Advertisement

ರಾಜ್ಯದ 27 ಜೈಲುಗಳಲಿ 1,478 ಮಂದಿಗೆ ಸೋಂಕು

07:32 PM Aug 26, 2020 | Suhan S |

ಪುಣೆ, ಆ. 25: ರಾಜ್ಯದ ಪ್ರಮುಖ 27 ಜೈಲುಗಳಲ್ಲಿ ಒಟ್ಟು 1,478 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, ಈ ಪೈಕಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಹಾರಾಷ್ಟ್ರ ಜೈಲು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಈವರೆಗೆ ಒಟ್ಟು 1,166 ಕೈದಿಗಳು ಮತ್ತು 312 ಜೈಲು ಸಿಬಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಆರು ಮಂದಿ ಕೈದಿಗಳು ಸಾವನ್ನಪ್ಪಿದ್ದಾರೆ. ಕೈದಿಗಳಿಗೆ ಸಂಬಂಧಿಸಿದಂತೆ 219 ಸೋಂಕಿನ ಪ್ರಕರಣಗಳಲ್ಲಿ ನಾಗಪುರ ಜೈಲು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.

ಅದರ ಬಳಿಕ ಪುಣೆಯ ಯೆರವಾಡಾ ಜೈಲಿನಲ್ಲಿ ಒಟ್ಟು 190 ಕೈದಿಗಳು ಸೋಂಕಿಗೆ ತುತ್ತಾಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಯಲು ಒಟ್ಟು 10,536 ಕೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ಒಟ್ಟು 26,408 ಕೈದಿಗಳನ್ನು ರಾಜ್ಯದ ವಿವಿಧ ಜೈಲುಗಳಲ್ಲಿ ಇರಿಸಲಾಗಿದೆ.

ಎಲ್ಲಿ ಎಷ್ಟು ಪ್ರಕರಣ :  ಮುಂಬಯಿಯ ಆರ್ಥರ್‌ ರೋಡ್‌ ಜೈಲಿ ನಲ್ಲಿ 182 ಮತ್ತು ಸಾಂಗ್ಲಿ ಜೈಲಿನಲ್ಲಿ 145 ಪ್ರಕರಣ ಪತ್ತೆಯಾಗಿವೆ. ಈವರೆಗೆ ನಾಗಪುರದಲ್ಲಿ 62, ಮುಂಬಯಿಯಲ್ಲಿ 46, ಥಾಣೆಯಲ್ಲಿ 35, ಔರಂ ಗಾಬಾದ್‌ನಲ್ಲಿ 34, ಕಲ್ಯಾಣ್‌ನಲ್ಲಿ 31 ಮತ್ತು ಯೆರಾವಾಡ ಜೈಲಿನಲ್ಲಿ 26 ಜೈಲು ಸಿಬಂದಿ ಸೋಂಕಿಗೆ ಒಳಗಾಗಿದ್ದಾರೆ. ಒಟ್ಟು 1,166 ಕೈದಿಗಳಲ್ಲಿ 848 ಕೈದಿಗಳು ಮತ್ತು 312 ಜೈಲು ಸಿಬಂದಿಗಳಲ್ಲಿ 272 ಸಿಬಂದಿಯನ್ನು ಗುಣಪಡಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next