Advertisement

ಚಿಕ್ಕೋಡಿ-ನಿಪ್ಪಾಣಿ ಭಾಗದಲ್ಲಿ ಹೆಚ್ಚಿದ ಕೋವಿಡ್

08:21 PM Jun 05, 2021 | Team Udayavani |

ವರದಿ : ಮಹಾದೇವ ಪೂಜೇರಿ

Advertisement

ಚಿಕ್ಕೋಡಿ: ರಾಜ್ಯದಲ್ಲಿ ಲಾಕಡೌನ್‌ ಘೋಷಣೆಯಾಗಿ 20 ದಿನ ಕಳೆಯುತ್ತಾ ಬಂದರೂ ಗಡಿ ಭಾಗದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರುತ್ತಿಲ್ಲ.

ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯು ಸೋಂಕಿತರ ಸಂಖ್ಯೆಯಲ್ಲಿ ಟಾಪ್‌ ಎರಡನೆ ಸ್ಥಾನದಲ್ಲಿ ಉಳಿಯುತ್ತಾ ಬಂದಿದೆ. ಹೀಗೆಯೇ ಮುಂದುವರೆದರೆ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೆರೆಯ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಎರಡನೆ ಅಲೆ ಉಲ್ಬಣಗೊಳ್ಳುತ್ತಿದೆ. ಮೊದಲ ಅಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಅಷ್ಟೊಂದು ಹೆಚ್ಚಳವಾಗಿರಲಿಲ್ಲ. ಆದರೆ ಎರಡನೆ ಅಲೆಯಲ್ಲಿ ಸೋಂಕಿತರ ಸಂಖ್ಯೆ ಗಗನಕ್ಕೆ ಏರಿದೆ. ಪ್ರತಿದಿನ ಹೆಲ್ತ ಬುಲೆಟಿನ್‌ ಬಂದಿದ್ದೇ ತಡ, ಗಡಿ ಭಾಗದ ಜನ ಹೆಮ್ಮಾರಿ ಕೊರೊನಾಗೆ ಭಯಭೀತರಾಗುತ್ತಿದ್ದಾರೆ.

ಪ್ರತಿದಿನ ನೂರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ನಾಲ್ಕು ದಿನ ಈ ಸಂಕ್ಯೆ 200ರ ಗಡಿ ದಾಟಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಇಲ್ಲಿಯವರಿಗೆ 3375 ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 1310 ಸಕ್ರೀಯ ಪ್ರಕರಣ ಇದ್ದು, 1921 ಸೋಂಕಿತರು ಗುಣಮುಖರಾಗಿ ಡಿಸಾcರ್ಜ್‌ ಆಗಿದ್ದಾರೆ. ಎರಡನೆ ಅಲೆಯಲ್ಲಿ ಇಲ್ಲಿಯವರಿಗೆ 144 ಜನ ಮƒತಪಟ್ಟಿದ್ದಾರೆ. ಇಡೀ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವುದು ಸಂತಸ ವಿಷಯ. ಆದರೆ ಗಡಿ ಭಾಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.

Advertisement

ಎಚ್ಚೆತ್ತುಕೊಳ್ಳದ ಜನ: ಹೆಮ್ಮಾರಿ ಕೊರೊನಾ ಎರಡನೆ ಅಲೆ ಪಟ್ಟಣ ನಗರ ಪ್ರದೇಶಕ್ಕಿಂತ ಹೆಚ್ಚಾಗಿ ಹಳ್ಳಿಗಳಲ್ಲಿ ವ್ಯಾಪಿಸಿಕೊಂಡಿದೆ. ನಿಪ್ಪಾಣಿ ಮತ್ತು ಚಿಕ್ಕೋಡಿ ತಾಲೂಕಿನ ಕೆಲವೊಂದು ಹಳ್ಳಿಯಲ್ಲಿ ಸೋಂಕು ಭಾರಿ ಪ್ರಮಾಣದಲ್ಲಿ ವ್ಯಾಪಿಸಿದೆ. ಆದರೆ ಜನ ಮಾತ್ರ ಕೋವಿಡ್‌ ಪರೀಕ್ಷೆಗೆ ಒಳಪಡುತ್ತಿಲ್ಲ. ಜ್ವರ, ಕೆಮ್ಮು, ನೆಗಡಿಯಂತ ಕೊರೊನಾ ಲಕ್ಷಣ ಇದ್ದರೂ ಸಹ ಸಾಮಾನ್ಯ ಕಾಯಿಲೆ ಎಂದು ಅಲಕ್ಷ್ಯ ಮಾಡಿದ್ದೇ ಕೊರೊನಾ ಹೆಚ್ಚಾಗಲು ಕಾರಣವಾಗಿದೆ.

ಆರೋಗ್ಯ ಸೇವೆ ಹೆಚ್ಚಿಸಲು ಒತ್ತಾಯ: ಚಿಕ್ಕೋಡಿ ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂ. ಬಿಲ್‌ ಮಾಡುತ್ತಿವೆ. ಇದರಿಂದ ಬಡ ಜನರು ಆಸ್ಪತ್ರೆಗೆ ಹೋಗುವುದು ದುಸ್ತರವಾಗಿದೆ. ಸರಕಾರ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next