ಕನಕಪುರ: ಶನಿವಾರ ತಾಲೂಕಿನಲ್ಲಿ 16 ಕೋವಿಡ್ ಪ್ರಕರಣ ವರದಿಯಾಗಿದ್ದು ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಕಸಬಾ ಹೋಬಳಿಯ ಚಿಕ್ಕಮುದವಾಡಿ ಪಿಎಸ್‌ಇ ವ್ಯಾಪ್ತಿಯಲ್ಲಿ 1, ಶಿವನಹಳ್ಳಿ 1, ಹಾರೋಹಳ್ಳಿ 6, ಸಾತನೂರು 4, ನಗರ ದಲ್ಲಿ 3 ಸೇರಿ 16 ಕೊರೊನಾ ಪ್ರಕರಣ ಕಂಡು ಬಂದಿವೆ. ಸೋಂಕಿಗೆ ಶನಿವಾರ
ತಾಲೂ ಕಿನಲ್ಲಿ ಇಬ್ಬರು ಕೋವಿಡ್ ಗೆ ಮೃತ ಪಟ್ಟಿದ್ದಾರೆ. ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದ ಮುದ್ದು ಮಾರೇ ಗೌಡ(65), ತಾಲೂಕಿನ ಕೋಡಿಹಳ್ಳಿ ಶಂಭುಲಿಂಗೇಗೌಡ(68) ಮೃತಪಟ್ಟ ದುರ್ದೈವಿಗಳು. ಇಬ್ಬರಿಗೂ ಕೆಲ ದಿನಗಳ ಹಿಂದೆ ಕೋವಿಡ್ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕೋಡಿಹಳ್ಳಿಯ ಶಂಭುಲಿಂಗೇ ಗೌಡ ಅವರನ್ನು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ ಮತ್ತು ಅಚ್ಚಲು ಗ್ರಾಮದ ಮುದ್ದುಮಾರೇಗೌಡ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ, ಶನಿವಾರ ಚಿಕಿತ್ಸೆ ಫಲಕಾರಿಯಾಗದೆಇಬ್ಬರು ಮೃತ ಪಟ್ಟಿದ್ದಾರೆ. ಗ್ರಾಪಂಅಧಿಕಾರಿಗಳು ಅಂತ್ಯಸಂಸ್ಕಾರ ನೆರವೇರಿಸಿದರು.
71 ಪಾಸಿಟಿವ್ ರಾಮನಗರ: ಜಿಲ್ಲೆಯಲ್ಲಿ ಪ್ರಕಟವಾದ ಫಲಿತಾಂಶಗಳಲ್ಲಿ 71 ಪಾಸಿಟಿವ್ ಪ್ರಕರಣ, 542 ನೆಗ ಟಿವ್ ವರದಿಯಾಗಿದೆ. ಪಾಸಿ ಟಿವ್ ಫಲಿತಾಂಶಗಳ ಪೈಕಿ ಚನ್ನಪಟ್ಟಣ 26, ಕನಕಪುರ 6, ಮಾಗಡಿ 10, ರಾಮನಗರ 29 ಪ್ರಕರಣ ಸೇರಿ ವೆ.
ಸೋಂಕಿ ತ ರನ್ನು ಜಿಲ್ಲಾ ವ್ಯಾಪ್ತಿಯ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದೇ ದಿನ ಸೋಂಕಿನಿಂದ ಗುಣಮುಖರಾಗಿ 77 ಮಂದಿ ಆಸ್ಪತ್ರೆಗಳಿಂದ ಬಿಡುಗಡೆ ಯಾಗಿದ್ದಾರೆ.
ಕೋವಿಡ್ ಸೋಂಕಿಗೆ ಇಲ್ಲಿಯವ ರೆಗೆ ಒಟ್ಟು 52 ಮಂದಿ ಬಲಿಯಗಿದ್ದರೆ. ಮೃತ ಪಟ್ಟ ವರ ಪೈಕಿ ಚನ್ನಪಟ್ಟ ಣ 12, ಕನಕಪುರ 11, ಮಾಗಡಿ 14, ರಾಮನಗ ರ 15 ಮಂದಿ ಸಾವನ್ನ ಪ್ಪಿದ್ದಾರೆ. ಜಿಲ್ಲೆ ಯಲ್ಲಿ ಇಲ್ಲಿ ಯ ವ ರೆಗೆ 33921 ನೆಗೆ ಟಿವ್ ಪ್ರಕರಣ ವರದಿಯಾಗಿವೆ. ಇನ್ನು 278 ಪ್ರಕ ಣಗಳ ವರದಿ ಬರಬೇಕಾಗಿದೆ.