Advertisement
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿನ ಕೋವಿಡ್ 19 ಕೇರ್‌ನಲ್ಲಿ ಸೌಕರ್ಯವೇ ಸರಿಯಿಲ್ಲ, ವೈದ್ಯಾಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಕ್ವಾರಂಟೈನ್‌ನಲ್ಲಿರುವ ಕೋವಿಡ್ ಪಾಸಿಟಿವ್ ರೋಗಿಗಳು ವಿಡಿಯೋ ಮಾಡಿ ತಮ್ಮ ಆಕ್ರೋಶವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ 19 ಕೇರ್‌ನಲ್ಲಿ ಸ್ವತ್ಛತೆ, ದೀಪದ ವ್ಯವಸ್ಥೆ, ನೀರಿನ ಅಭಾವ ಸೇರಿದಂತೆ ಇತರೆ ಸಮಸ್ಯೆಗಳು ಕೋವಿಡ್ ಭಯಕ್ಕಿಂತ ಮಿಗಿಲಾಗಿದ್ದು. ನಮ್ಮನ್ನು ಕ್ವಾರಂಟೈನ್‌ನಿಂದ ಮುಕ್ತಗೊಳಿಸಿ, ಇಲ್ಲೇ ಇದ್ದರೆ ವಿಚಿತ್ರ ಕಾಯಿಲೆಗಳು ನಮಗೆ ಹರಡುತ್ತದೆ, ಯಾವ ಪುರುಷಾರ್ಥಕ್ಕೆ ನಮ್ಮನ್ನು ಕೋಡಿ ಹಾಕಿದ್ದೀರಾ, ಇಲ್ಲಿ ಯಾವುದು ಸರಿ ಇಲ್ಲ ಎಂದು ಇಲ್ಲಿನ ಕೋವಿಡ್ ರೋಗಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ನೀರಿನ ಸಮಸ್ಯೆ ಬಗೆಹರಿಯುತ್ತಿಲ್ಲ, ನೀರಿಲ್ಲದೆ ರೋಗಿಗಳು ಟಾಯ್ಲೆಟ್‌ಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿದೆ
Related Articles
ಬಾಗಿಲ ಒಳಗಿಂದ ಚೆನ್ನಾಗಿಯೇ ಕಾಣುತ್ತದೆ. ಆದರೆ ಪಿ.ಪಿ ಕಿಟ್ ಧರಿಸಿ ಒಳಗೆ ಬಂದು ನೋಡಿ ನರಕ ಯಾತನೆ ನಿಮಗೂ ತಿಳಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಶೀಘ್ರ ಕೋವಿಡ್ ಕೇರ್ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದ್ದಾರೆ.
Advertisement