ಮಂಡ್ಯ: ಮಂಗಳವಾರ ಕೋವಿಡ್ ದಿಂದ ನೂರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ, 197 ಮಂದಿಗೆ ಸೋಂಕು ದೃಢಪಟ್ಟಿದೆ. ಮಂಡ್ಯ 115, ಮದ್ದೂರು 5, ಮಳವಳ್ಳಿ 23, ಪಾಂಡವಪುರ 14, ಶ್ರೀರಂಗಪಟ್ಟಣ 18, ಕೆ.ಆರ್ .ಪೇಟೆ 5, ನಾಗಮಂಗಲ 16 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ಆವರಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲಾಸ್ಪತ್ರೆ ಹಾಗೂ ತಾಲೂಕಿನ ಕೋವಿಡ್ ಆಸ್ಪತ್ರೆಗಳಲ್ಲಿ 708, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 298 ಹಾಗೂ ಹೋಂ ಐಸೋಲೇಷನ್‌ನಲ್ಲಿ 731 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆ ಮೃತ: ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ ಗೆ ಮಹಿಳೆಯೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 63ಕ್ಕೇರಿದೆ. ಮಂಡ್ಯ ತಾಲ್ಲೂಕಿನ 82 ವರ್ಷದ ಮಹಿಳೆ ಹೃದಯ ಸಂಬಂಧಿ ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನೂರು ಮಂದಿ ಬಿಡುಗಡೆ: ಮಂಡ್ಯ 39, ಮದ್ದೂರು 9, ಪಾಂಡವಪುರ 18, ಶ್ರೀರಂಗಪಟ್ಟಣ 4, ಕೆ.ಆರ್.ಪೇಟೆ 2 ಹಾಗೂ ನಾಗಮಂಗಲದ 28 ಮಂದಿ ಸೇರಿದಂತೆ ಒಟ್ಟು 100 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 3,841 ಮಂದಿ ಗುಣಮುಖರಾಗಿದ್ದು, 1737 ಸಕ್ರಿಯ ಪ್ರಕರಣಗಳಿವೆ.
ಒಂದೇ ದಿನ 3,603 ಮಂದಿಗೆ ಪರೀಕ್ಷೆ: ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 3,603 ಮಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ. 2,799 ರ್ಯಾಪಿಡ್ ಪರೀಕ್ಷೆ ಹಾಗೂ 804 ಆರ್ ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ಇದುವರೆಗೂ 8,0840 ಮಂದಿಗೆ ಪರೀಕ್ಷೆಗೊಳಪಡಿಸಲಾಗಿದೆ.
5642ಕ್ಕೇರಿದ ಸೋಂಕಿತರು: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5642ಕ್ಕೇರಿದೆ. ಮಂಡ್ಯ 1,778, ಮದ್ದೂರು 772, ಮಳವಳ್ಳಿ 595, ಪಾಂಡವಪುರ 545, ಶ್ರೀರಂಗಪಟ್ಟಣ 593, ಕೆ.ಆರ್.ಪೇಟೆ 779, ನಾಗಮಂಗಲ 522 ಸೋಂಕಿನ ಪ್ರಕರಣಗಳು ದಾಖಲಾಗಿವೆ.