ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ 245 ಮಂದಿಗೆ ಕೊರೊನಾ ದೃಢಪಟ್ಟಿದೆ. 6 ಮಂದಿ ಸಾವನ್ನಪ್ಪಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 261 ಮಂದಿ ಗುಣಮುಖರಾಗಿದ್ದಾರೆ. ಸದ್ಯ 5,579 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾ.ಪಂ. ವ್ಯಾಪ್ತಿಯಲ್ಲಿ ಪರೀಕ್ಷೆ
ಜಿಲ್ಲೆಯಲ್ಲಿ ಈವರೆಗೆ ಒಟ್ಟು 24,557 ಮಂದಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ದ.ಕ. ಜಿ.ಪಂ. ಸೋಮವಾರದಿಂದ ಪ್ರತಿ ಗ್ರಾ.ಪಂ. ಮಟ್ಟದಲ್ಲಿ ಕೊರೊನಾ ಪರೀಕ್ಷೆ ಹಮ್ಮಿಕೊಂಡಿದ್ದು, ಸೋಮವಾರ ದ.ಕ. ಜಿಲ್ಲೆಯಲ್ಲಿ 162 ಮಂದಿಗೆ ಕೊರೊನಾ ದೃಢಪಟ್ಟಿದೆ.
ಜಿಲ್ಲೆಯ ವಿವಿಧ ಗ್ರಾ.ಪಂ.ಗಳ ವ್ಯಾಪ್ತಿ, ವೆನಾÉಕ್ ಆಸ್ಪತ್ರೆ ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಸೋಮವಾರ ಒಟ್ಟು 3,753 ಮಂದಿ ಪರೀಕ್ಷೆ ಮಾಡಿಸಿಕೊಂಡಿದ್ದರು. ಮಂಗಳೂರು ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ 726 ಮಂದಿಗೆ ರ್ಯಾಟ್ (75 ದೃಢ), 424 ಮಂದಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಸುಳ್ಯದಲ್ಲಿ 277 ಮಂದಿ ರ್ಯಾಟ್ (31 ದೃಢ), 242 ಆರ್‌ಟಿಪಿಸಿಆರ್, ಬೆಳ್ತಂಗಡಿಯಲ್ಲಿ 311 ರ್ಯಾಟ್ (14 ದೃಢ), 137 ಆರ್‌ಟಿಪಿಸಿಆರ್, ಪುತ್ತೂರಿನಲ್ಲಿ 331 ರ್ಯಾಟ್ (19 ದೃಢ), 357 ಆರ್‌ಟಿಪಿಸಿಆರ್, ಬಂಟ್ವಾಳದಲ್ಲಿ 105 ರ್ಯಾಟ್ (7 ದೃಢ), 102 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಇದಲ್ಲದೆ ವೆನ್ಲಾಕ್‌ನಲ್ಲಿ 10 ರ್ಯಾಟ್, ಲೇಡಿಗೋಶನ್‌ನಲ್ಲಿ 69 ರ್ಯಾಟ್ (16 ದೃಢ), 50 ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ.