸ್ಪಂದನೆ ನೀಡಿಲ್ಲ. ಹೀಗಾಗಿ ಭೂಮಿ ತಂತ್ರಾಂಶ ಅಪ್‌ಲೋಡ್ ವಿಳಂಬವಾಗಿದೆ ಎಂದು ಪಂಜಿಕಲ್ಲು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಳಿಸಿದರು. ಆರೋಗ್ಯ ಕೇಂದ್ರಕ್ಕೆ ಡಾಟಾ ಎಂಟ್ರಿ ಆಪರೇಟರ್ ಇಲ್ಲದಿದ್ದರೆ ಗ್ರಾ.ಪಂ.ನಿಂದ ನೀಡುವಂತೆ ಪ್ರತೀ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ| ಕುಮಾರ್ ತಿಳಿಸಿದರು.
ಬಂಟ್ವಾಳದಲ್ಲಿ 10 ವೆಂಟಿಲೇಟರ್ ಸೌಕರ್ಯ
ಜಿಲ್ಲೆಯ ಎಲ್ಲ ಭಾಗಗಳಿಂದಲೂ ವೆಂಟಿಲೇಟರ್ ಅಗತ್ಯವಿರುವ ಎಲ್ಲ ಕೋವಿಡ್ ರೋಗಿಗಳನ್ನು ವೆನಾÉಕ್ ಆಸ್ಪತ್ರೆಗೆ ತಂದಾಗ ಗುಣಮಟ್ಟದ ಸೇವೆ ನೀಡಲು ಕಷ್ಟವಾಗುವ ಜತೆಗೆ, ಹೆಚ್ಚಿನ ಮಾನವ ಸಂಪನ್ಮೂಲದ ಅಗತ್ಯವೂ ಇರುತ್ತದೆ. ಈ ನಿಟ್ಟಿನಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆ ಹಾಗೂ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗಳಲ್ಲಿ ತಲಾ ಐದೈದು ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಿದರೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದ ರೋಗಿಗಳಿಗೂ ಇಲ್ಲೇ ಚಿಕಿತ್ಸೆ ನೀಡಬಹುದು ಎಂದು ಜಿಲ್ಲಾಧಿಕಾರಿ ಹೇಳಿದರು. ಬಂಟ್ವಾಳದಲ್ಲಿರುವ 12 ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಬಂಟ್ವಾಳ ಎಆರ್‌ಟಿಒ ಮೂಲಕ ಜಿಪಿಎಸ್ ಅಳವಡಿಸುವ ಕಾರ್ಯ ಮಾಡಿ. ಅದನ್ನು ಸ್ಮಾರ್ಟ್‌ಸಿಟಿಯಿಂದ ಉಚಿತವಾಗಿ ಅಳವಡಿಸಲಾಗುತ್ತದೆ. ಈ ಆ್ಯಂಬುಲೆನ್ಸ್‌ಗಳನ್ನು ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಬಳಸಿಕೊಳ್ಳಿ. ಯಾವುದೇ ರೋಗಿ ಕೊರೊನಾದಿಂದ ಮೃತಪಟ್ಟರೆ ಅವರ ಮೃತದೇಹ ಸಾಗಾಟ, ಅಂತ್ಯಸಂಸ್ಕಾರ ಕಾರ್ಯವನ್ನು ಸರಕಾರದಿಂದಲೇ ಭರಿಸಲಾಗುತ್ತದೆ. ಇದರ ನಿರ್ವಹಣೆಗೆ ಪ್ರತ್ಯೇಕ ತಂಡ ರಚಿಸುವಂತೆ ಅವರು ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರಿಗೆ ಸೂಚನೆ ನೀಡಿದರು.