ರಾಮನಗರ: ಜಿಲ್ಲೆಯಲ್ಲಿ ಸದ್ಯ 5,000ಕ್ಕೂ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣ ದಾಖಲಾಗಿದ್ದು, ಗುಣಮುಖರಾಗುತ್ತಿರುವ ಪ್ರಮಾಣ ಶೇ.80 ರಷ್ಟಿದೆ. ಆದರೂ ದಿನೇ ದಿನೇ ಸೋಂಕಿತರ ಪ್ರಮಾಣಹೆಚ್ಚಾಗುತ್ತಿದೆ. ಆದರೂ ಜನತೆ ನಿರ್ಲಕ್ಷ್ಯ ವಹಿಸಿದ್ದಾರೆ.
ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿದಿನವೊಂದಕ್ಕೆ ಸರಾಸರಿ 100 ಪ್ರಕರಣಗಳು ದಾಖಲಾಗಿವೆ. ಹೀಗೆ ಸೋಂಕಿನ ಪ್ರಕರಣಗಳ ಏರಿಕೆಗೆ ಜನತೆ ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಇರುವುದು ಪ್ರಮುಖ ಕಾರಣ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ವಿಶ್ಲೇಷಿಸಿದ್ದಾರೆ.
ಕೇವಲ 80,000 ದಂಡ ವಸೂಲಿ: ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಾಸ್ಕ್ ಧರಿ ಸದೆ ಓಡಾಡುವ ವ್ಯಕ್ತಿಗೆ 100 ರೂ. ದಂಡ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಫಲವಾದ ವ್ಯಾಪಾರಸ್ಥರಿಗೆ ತಲಾ 200 ರೂ. ದಂಡ ವಿಧಿಸುವ ಕಾನೂನು ಜಾರಿಯಾಗಿತ್ತು. ಆದರೆ ಯಾವ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿ ಯಲ್ಲೂ ಈ ಕಾನೂನು ಪಾಲನೆಯಾಗುತ್ತಿಲ್ಲ. ಇಲ್ಲಿಯವರೆಗೂ ರಾಮನಗರ ನಗರಸಭೆ 45,000 ರೂ., ಚನ್ನಪಟ್ಟಣ ನಗರಸಭೆ 25 ಸಾವಿರ ರೂ., ಕನಕಪುರ ನಗರಸಭೆ 3,800 ರೂ., ಮಾಗಡಿ ಪುರಸಭೆ6,000 ಮತ್ತು ಬಿಡದಿ ಪುರಸಭೆ 1000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ದೃಢೀಕೃತ ಮಾಹಿತಿ ಕೊಡಲು ಅಧಿಕಾರಿಗಳು ಜಾರಿಕೊಂಡಿದ್ದಾರೆ.
ಎಲ್ಲಡೆ ನಿರ್ಲಕ್ಷ್ಯ! : ಬ್ಯಾಂಕುಗಳು ಒಳಗಡೆ ಸಾಮಾಜಿಕ ಅಂತರಕ್ಕೆ ಒತ್ತು ನೀಡಿದರೆ, ಹೊರಗಡೆ ಸರದಿ ಸಾಲಿನಲ್ಲಿ ನಿಂತ ಮಂದಿಯನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಪಾಲಿಸುತ್ತಿಲ್ಲ. ವ್ಯಾಪಾರಿ ಮಳಿಗೆಗಳಲ್ಲಿ ಹೆಸರಿಗೆ ಮಾತ್ರ ಸ್ಯಾನಿಟೈಸರ್ ಇಡಲಾಗಿದೆ. ಗ್ರಾಹಕರು ಅದನ್ನು ಬಳ ಸದಿದ್ದರೂ, ಅದನ್ನು ಯಾರು ಗಮನಿಸುತ್ತಿಲ್ಲ. ಎಪಿಎಂಸಿ ಮಾರುಕಟ್ಟೆ ಸೇರಿ ವಿವಿದೆಡೆ ಸ್ಥಾಪಿಸಲಾದ ಸ್ಯಾನಿಟೈಸ್ ನಿರುಪಯುಕವಾ ¤ ಗಿವೆ.
ಜನ ಏನಂತಾರೆ? : ಕೋವಿಡ್19 ಲಾಕ್‌ಡೌನ್ ನಿಂದಾಗಿ ವಹಿವಾಟು ಕುಸಿದಿದ್ದು, ಎಂದಿನಂತೆ ವ್ಯಾಪಾರ ವಾಗುತ್ತಿಲ್ಲ ಎಂಬುದು ವ್ಯಾಪಾರಿಗಳ ನೋವಾದರೆ, ವೇತನ ಪೂರ್ಣ ಬರಿ¤ಲ್ಲ ಎಂಬುದು ನೌಕರರು, ಕಾರ್ಮಿಕರ ಅಳಲು. ಬದಕು ಕಟ್ಟಿಕೊಳ್ಳಲು ದುಡಿಯಲೇ ಬೇಕಾಗಿದೆ. ಹೀಗಾಗಿ ಬೆಂಗಳೂರು, ಮೈಸೂರು ಎನ್ನದೆಉದ್ಯೋಗ, ವ್ಯಾಪಾರಕ್ಕೆ ಹೋಗುವುದು ಅನಿ ವಾರ್ಯ ಎಂಬುವುದು ಜನರ ಅಭಿಪ್ರಾಯ. ಮಾಸ್ಕ್ ಧರಿಸದಿರುವುದರ ಬಗ್ಗೆ ಪ್ರತಿಕ್ರಿಯಿ ಸಲು ಜನತೆ ನಿರಾಕರಿಸಿದ್ದಾರೆ. ಲಾಕ್‌ಡೌನ್ ವೇಳೆ ಸಕ್ರಿಯವಾಗಿದ್ದ ರಾಜಕೀಯ ಪಕ್ಷಗಳು ನೇಪಥ್ಯಕ್ಕೆ ಸರಿದಿವೆ. ಸಮಾಜ ಸೇವಾ ಸಂಘ, ಸಂಸ್ಥೆಗಳು ಸಹ ಕೋವಿಡ್ ಅರಿವು ಮೂಡಿಸುವುದನ್ನುಕೈ ಬಿಟ್ಟಿದ್ದಾರೆ.
ಸೋಂಕಿನಬಗ್ಗೆಜಿಲ್ಲೆಯ ಬಹುತೇಕ ಜನರಲ್ಲಿ ಅರಿವಿದೆ. ಆರೋಗ್ಯಇಲಾಖೆ ನಿರಂತರಜಾಗೃತಿ ಮೂಡಿಸುತ್ತಿದೆ.ಆದರೆಜನತೆ ಸಾಮಾಜಿಕಅಂತರ, ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ
.ಡಾ.ನಿರಂಜನ್‌ಡಿ.ಎಚ್.ಒ, ರಾಮನಗರ ಜಿಲ್ಲೆ