ಬೀದರ: ಎರಡನೇ ಅಲೆಯ ಹಿನ್ನೆಲೆ ಜಿಲ್ಲೆಯಲ್ಲಿನ ಸದ್ಯದ ಕೋವಿಡ್-19 ಸ್ಥಿತಿಗತಿ ಮತ್ತು ಕಠಿಣ ನಿರ್ಬಂಧ ಜಾರಿಗೆ ವಹಿಸಿದ ಕ್ರಮಗಳು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ನಗರದ ಬ್ರಿಮ್ಸ್ ಕಾಲೇಜಿನಲ್ಲಿ ಜಿಲ್ಲಾಧಿ ಕಾರಿಗಳು, ಜಿಪಂ ಸಿಇಒ ಮತ್ತು ಎಸ್‌ಪಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ಸಚಿವರು, ಕೋವಿಡ್ ನಿಯಂತ್ರಣಕ್ಕೆ ತರುವ ಹಿನ್ನೆಲೆಯಲ್ಲಿ ನಾವೆಲ್ಲರೂ ನಿರಂತರ ಕಾರ್ಯಪ್ರವೃತ್ತರಾಗುವುದು ಅತೀ ಅವಶ್ಯವಿದೆ. ಆಕ್ಸಿಜನ್, ರೆಮ್‌ಡೆಸಿವಿಯರ್ ಇಂಜೆಕ್ಷನ್ ಏನೇ ಕೊರತೆಯಾದರು ತಕ್ಷಣ ತಮ್ಮ ಗಮನಕ್ಕೆ ತರಬೇಕು. ಸಿಎಂ, ಆರೋಗ್ಯ ಸಚಿವರು ಸೇರಿದಂತೆ ಪ್ರಮುಖರೊಂದಿಗೆ ಸಂಪರ್ಕ ಸಾ ಧಿಸಿ ಅನುಕೂಲ ಕಲ್ಪಿಸಿಕೊಡುವುದಾಗಿ ತಿಳಿಸಿದರು.
ಎಷ್ಟೇ ಬಾರಿ ತಿಳಿಸಿದ್ದರೂ ಇನ್ನು ಕೆಲ ಜನರು ಮಾಸ್ಕ್ ಹಾಕದೆ ತಿರುಗುವುದು ಕಾಣುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಿಂದ ದಂಡಿವಿದಿಸಿ ಜನರಿಗೆ ಎಚ್ಚರಿಕೆ ನೀಡುವಂತಾಗಬೇಕು. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಗ್ರಾಮೀಣ ಪ್ರದೇಶದವರಿಗೂ ಕೋವಿಡ್ ಬಗ್ಗೆ ಮುಂಜಾಗ್ರತೆ ವಹಿಸಲು ಎಲ್ಲ ಪಿಡಿಒ ಅವರ ಸೇವೆಯನ್ನು ಬಳಸಿಕೊಳ್ಳಬೇಕು. ಗ್ರಾಮ ಮಟ್ಟದ ಕಾರ್ಯಪಡೆಗಳು ಕ್ರಿಯಾಶೀಲತೆಯಿಂದ ಇರುವುದು ಈಗ ಅತೀ ತುರ್ತು ಅಗತ್ಯವಿದೆ ಎಂಬುದನ್ನು ಅರಿತು ಅದಕ್ಕಾಗಿ ಕ್ರಮ ವಹಿಸಬೇಕು ಎಂದು ಸಚಿವರು ಸೂಚಿಸಿದರು. ಜ್ವರ, ನೆಗಡಿ ಬಂದರೂ ಜನರು ಈಗ ಭಯಪಡುವಂತಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಈಗ ಜನತೆಗೆ ಸ್ಪಂದಿಸುವುದು ಅತೀ ಅವಶ್ಯ. ಕೋವಿಡ್ ಟೆಸ್ಟ್, ಆಕ್ಸಿಜನ್ ಲಭ್ಯತೆ, ಬೆಡ್‌ಗಳು ಹೀಗೆ ಅವರು ಏನೇ ಕೇಳಿದರೂ ಸರಿಯಾಗಿ ಮಾಹಿತಿ ನೀಡಿ ಜನರಲ್ಲಿ ಧೈರ್ಯ ತುಂಬುವ ರೀತಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಪಂಗಳು ಆರಂಭಿಸಿರುವ ಸಹಾಯವಾಣಿಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಇದೆ ವೇಳೆ ಸಚಿವರು ಸಲಹೆ ಮಾಡಿದರು. ಇದೆ ವೇಳೆ ಡಿಸಿ ರಾಮಚಂದ್ರನ್ ಆರ್ ಅವರು ಸಚಿವರಿಗೆ ಹಲವಾರು ಮಾಹಿತಿ ನೀಡಿದರು. ಕೋವಿಡ್ ನಿಯಂತ್ರಣಕ್ಕಾಗಿ 50ಕ್ಕೂ ಹೆಚ್ಚು ಅ ಧಿಕಾರಿಗಳನ್ನೊಳಗೊಂಡು ಜಿಲ್ಲಾ ಕೋವಿಡ್ ವಾರ್ ರೂಮ್ ಸ್ಥಾಪಿಸಿ ಜನತೆಗೆ 24×7 ಸಮಯವೂ ಸ್ಪಂದಿಸಲಾಗುತ್ತಿದೆ. ರೆಮ್‌ಡೆಸಿವಿಯರ್ ಇಂಜೆಕ್ಷನ್, ಬೆಡ್ ವ್ಯವಸ್ಥೆ ಲಭ್ಯತೆಯಂತಹ ಅನೇಕ ಮಾಹಿತಿಯನ್ನು ಕೋವಿಡ್ ವಾರ್ ರೂಮ್‌ನಿಂದ ನೀಡಲಾಗುತ್ತಿದೆ.
ವೈದ್ಯರು ಮತ್ತು ಸಿಬ್ಬಂದಿ ಖುದ್ದು ಕೋವಿಡ್ ಸೋಂಕಿತರ ಮನೆಗೆ ಭೇಟಿ ನೀಡಿ, ಎರಡು ರೂಮ್‌ಗಳಿದ್ದಲ್ಲಿ ಐಸೋಲೇಶನ್‌ಗೆ ವ್ಯವಸ್ಥೆ ಮಾಡುವ ಇಲ್ಲದಿದ್ದರೆ ಅವರನ್ನು ಕೋವಿಡ್ ಕೇರ್ ಹಾಸ್ಪಿಟಲ್‌ಗೆ ಕರೆತಂದು ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಜೊತೆಗೆ ಅವರಿಗೆ ತುರ್ತಾಗಿ ಬೇಕಿರುವ ಔಷ ಧಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್‌ಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುತ್ತಿದೆ. ಬ್ರಿಮ್ಸಗೆ 5 ಕೆ.ಎಲ್. ಆಕ್ಸಿಜನ್ ಟ್ಯಾಂಕನ್ನು ಉಚಿತವಾಗಿ ನೀಡಲು ಕೋಳಾರ್ ಇಂಡಸ್ಟ್ರಿನ ಸಾಯಿ ಫಾರ್ಮಾ ಅವರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೂ ಕೂಡ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಅವಶ್ಯವಿರುವ ಔಷ ಯನ್ನು ಆಸ್ಪತ್ರೆಗಳಲ್ಲಿ ಲಭ್ಯವಿಟ್ಟುಕೊಳ್ಳಲು ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಗ್ರಾಪಂ ಕಾರ್ಯಪಡೆ ಕ್ರಿಯಾಶೀಲ: ಕೋವಿಡ್ ಹಿನ್ನೆಲೆಯಲ್ಲಿ ಹೋಬಳಿ ಮಟ್ಟದಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಈಗಾಗಲೇ ಎಲ್ಲಾ ಗ್ರಾಪಂವಾರು ಹೆಲ್ಪಡೆಸ್ಕ್ ಮಾಡಲಾಗಿದ್ದು, ಇದೀಗ ಹಳ್ಳಿವಾರು ಮಾಡಲು ಕ್ರಮ ವಹಿಸಲಾಗುವುದು. ಗ್ರಾಮಮಟ್ಟದ ಕಾರ್ಯಪಡೆಗಳು ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುತ್ತಿವೆ ಎಂದು ಜಿಪಂ ಸಿಇಒ ಜಹೀರಾ ನಸೀಮ್ ಅವರು ಸಚಿವರಿಗೆ ಮಾಹಿತಿ ನೀಡಿದರು. ಈ ವೇಳೆ ಎಸ್‌ಪಿ ನಾಗೇಶ ಡಿ.ಎಲ್, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ| ಶಿವಕುಮಾರ ಇನ್ನಿತರರು ಇದ್ದರು.