ಕಾಸರಗೋಡು: ಕೋವಿಡ್ ತಡೆ ಚಟುವಟಿಕೆಯಲ್ಲಿ ಕಾಸರಗೋಡು ಜಿಲ್ಲೆ ಮತ್ತೂಮ್ಮೆ ಮಾದರಿಯಾಗಿದೆ.
ಪ್ರತಿದಿನ ತಪಾಸಣೆ, ವ್ಯಾಕ್ಸಿನೇಶನ್‌ನಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದೆ. ಕೋವಿಡ್ ಸಂಬಂಧ ಮೃತರ ಸಂಖ್ಯೆ ಕಡಿಮೆ ಹೀಗೆ ತಡೆ ಚಟುವಟಿಕೆಗಳ ಎಲ್ಲ ವಿಚಾರಗಳಲ್ಲೂ ಜಿಲ್ಲೆ ಮುಂಚೂಣಿಯಲ್ಲಿದೆ.
ಜಿಲ್ಲೆಯ ಪ್ರತಿದಿನ ತಪಾಸಣೆ ಶೇ.142 ಆಗಿದೆ. 45 ವರ್ಷಕ್ಕಿಂತ ಅಧಿಕ ವಯೋಮಾನದ ಮಂದಿಗೆ ಲಸಿಕೆ ನಿಡಿಕೆಯಲ್ಲಿ ಶೇ.98 ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಕೋವಿಡ್ ರೋಗ ಬಾಧಿತರಲ್ಲಿ ಶೇ. 0.3 ಮಂದಿ ಮೃತಪಟ್ಟಿದ್ದಾರೆ. ಬಹುತೇಕ ಮಂದಿ ಸಂದಭೋìಚಿತ ಶುಶ್ರೂಷೆ ಲಭಿಸಿದ ಕಾರಣ ಪೂರ್ಣ ಗುಣಮುಖರಾಗಿದ್ದಾರೆ. ವೈಜ್ಞಾನಿಕ ತಡೆ ಚಟುವಟಿಕೆಗಳು ರೋಗ ಹೆಚ್ಚಳವನ್ನು ಗಮನಾರ್ಹ ರೂಪದಲ್ಲಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಒಂದು ವಾರ ದಿಂದ ಪ್ರತಿದಿನ 4 ಸಾವಿರ ಕೋವಿಡ್ ತಪಾಸಣೆ ನಡೆಸಲು ಸರಕಾರ ತೀರ್ಮಾನಿಸಿತ್ತು. ಜಿಲ್ಲೆಯಲ್ಲಿ ಪ್ರತಿದಿನ 5,400 ಕ್ಕಿಂತ ಅಧಿಕ ತಪಾಸಣೆಗಳು ಪ್ರತಿದಿನ ನಡೆಯುತ್ತಿವೆ. ಅತ್ಯಧಿಕ ರೋಗ ಬಾಧಿತರಿರುವ ಪ್ರದೇಶಗಳನ್ನು ಪತ್ತೆಮಾಡಿ ಆಯಾ ವಲಯಗಳಲ್ಲಿ ಮಾತ್ರ ಸ್ಟ್ರಾಟೆಡ್ ಮಲ್ಟಿ ಸ್ಟೇಜ್ ರಾಂಡಂ ಸಾಂಪ್ಲಿಂಗ್ ತಪಾಸಣೆ ಕ್ರಮ ಜಿಲ್ಲೆಯಲ್ಲಿ ಅನುಷ್ಠಾನದಲ್ಲಿದೆ. ಜಿಲ್ಲೆಯ 8 ಆರೋಗ್ಯ ಬ್ಲಾಕ್‌ಗಳ 777 ವಾರ್ಡ್‌ಗಳಿಗೂ ತಪಾಸಣೆಗಳನ್ನು ವಿಸ್ತರಿಸಲಾಗಿದೆ.
7 ದಿನಗಳ ಅನಂತರ ಮತ್ತೆ ತಪಾಸಣೆ ನಡೆಸುವ ರೀತಿ ಇವನ್ನು ಸಜ್ಜುಗೊಳಿಸಲಾಗಿದೆ. ಸಾರ್ವಜನಿಕರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿ ಸಲಾಗು ತ್ತದೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆ, ಟಾಟಾ ಕೋವಿಡ್ ಆಸ್ಪತ್ರೆಗಳಲ್ಲಿ ಉನ್ನತ ಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ.
3ನೇ ಅಲೆ ಬಾರದಂತೆ ಜಾಗ್ರತೆ ಪಾಲಿಸಿ :ಕೋವಿಡ್ 3ನೇ ಅಲೆ ತಲೆದೋರದಂತೆ ಜಾಗ್ರತೆ ಪಾಲಿಸ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ.ಸಜಿತ್ ಬಾಬು ತಿಳಿಸಿದರು. ಕಾಸರಗೋಡು ಜಿಲ್ಲಾ ಮಟ್ಟದ ಕೊರೊನಾ ಕೋರ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡೆಲ್ಟಾ ಪ್ಲಸ್ ಸೋಂಕು ಒಂದೊಮ್ಮೆ ಜಿಲ್ಲೆ ಯಲ್ಲಿ ವರದಿಯಾದರೆ ಮಕ್ಕಳ ಮೇಲೆ ಅದು ಬೀರಬಹುದಾದ ಪ್ರಭಾವ ಕುರಿತು ಪರಿಣತರು ನೀಡಿರುವ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಕೂಡದು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ. ರಾಜೀವ್, ಹೆಚ್ಚುವರಿ ದಂಡನಾಧಿಕಾರಿ ಅತುಲ್ ಎಸ್. ನಾಥ್, ಜಿಲ್ಲಾ ವೈದ್ಯಾಧಿಕಾರಿ ಡಾ.ಕೆ.ಆರ್.ರಾಜನ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಎ.ವಿ. ರಾಮದಾಸ್‌ಉಪಸ್ಥಿತರಿದ್ದರು.