Advertisement

10 ವರ್ಷಕ್ಕಿಂತ ಕಡಿಮೆ ವಯಸ್ಸಿನ 11 ಮಕ್ಕಳು ಸೋಂಕಿಗೆ ಬಲಿ

05:03 PM Aug 05, 2020 | Suhan S |

ಮುಂಬಯಿ, ಆ. 4: ನಗರದಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೋವಿಡ್ ಮಹಾಮಾರಿಗೆ ಸಾಚನ್ನಪ್ಪುತ್ತಿರುವವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಈಗಾಗಲೇ ನಗರದಲ್ಲಿ 2,000ಕ್ಕೂ ಅಧಿಕ ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿಗೆ ಸಾವನ್ನಪ್ಪಿದ ಹೆಚ್ಚಿನ ಮಕ್ಕಳು ಇತರ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

Advertisement

ಸೋಂಕಿಗೆ ಗಂಡು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿದ್ದು. ನಗರದ ಸೋಂಕಿತರ ಪೈಕಿ ಸುಮಾರು ಶೇ. 2ರಷ್ಟು 10 ವರ್ಷದೊಳಗಿನ ಮಕ್ಕಳು ಸೋಂಕಿಗೆ ಕಾರಣರಾಗಿದ್ದಾರೆ. 11ರಿಂದ 20 ವಯಸ್ಸಿನ 3,806 ಮಕ್ಕಳು ಸೋಂಕಿಗೆ ಒಳಗಾಗಿದ್ದು, 23 ಮಕ್ಕಳು ಬಲಿಯಾಗಿದ್ದಾರೆ. ರಾಜ್ಯದಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 17,000 ಮಕ್ಕಳಲ್ಲಿ ಸೋಂಕು ಕಂಡುಬಂದಿದ್ದು, ಇದು ರಾಜ್ಯದ 4.4 ಲಕ್ಷ ಪ್ರಕರಣಗಳಲ್ಲಿ ಶೇ. 4 ರಷ್ಟಿದೆ. ಮಕ್ಕಳಲ್ಲಿ ಸಾವಿನ ಪ್ರಮಾಣವು ಶೇ. 0.5ರಷ್ಟಿದೆ ಎಂದು ಅಧಿ ಕಾರಿಗಳು ತಿಳಿಸಿದ್ದಾರೆ.

ಪರೇಲ್‌ನ ಕೆಇಎಂ ಆಸ್ಪತ್ರೆಯ ಪೀಡಿಯಾಟ್ರಿಕ್ಸ್‌ ವಿಭಾಗದ ಮುಖ್ಯಸ್ಥ ಡಾ| ಮುಖೇಶ್‌ ಅಗರ್ವಾಲ್‌ ಮಾತನಾಡಿ, ಆಸ್ಪತ್ರೆಯಲ್ಲಿ ಮಕ್ಕಳ 3 ಸಾವು ಸಂಭವಿಸಿದ್ದು, ಮೆದುಳಿನ ಕಾಯಿಲೆ, ಮೂಳೆ ಸೋಂಕು ಮತ್ತು ನ್ಯುಮೋನಿಯಾ ಮತ್ತು ಸಂಬಂಧಿತ ರೋಗದೊಂದಿದೆ ಕೋವಿಡ್ ಹಿನ್ನೆಲೆ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಈ ಎಲ್ಲ ಸಾವುಗಳು ಅವರ ಪ್ರಾಥಮಿಕ ಆರೋಗ್ಯ ಸಮಸ್ಯೆಗಳಿಂದ ಸಂಬವಿಸಿವೆ. ಮಕ್ಕಳು ರೋಗದ ಅತ್ಯಂತ  ಸೌಮ್ಯ ಸ್ವರೂಪದಿಂದ ಬಳಲುತ್ತಿದ್ದು, ಹೆಚ್ಚಾಗಿ ಮೂರರಿಂದ ನಾಲ್ಕು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next