Advertisement

ದ.ಕ.: 316 ಮಂದಿಗೆ ಕೋವಿಡ್ ; ನಾಲ್ಕು ಮಂದಿ ಸಾವು; 607 ಮಂದಿ ಬಿಡುಗಡೆ

10:55 PM Oct 10, 2020 | mahesh |

ಮಂಗಳೂರು: ಜಿಲ್ಲೆಯಲ್ಲಿ ಶನಿವಾರ 316 ಮಂದಿಗೆ ಕೊರೊನಾ ದೃಢಪಟ್ಟಿದೆ. ನಾಲ್ವರು ಸಾವನ್ನಪ್ಪಿದ್ದಾರೆ. 607 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 26,264 ಮಂದಿ ಸೋಂಕಿಗೊಳಗಾಗಿದ್ದು, 21,461ಮಂದಿ ಗುಣಮುಖರಾಗಿದ್ದಾರೆ. ಸದ್ಯ 4,203 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 600 ಮಂದಿ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.

Advertisement

ವಿವಿಧ ಗ್ರಾ. ಪಂ. ವ್ಯಾಪ್ತಿ, ವೆನ್ಲಾಕ್‌, ಲೇಡಿಗೋಶನ್‌ ಆಸ್ಪತ್ರೆ ಮತ್ತು ಇತರ ಖಾಸಗಿ ಲ್ಯಾಬ್‌ಗಳಲ್ಲಿ ಶನಿವಾರ 1,328 ರ್ಯಾಟ್‌ ಮತ್ತು 2,188 ಆರ್‌ಟಿಪಿಸಿಆರ್‌ ಪರೀಕ್ಷೆ ಸಹಿತ ಒಟ್ಟು 3,516 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ರ್ಯಾಟ್‌ ಪರೀಕ್ಷೆಯಲ್ಲಿ 76 ಮಂದಿಗೆ ಕೊರೊನಾ ದೃಢಪಟ್ಟಿದೆ. ಮಾಸ್ಕ್ ಧರಿಸದ 6,221 ಮಂದಿಗೆ ಈವರೆಗೆ ಒಟ್ಟು 7,70,835 ರೂ. ದಂಡ ವಿಧಿಸಲಾಗಿದೆ.

ಉಡುಪಿ ಜಿಲ್ಲೆ: 239 ಪಾಸಿಟಿವ್‌
ಉಡುಪಿ: ಜಿಲ್ಲೆಯಲ್ಲಿ ಶನಿವಾರ ಓರ್ವ ಮಹಿಳೆ ಮೃತಪಟ್ಟಿದ್ದು 239 ಮಂದಿಗೆ ಪಾಸಿಟಿವ್‌ ವರದಿಯಾಗಿದೆ.
65 ವರ್ಷ ಪ್ರಾಯದ ಮಹಿಳೆ ಮೃತರಾದವರು. ಅವರಿಗೆ ಕೋವಿಡ್ ದೊಂದಿಗೆ ಇತರ ಆರೋಗ್ಯ ಸಮಸ್ಯೆಗಳಿದ್ದವು. ಇಷ್ಟರವರೆಗೆ 164 ಜನರು ಮೃತಪಟ್ಟಿದ್ದಾರೆ.

ಸೋಂಕಿತರಲ್ಲಿ ರೋಗ ಲಕ್ಷಣವಿರುವ 84 ಪುರುಷರು, 59 ಮಹಿಳೆಯರು, ರೋಗ ಲಕ್ಷಣವಿರದ 43 ಪುರುಷರು, 53 ಮಹಿಳೆಯರು ಇದ್ದಾರೆ. ಇವರಲ್ಲಿ 113 ಮಂದಿ ಉಡುಪಿ ತಾಲೂಕಿನವರು, 86 ಕುಂದಾಪುರ ತಾಲೂಕಿನವರು, 36 ಕಾರ್ಕಳ ತಾಲೂಕಿನವರು, ನಾಲ್ವರು ಹೊರ ಜಿಲ್ಲೆಯವರು. ಇವರಲ್ಲಿ 28 ಜನರನ್ನು ಆಸ್ಪತ್ರೆಗಳಿಗೂ 211 ಜನರನ್ನು ಮನೆಗಳ ಐಸೊಲೇಶನ್‌ಗೂ ದಾಖಲಿಸಲಾಗಿದೆ.

ಅ. 9ರಂದು 2,078 ಮಾದರಿಗಳನ್ನು ಸಂಗ್ರಹಿಸಲಾಗಿದೆ. 227 ಜನರಿಗೆ ಪಾಸಿಟಿವ್‌, 1,851 ಜನರಿಗೆ ನೆಗೆಟಿವ್‌ ಆಗಿದೆ. 224 ಜನರನ್ನು ಆಸ್ಪತ್ರೆ ಮತ್ತು ಮನೆಗಳ ಸೊಲೇಶನ್‌ನಿಂದ ಬಿಡುಗಡೆಗೊಳಿಸಲಾಗಿದೆ. 1,952 ಸಕ್ರಿಯ ಪ್ರಕರಣಗಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next