Advertisement
ಪ್ರಸ್ತುತ ಪ್ರಕರಣಗಳ ಸಂಖ್ಯೆಯನ್ನು ಮತ್ತು ಅದು ದ್ವಿಗುಣಗೊಳ್ಳುತ್ತಿರುವ ವೇಗವನ್ನು ನೋಡಿದರೆ, ದಿಲ್ಲಿ ಮತ್ತು ಮುಂಬಯಿಯ ಕನಿಷ್ಠ ಕೆಲವು ಕ್ಲಸ್ಟರ್‌ಗಳಲ್ಲಿ ಸೋಂಕಿನ 3ನೇ ಅಲೆ ಬಂದಿರುವುದು ಸ್ಪಷ್ಟ ಎಂದು ನಿರ್ಧರಿಸಬಹುದು ಎಂದು ಮಹಾರಾಷ್ಟ್ರ ಕೋವಿಡ್ ಕಾರ್ಯಪಡೆ ಸದಸ್ಯ ಡಾ| ರಾಹುಲ್ ಪಂಡಿತ್ ಹೇಳಿದ್ದಾರೆ.
Related Articles
Advertisement
ಮೊಲ್ನುಪಿರವಿರ್ ಚಿಕಿತ್ಸೆಗೆ 3,000 ರೂ.? :
ಕೊರೊನಾ ರೋಗಿಗಳಿಗೆ ತುರ್ತು ಸಂದರ್ಭಗಳಲ್ಲಿ ನೀಡಲು ಇತ್ತೀಚೆಗಷ್ಟೇ ಅನುಮತಿ ಪಡೆದ ಮೊಲು°ಪಿರವಿರ್ ಮಾತ್ರೆಯ ಮೂಲಕ ಚಿಕಿತ್ಸೆ ನೀಡಲು ಸುಮಾರು 2 ಸಾವಿರ ರೂ.ಗಳಿಂದ 3 ಸಾವಿರ ರೂ.ಗಳವರೆಗೆ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈಗಾಗಲೇ 13 ಔಷಧ ತಯಾರಕ ಸಂಸ್ಥೆಗಳಿಗೆ ಈ ಮಾತ್ರೆ ಉತ್ಪಾದಿಸಲು ಡಿಸಿಜಿಐ ಅನುಮತಿ ನೀಡಿದೆ. ನಿಯಮದ ಪ್ರಕಾರ, 5 ದಿನಗಳ ಕಾಲ ದಿನಕ್ಕೆ 2 ಬಾರಿಯಂತೆ 800 ಮಿ.ಗ್ರಾಂ. ಮೊಲು°ಪಿರವಿರ್ ಅನ್ನು ಸೋಂಕಿತರಿಗೆ ನೀಡಲಾಗುತ್ತದೆ. ಈ 5 ದಿನಗಳ ಚಿಕಿತ್ಸೆಗೆ 3 ಸಾವಿರ ರೂ.ವರೆಗೆ ವೆಚ್ಚವಾಗಬಹುದು ಎಂದು ಹೇಳಲಾಗಿದೆ.
ಒಮಿಕ್ರಾನ್‌ಗೆ ವಿಶ್ವಾದ್ಯಂತ 58 ಬಲಿ :
ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಒಮಿಕ್ರಾನ್ ಸದ್ದು ಮಾಡುತ್ತಿದ್ದು, ಈವರೆಗೆ ಮೃತಪಟ್ಟವರ ಸಂಕ್ಯೆ 58ಕ್ಕೇರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರೇ ಈ ವಿಚಾರ ತಿಳಿಸಿದ್ದಾರೆ.
ಆಕ್ಸಿಜನ್ ಲಭ್ಯತೆ: ಸಚಿವ ಗೋಯಲ್ ಸಭೆ :
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನ ಸಭೆ ನಡೆಸಿ, ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆ ಸಾಕಷ್ಟಿರುವಂತೆ ನೋಡಿಕೊಳ್ಳಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚಿಸಿದ್ದಾರೆ. ಕೊರೊನಾ ಎರಡನೇ ಅಲೆಯಲ್ಲಿ ದೇಶಾದ್ಯಂತ ಆಕ್ಸಿಜನ್ ಅಭಾವ ಕಂಡುಬಂದಿತ್ತು. ಈಗ ಮತ್ತೆ ಇದೇ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುವ ಸಲುವಾಗಿ ಸರಕಾರ ಸಿದ್ಧತೆ ನಡೆಸಿದೆ.
ಡೆಲ್ಟಾವನ್ನು ಹಿಂದಿಕ್ಕಲಿದೆ ಒಮಿಕ್ರಾನ್? :
ಸದ್ಯದಲ್ಲೇ ಒಮಿಕ್ರಾನ್ ರೂಪಾಂತರಿಯು ಡೆಲ್ಟಾವನ್ನು ಹಿಂದಿಕ್ಕಿ ಅತ್ಯಂತ ಪ್ರಬಲ ರೂಪಾಂತರಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ಸಿಂಗಾಪುರದ ತಜ್ಞರು ಅಂದಾಜಿಸಿದ್ದಾರೆ. ಒಮಿಕ್ರಾನ್ ಹಬ್ಬುತ್ತಿರುವ ವೇಗ ನೋಡಿದರೆ, ಡೆಲ್ಟಾವನ್ನು ಮೀರಿಸುವುದು ಖಚಿತ ಎಂದು ಅವರು ಹೇಳಿದ್ದಾರೆ.
ದಿಲ್ಲಿಯಲ್ಲಿ ಪರೀಕ್ಷಿಸಲಾದ ಮಾದರಿಗಳ ಪೈಕಿ ಶೇ.46ರಲ್ಲಿ ಒಮಿಕ್ರಾನ್ ಪತ್ತೆಯಾಗಿದೆ. ಈ ಸೋಂಕಿತರಲ್ಲಿ ಯಾರೂ ವಿದೇಶಗಳಿಂದ ಬಂದವರಲ್ಲ. ಇದು ಒಮಿಕ್ರಾನ್ ರೂಪಾಂತರಿಯು ಸಮುದಾಯಕ್ಕೆ ಹಬ್ಬಿರುವುದಕ್ಕೆ ಸಾಕ್ಷಿ. -ಸತ್ಯೇಂದ್ರ ಜೈನ್, ದಿಲ್ಲಿ ಆರೋಗ್ಯ ಸಚಿವ