Advertisement

ಕೋವಿಡ್ ಸೋಂಕಿನ 2ನೇ ಅಲೆ ಎದುರಿಸಲು ಸರ್ವ ಸಿದ್ಧತೆ

07:12 PM Nov 22, 2020 | Suhan S |

ಪುಣೆ, ನ. 21: ಕೋವಿಡ್ ವೈರಸ್‌ನ ಎರಡನೇ ಅಲೆಯನ್ನು ನಿಭಾಯಿಸಲು ಪುಣೆ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯು 50,000 ಆ್ಯಂಟಿಜೆನ್‌ (ಕ್ಷಿಪ್ರ) ಪರೀಕ್ಷಾ ಕಿಟ್‌ಗಳ ಖರೀದಿಗೆ ಆದೇಶಿಸಿದೆ. ಕೇಂದ್ರ ತಂಡವು ಡಿಸೆಂಬರ್‌ ಮತ್ತು ಜನವರಿಯ ಅವಧಿಯಲ್ಲಿ ನಗರದಲ್ಲಿ ಸೋಂಕಿನ 2ನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಊಹಿಸಿದ್ದು, ಸ್ವ್ಯಾಬ್‌ ಸಂಗ್ರಹ ಮತ್ತು ಆರ್‌ಟಿ-ಪಿಸಿಆರ್‌ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಪುಣೆ ಮಹಾನಗರ ಪಾಲಿಕೆ ನಿರ್ಧರಿಸಿದೆ.

Advertisement

ದೀಪಾವಳಿಯ ಸಂದರ್ಭದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮನೆಯಿಂದ ಹೊರಬಂದಿರುವುದರಿಂದ ಪುಣೆ ಮನಪಾ ಸೋಂಕುಗಳ ಹೆಚ್ಚಳವಾಗುವ ಸಾದ್ಯತೆಗಳಿವೆ ಎಂದಿದೆ. ಕೋವಿಡ್ ಪಾಸಿಟಿವ್‌ ಪ್ರಕರಣಗಳ ಪ್ರಮಾಣ ಕಡಿಮೆಯಾದ ಅನಂತರ ದೈನಂದಿನ ಪರೀಕ್ಷೆಗಳ ಸಂಖ್ಯೆಯನ್ನು ಸುಮಾರು 1,000ರಿಂದ 1,500ಕ್ಕೆ ಇಳಿದಿದ್ದು, ಸರಾಸರಿ 200 ರೋಗಿಗಳು ಸಕಾರಾತ್ಮಕವಾಗಿ ಕಂಡುಬಂದಿದ್ದಾರೆ. ನವೆಂಬರ್‌ 25ರ ಅನಂತರ ಮತ್ತೆ ಸಕಾರಾತ್ಮಕ ರೋಗಿಗಳ ಸಂಖ್ಯೆ ಏರಿಕೆಯಾಗಬಹುದು. ಡಿಸೆಂಬರ್‌ ಮತ್ತು ಜನವರಿಯಲ್ಲಿ ಎರಡನೇ ತರಂಗವನ್ನು ಊಹಿಸುವುದರೊಂದಿಗೆ, ಸಂಭವನೀಯ ಉಲ್ಬಣವನ್ನು ನಿಭಾಯಿಸಲು ನಾವು ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ. ಪಾಸಿಟಿವ್‌ ಪ್ರಕರಣಗಳ ಕುಸಿತ ಹಿನ್ನೆಲೆ ಸದ್ಯ ಪಿಎಂಸಿ ತನ್ನ 21 ಸ್ವ್ಯಾಬ್‌ ಕೇಂದ್ರಗಳಲ್ಲಿ ಮೂರು ಕೇಂದ್ರಗಳನ್ನು ಮುಚ್ಚಿದೆ. ಪ್ರಕರಣಗಳ ಏರಿಕೆಯಾದರೆ ಎಲ್ಲ 21 ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಪಿಎಂಸಿಯ ಸಹಾಯಕ ಆರೋಗ್ಯ ಮುಖ್ಯಸ್ಥ ಡಾ| ಸಂಜೀವ್‌ ವಾವಾರೆ ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಸಂಭವನೀಯ ಎರಡನೇ ಅಲೆಯಲ್ಲಿ ಪ್ರತಿದಿನ ಸುಮಾರು 2,500 ಹೊಸ ಕೋವಿಡ್  ಪ್ರಕರಣಗಳು ಕಂಡುಬರಲಿದ್ದು, ಅದಕ್ಕಾಗಿ ಸುಮಾರು 6,000 ದೈನಂದಿನ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಈ ಪ್ರಕರಣಗಳನ್ನು ನಿರ್ವಹಿಸಲು ನಾಗರಿಕ ಸಂಸ್ಥೆ ಈಗಾಗಲೇ 2,500 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಿದೆ ಎಂದು ತಿಳಿಸಿದ್ದಾರೆ. ಕಳೆದ ವಾರ ರಾಜ್ಯ ಆರೋಗ್ಯ ಸೇವೆಗಳ ನಿರ್ದೇಶನಾಲಯ ಹೊರಡಿಸಿದ ಸುತ್ತೋಲೆಯಲ್ಲಿ ಸಾಂಕ್ರಾಮಿಕ ರೋಗದ 2ನೇ ಅಲೆ ಜನವರಿ ಮತ್ತು ಫೆಬ್ರವರಿಯಲ್ಲಿ ಸಂಭವಿಸುತ್ತದೆ ಎಂದು ಹೇಳಿದೆ.

ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಇದು ಸಲಹೆ ನೀಡಿದೆ. ಯುರೋಪಿಯನ್‌ ರಾಷ್ಟ್ರಗಳು ಪ್ರಸ್ತುತ ಕೋವಿಡ್‌ -19ರ 2ನೇ ಅಲೆಗೆ ಸಾಕ್ಷಿಯಾಗುತ್ತಿವೆ. ಅದರ ಆಧಾರದ ಮೇಲೆ ನಾವು ಮಹಾರಾಷ್ಟ್ರದಲ್ಲಿ ಜನವರಿ, ಫೆಬ್ರವರಿಯಲ್ಲಿ 2ನೇ ಅಲೆಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖೀಸಲಾಗಿದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಸಡಿಲತೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ಇದು ಜಿಲ್ಲಾಡಳಿತ, ಪುರಸಭೆ ಮತ್ತು ವೈದ್ಯಕೀಯ ಅಧಿಕಾರಿಗಳನ್ನು ಕೇಳಿದ್ದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆಗಳನ್ನು ನಡೆಸಲು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next