ದಾವಣಗೆರೆ: ಜೆಲ್ಲೆಯಲ್ಲಿ ಶನಿವಾರ ಕೋವಿಡ್ ನಿಂದ ಏಳು ಜನರು ಬಲಿಯಾಗಿದ್ದಾರೆ. ಕೋವಿಡ್ ನೊಂದಿಗೆ ಆಧಿಕ ರಕ್ತದೊತ್ತಡ ಇತರೆ ಸಮಸ್ಯೆಯಿಂದ ಬಳಲುತ್ತಿದ್ದ ದಾವಣಗೆರೆಯ ಆಂಜನೇಯ ಮಿಲ್ ಕ್ವಾಟರ್ಸ್ ನಿವಾಸಿ 68 ವರ್ಷದ ವೃದ್ಧೆ (380761), ಹೊನ್ನಾಳಿ ತಾಲೂಕಿನ ನ್ಯಾಮತಿಯ 65 ವರ್ಷದ ವೃದ್ಧ (ರೋಗಿ ನಂಬರ್ 375844), ದಾವಣಗೆರೆ ಬೂದಿಹಾಳ್ ರಸ್ತೆ ನಿವಾಸಿ 34 ವರ್ಷದ ವ್ಯಕ್ತಿ (ರೋಗಿ ನಂಬರ್ 375846), ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಪುಣಬಗಟ್ಡದ 35 ವರ್ಷದ ವ್ಯಕ್ತಿ (ರೋಗಿ ನಂಬರ್ 303049), ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ 60 ವರ್ಷದ ವೃದ್ಧ (ರೋಗಿ ನಂಬರ್ 358881), ದಾವಣಗೆರೆ ವಿನೋಬನಗರದ 66 ವರ್ಷದ ವೃದ್ಧೆ (ರೋಗಿ ನಂಬರ್ 335555), ಕೆ.ಬಿ. ಬಡಾವಣೆಯ 83 ವರ್ಷದ ವೃದ್ಧೆ (ರೋಗಿ ನಂಬರ್ 367132) ಮೃತಪಟ್ಟವರು.
ಈವರೆಗೆ ಜಿಲ್ಲೆಯಲ್ಲಿ ಕೊರೊನಾದಿಂದ 213 ಜನರು ಮೃತಪಟ್ಟಿದ್ದಾರೆ. ನಿನ್ನೆ ದಾಖಲೆ ಪ್ರಮಾಣದಲ್ಲಿ 406 ಪ್ರಕರಣ ಪತ್ತೆಯಾಗಿವೆ. ಕೋವಿಡ್ ಸೋಂಕು ಹರಡುವಿಕೆ ನಂತರ ಇದೇ ಮೊದಲ ಬಾರಿಗೆ ಒಂದೇ ದಿನ 400 ಕ್ಕೂ ಅಧಿಕ ಪ್ರಕರಣ ದೃಢಪಟ್ಟಿರುವುದು ಈವರೆಗಿನ ಸೋಂಕು ರೋಗಿ ನಂಬರ್ 382366 ಸಂಪರ್ಕದಿಂದ ಚನ್ನಗಿರಿ ತಾಲೂಕಿನ 38 ವರ್ಷದ ವ್ಯಕ್ತಿ (ರೋಗಿ ನಂಬರ್ 398500), ಅಸ್ತಾಪನಹಳ್ಳಿಯ 22 ವರ್ಷದ ಮಹಿಳೆ (ರೋಗಿ ನಂಬರ್ 398496), ರೋಗಿ ನಂಬರ್ 343465 ಸಂಪರ್ಕದಿಂದ ಹರಿಹರದ ಮಲೇಬೆನ್ನೂರು ಪಟ್ಟಣದ 56 ವರ್ಷದ ವ್ಯಕ್ತಿ (ರೋಗಿ ನಂಬರ್ 398495) ಸೋಂಕು ಕಾಣಿಸಿಕೊಂಡಿದೆ.
ಹೊನ್ನಾಳಿ ತಾಲೂಕಿನ ಕುಂಕುವ ಗ್ರಾಮದ 40 ವರ್ಷದ ವ್ಯಕ್ತಿ(ರೋಗಿ ನಂಬರ್ 398494) ಯಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ದಾವಣಗೆರೆ ಶಿವಕುಮಾರ ಸ್ವಾಮಿ ಬಡಾವಣೆಯ 65 ವರ್ಷದ ವೃದ್ಧೆ (ರೋಗಿ ನಂಬರ್ 398018), ಲೆನಿನ್ ನಗರದ 40 ವರ್ಷದ ಮಹಿಳೆ (ರೋಗಿ ನಂಬರ್ 398017), ಸರಸ್ವತಿ ಬಡಾವಣೆಯ 42 ವರ್ಷದ ವ್ಯಕ್ತಿ(ರೋಗಿ ನಂಬರ್ 398106), ರಾಣೆಬೆನ್ನೂರಿನ 64 ವರ್ಷದ ವೃದ್ಧ (ರೋಗಿ ನಂಬರ್ 245582) ನಲ್ಲಿ ಐಎಲ್ಐನಿಂದ ಸೋಂಕು ಹರಡಿದೆ.
ದಾವಣಗೆರೆ ತಾಲೂಕಿನ ಚಿಕ್ಕಬೂದಿಹಾಳ್ ಗ್ರಾಮದ 70 ವರ್ಷದ ವೃದ್ಧ ನಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 385473 ಸಂಪರ್ಕದಿಂದ ಹೊನ್ನಾಳಿ ತಾಲೂಕಿನ ಸಾಸ್ವೇಹಳ್ಳಿ ಗ್ರಾಮದ 62 ವರ್ಷದ ವೃದ್ಧೆ(ರೋಗಿ ನಂಬರ್ 398007) ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆ ನಗರ ಮತ್ತು ತಾಲೂಕಿನ ವಿವಿಧ ಭಾಗದ 152, ಹರಿಹರದ 33, ಜಗಳೂರಿನ 26, ಚನ್ನಗಿರಿಯ 116, ಹೊನ್ನಾಳಿಯ 52 ಹೊರ ಜಿಲ್ಲೆಯ 27 ಜನರು ಸೇರಿದಂತೆ 406 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕೊರೊನಾದಿಂದ ಗುಣಮುಖರಾದ ದಾವಣಗೆರೆಯ 118, ಹರಿಹರದ 33, ಜಗಳೂರಿನ 3, ಚನ್ನಗಿರಿಯ 39, ಹೊನ್ನಾಳಿಯ 41 ಹಾಗೂ ಹೊರ ಜಿಲ್ಲೆಯ 14 ಜನರು ಸೇರಿದಂತೆ 238 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು10977 ಪ್ರಕರಣಗಳಲ್ಲಿ ಈವರೆಗೆ 7986 ಸೋಂಕಿತರು ಗುಣಮುಖರಾಗಿದ್ದಾರೆ. 2778 ಸಕ್ರಿಯ ಪ್ರಕರಣಗಳಿವೆ.